ಉಡುಪಿ: ಮಂಗಳೂರಿನ ಕುಕ್ಕರ್ (Mangaluru Cooker Bomb Blast) ಬಾಂಬರ್ ಶಾರೀಕ್‍ನ ಹೆಜ್ಜೆ ಗುರುತು ಕೃಷ್ಣ ನಗರಿಯಲ್ಲೂ ಕಂಡುಬಂದಿದೆ. ಉಡುಪಿಯ ಶ್ರೀಕೃಷ್ಣ ಮಠ (Udupi Sri Krishna Matha) ದ ಆಸು-ಪಾಸು ಓಡಾಡಿದ್ದ ಶಾರೀಕ್, ರಥಬೀದಿಯಲ್ಲಿ, ನಗರದ ಬಸ್ ನಿಲ್ದಾಣದಲ್ಲೆಲ್ಲಾ ಅಡ್ಡಾಡಿದ್ದ. ಅಷ್ಟಕ್ಕೂ ದುಷ್ಕರ್ಮಿ ಶಾರೀಕ್ ಉಡುಪಿಗೆ ಬಂದಿದ್ಯಾಕೆ..? ಕೃಷ್ಣನಗರಿಯಲ್ಲೂ ಶಾರೀಕ್ ಬಾಂಬ್ ಸ್ಕೆಚ್ ಹಾಕಿದ್ನಾ.. ಅನ್ನೋ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
Advertisement
ಹೌದು. ಶಂಕಿತ ಉಗ್ರ ಶಾರೀಕ್ (Shariq) ನ ಬಂಡವಾಳ ಬಗೆದಷ್ಟು ಬಯಲಾಗ್ತಿದೆ. ಸದ್ಯ ಆಸ್ಪತ್ರೆ ಬೆಡ್ ಮೇಲೆ ಬಿದ್ದಿರೋ ಪಾಪಿ ವಿಚಾರಣೆಗೆ ಸಹಕರಿಸೋ ಸ್ಥಿತಿಯಲ್ಲಂತೂ ಇಲ್ಲ. ಹೀಗಾಗಿ ಖಾಕಿ ಪಡೆ ಸಿಕ್ಕ ಸಾಕ್ಷ್ಯಗಳ ಭೇದಿಸಿ ಕುಕ್ಕರ್ ಬಾಂಬರ್ ನ ಹಿಸ್ಟರಿ ಹೊರತೆಗೆಯುತ್ತಿದೆ. ಅದರಂತೆ ಶಾರೀಕ್‍ನ ಮೊಬೈಲ್ ಹಿಡಿದು ಹೊರಟ ಪೊಲೀಸರಿಗೆ ಕೃಷ್ಣ ನಗರಿಯ ಅಡ್ರೆಸ್ ಸಿಕ್ಕಿದೆ. ಇದನ್ನೂ ಓದಿ: ಬಾಂಬ್ ತಂದಿದ್ದು ಒಬ್ಬನ್ನಲ್ಲ, ಇಬ್ಬರು- ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲು
Advertisement
Advertisement
ಮಂಗಳೂರು ಸ್ಪೋಟದ ರೂವಾರಿ ಶಾರೀಕ್, 2022ರ ಅಕ್ಟೋಬರ್ 11ರಂದು ಶ್ರೀಕೃಷ್ಣ ಮಠ ಹಾಗೂ ಉಡುಪಿಯ ರಥಬೀದಿಯಲ್ಲಿ ಸುತ್ತಾಡಿರೋ ಬಗ್ಗೆ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಆಧಾರದಲ್ಲಿ ಮಂಗಳೂರು ಪೋಲಿಸರ ತಂಡ ಉಡುಪಿ ಶ್ರೀ ಕೃಷ್ಣ ಮಠ, ರಥಬೀದಿ ಪರಿಸರದಲ್ಲಿ ತಪಾಸಣೆ ನಡೆಸಿದ್ದಾರೆ. ಉಡುಪಿ ರಥಬೀದಿಯಲ್ಲಿ ಶಾರೀಕ್ ಸುತ್ತಾಡುತ್ತಿದ್ದ ವೇಳೆ ಇಲ್ಲಿಂದಲೇ ಕೆಲವರಿಗೆ ಫೋನ್ ಮಾಡಿದ್ದಾನೆ ಅನ್ನೋದು ಗೊತ್ತಾಗಿದೆ.
Advertisement
ಅದ್ಯಾವಾಗ ಶ್ರೀಕೃಷ್ಣ ಮಠಕ್ಕೂ ಉಗ್ರ ಶಾರೀಕ್ ಭೇಟಿ ನೀಡಿದ್ದ ಎಂಬ ವಿಚಾರ ತಿಳಿಯಿತೋ ಉಡುಪಿಯ ರಥಬೀದಿ ಹಾಗೂ ಉಡುಪಿ ನಾಗರಿಕರಲ್ಲಿ ಆತಂಕ ಮೂಡಿದೆ. ಹಾಗೆ ಶ್ರೀಕೃಷ್ಣ ಮಠಕ್ಕೆ ಭದ್ರತೆಯನ್ನು ಹೆಚ್ಚಿಸಬೇಕು, ಸರ್ಕಾರವೂ ಉನ್ನತ ತಂಡದಿಂದ ಭದ್ರತಾ ಸರ್ವೆ ನಡೆಸಿ ಸೂಕ್ತ ಭದ್ರತೆ ಒದಗಿಸಬೇಕೆಂದು ಉಡುಪಿ ಮಂದಿ ಆಗ್ರಹಿಸಿದ್ದಾರೆ.
ಶಾರೀಕ್ ಉಡುಪಿಗೆ ಬಂದಿದ್ದರ ಜಾಡು ಹಿಡಿದು ಹೊರಟಿರೋ ಪೊಲೀಸರಿಗೆ ಶ್ರೀಕೃಷ್ಣ ಮಠದಲ್ಲಿ ತಿಂಗಳ ಹಿಂದಿನ ಸಿಸಿಟಿವಿ ದೃಶ್ಯಗಳು ಲಭಿಸಿಲ್ಲ. ಹೀಗಾಗಿ ರಥಬೀದಿ ಸುತ್ತಲಿನ, ಅಂಗಡಿ, ಹೊಟೇಲ್ ಲಾಡ್ಜ್ ಗಳ ಸಿಸಿಟಿವಿ ದೃಶ್ಯವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ಶಾರೀಕ್‍ಗೂ ಉಡುಪಿಗೂ ಲಿಂಕ್ ಏನು ಅನ್ನೋದರ ಬಗ್ಗೆ ವಿಚಾರಣೆ ಮಾಡ್ತಿದ್ದಾರೆ.