ನವದೆಹಲಿ: ಕಳೆದ 5 ವರ್ಷಗಳಲ್ಲಿ ರಾಷ್ಟ್ರಾದ್ಯಂತ ಇರುವ ಸರ್ಕಾರೇತರ ಸಂಸ್ಥೆಗಳಿಗೆ (NGO) ಒಟ್ಟು 88,882 ಕೋಟಿ ರೂ. ವಿದೇಶದಿಂದ ದೇಣಿಗೆ ಹರಿದು ಬಂದಿದೆ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ. ಅದರಲ್ಲೂ ಕಳೆದ ವರ್ಷ ಅತಿ ಹೆಚ್ಚು ವಿದೇಶಿ ದೇಣಿಗೆಯನ್ನು (Foreign Fund) ಪಡೆಯುವ ಎರಡನೇ ರಾಜ್ಯವಾಗಿ ಕರ್ನಾಟಕ (Karnataka) ಹೊರಹೊಮ್ಮಿದೆ.
2018 ರಿಂದ 2022ರ ನಡುವೆ ಈ ದೇಣಿಗೆ ಬಂದಿದ್ದು, ಈ ಸಮಯದಲ್ಲಿ ಎನ್‍ಜಿಓಗಳು ವಿದೇಶಿ ದೇಣಿಗೆ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಅನೇಕ ಎನ್‍ಜಿಓಗಳ ಮೇಲೆ ದಾಳಿಗಳು ನಡೆದಿದ್ದವು. ಆಗ ಪತ್ತೆಯಾದ ಅಕ್ರಮಗಳನ್ವಯ ಹಲವಾರು ಎನ್‍ಜಿಓಗಳ ಪರವಾನಗಿಯನ್ನು ರದ್ದುಪಡಿಸಿತ್ತು. ಆದರೂ ವರ್ಷದಿಂದ ವರ್ಷಕ್ಕೆ ವಿದೇಶಿ ದೇಣಿಗೆಯ ಪ್ರಮಾಣ ಏರಿಕೆಯಾಗುತ್ತಲೇ ಇದೆ.
Advertisement
Advertisement
ಈ ಬಗ್ಗೆ ಗೃಹ ಸಚಿವಾಲಯವು ಮಾಹಿತಿ ನೀಡಿದ್ದು, 2018ಯಿಂದ 2022ರ ನಡುವೆ ವಿದೇಶಿ ಕೊಡುಗೆಗಳ ಕಾಯ್ದೆಯಡಿಯಲ್ಲಿ ಒಟ್ಟು 1,827 ಎನ್‍ಜಿಒಗಳು ನೋಂದಣಿಯನ್ನು ರದ್ದುಗೊಳಿಸಿದ್ದರೂ ಸಹ ರಾಷ್ಟ್ರವ್ಯಾಪಿ ಎನ್‍ಜಿಒಗಳಿಗೆ ವಿದೇಶಿ ನಿಧಿಯು 2019-20ರಲ್ಲಿ 16,306 ಕೋಟಿ ರೂ., 2020-21ರಲ್ಲಿ 17,059 ಕೋಟಿ ರೂ., 2021-22ರಲ್ಲಿ 22,085ರೂ.ಗೆ ಏರಿದೆ ಎಂದು ಬಹಿರಂಗಪಡಿಸಿದೆ.
Advertisement
2017ರಿಂದ 2021ರ ನಡುವೆ 6,677 ಎನ್‍ಜಿಓಗಳ ಲೈಸನ್ಸ್ ರದ್ದುಪಡಿಸಲಾಗಿದೆ. ಅಷ್ಟೇ ಅಲ್ಲದೇ ಸದ್ಯಕ್ಕೆ ದೇಶದಲ್ಲಿ ವಿದೇಶಿ ದೇಣಿಗೆ ಸ್ವೀಕರಿಸಲು 16,383 ಎನ್‍ಜಿಓಗಳಿಗೆ ಅರ್ಹತೆಯಿದೆ. ಇದನ್ನೂ ಓದಿ: ಮುಷ್ಕರ ವಾಪಸ್ – ಸಾರಿಗೆ ನೌಕರರ ಒಕ್ಕೂಟದಲ್ಲೇ ಭಿನ್ನಮತ ಸ್ಫೋಟ
Advertisement
ಯಾವ್ಯಾವ ರಾಜ್ಯಗಳು ಎಷ್ಟನೇ ಸ್ಥಾನ: 2019-20, 2020-2021, 2021-22ರ 3 ಹಣಕಾಸು ವರ್ಷಗಳಲ್ಲಿ ರಾಜ್ಯವಾರು ವಿಭಜಿಸಿದಾಗ ದೆಹಲಿ ಮೂಲದ ಎನ್‍ಜಿಓಗಳು ಅತಿಹೆಚ್ಚು ವಿದೇಶಿ ಹಣವನ್ನು ಪಡೆಯುತ್ತಿವೆ. 2019-20 ಹಾಗೂ 2020-21ರಲ್ಲಿ ಅತಿ ಹೆಚ್ಚು ವಿದೇಶಿಗಳನ್ನು ಹೊಂದಿದ್ದ ತಮಿಳುನಾಡು ಹೊಂದಿತ್ತು. ಆದರೆ 2021 – 22ರಲ್ಲಿ ತಮಿಳುನಾಡನ್ನು ಕರ್ನಾಟಕ ಹಿಂದಿಕ್ಕಿ ಎರಡನೇ ಅತಿ ಹೆಚ್ಚು ವಿದೇಶಿ ಹಣವನ್ನು ಸ್ವೀಕರಿಸುವ ರಾಜ್ಯವಾಗಿ ಹೊರಹೊಮ್ಮಿದೆ. ಮಹಾರಾಷ್ಟ್ರ ನಿರಂತರವಾಗಿ ನಾಲ್ಕನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಕೋಲಾರದಿಂದ ಸಿದ್ದು ಸ್ಪರ್ಧೆಗೆ ರೆಡ್ ಸಿಗ್ನಲ್ – ವರುಣಾದಿಂದಲೇ ಸ್ಪರ್ಧಿಸುವಂತೆ ಹೈಕಮಾಂಡ್ ಹೇಳಿದ್ದು ಯಾಕೆ?