ತುಮಕೂರು: ಜಿಲ್ಲೆಯಲ್ಲೂ ಮಾರಕ ರೋಗ ಎಚ್1ಎನ್1 ಗೆ ಬಾಣಂತಿ ಸೇರಿ ಆಕೆಯ ಅವಳಿ ನವಜಾತ ಶಿಶು ಸಾವನ್ನಪ್ಪಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆದರೆ ಈ ಸಾವನ್ನು ಆರೋಗ್ಯ ಇಲಾಖೆ ತಡವಾಗಿ ದೃಢಿಕರಿಸಿದೆ.
ತುಮಕೂರು ತಾಲೂಕಿನ ಕುಪ್ಪೂರು ಗ್ರಾಮದ ರಂಗನಾಥ್ ಅವರ ಪತ್ನಿ ಕಾವ್ಯಾ ಹಾಗೂ ಆಕೆಯ ನವಜಾತ ಅವಳಿ ಹೆಣ್ಣು ಶಿಶುಗಳು ಆಗಸ್ಟ್ 27 ರಂದೇ ಎಚ್1ಎನ್1 ಗೆ ಬಲಿಯಾಗಿದ್ದರು. ಆದರೆ ನ್ಯುಮೋನಿಯಾದಿಂದ ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತು. ಈಗ ಬಂದ ವರದಿ ಪ್ರಕಾರ ಎಚ್1ಎನ್1 ನಿಂದಲೇ ಅಸುನೀಗಿದ್ದಾರೆ ಎಂದು ಆರೋಗ್ಯ ಇಲಾಖೆ ದೃಢೀಕರಿಸಿದೆ. ಇದನ್ನು ಓದಿ: ಏನಿದು ಎಚ್1ಎನ್1? ಹಂದಿ ಜ್ವರ ಬಂದ ಮೇಲೆ ಏನು ಮಾಡಬೇಕು?
Advertisement
Advertisement
7 ತಿಂಗಳ ಗರ್ಭಿಣಿಯಾದ ಕಾವ್ಯಾರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊದಲು ತುಮಕೂರು ದೊಡ್ಡಮನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜ್ವರ ಹತೋಟಿಗೆ ಬಾರದೇ ಇದ್ದಾಗ ಕ್ರಮವಾಗಿ ಬೆಂಗಳೂರಿನ ವಾಣಿ ವಿಲಾಸ್, ಚಿನ್ಮಯ, ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಮಣಿಪಾಲ್ ಆಸ್ಪತ್ರೆಯಲ್ಲಿ ಕಾವ್ಯಾ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದರೂ ಅವು ಎಚ್1ಎನ್1 ಗೆ ಬಲಿಯಾಗಿದೆ.
Advertisement
ಆಗ ತಕ್ಷಣ ಕಾವ್ಯಾರನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಅಲ್ಲಿ ಕಾವ್ಯಾಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಸಾವಿನಿಂದಾಗಿ ಜಿಲ್ಲೆಯ ಜನತೆಯಲ್ಲಿ ಮಾರಕ ರೋಗ ಎಚ್1ಎನ್1 ರ ಭೀತಿ ಶುರುವಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv