ಚಿತ್ರದುರ್ಗ: ನವವಿವಾಹಿತೆ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ (Challakere) ತಾಲೂಕಿನ ಮಹಾದೇವಪುರದಲ್ಲಿ (Mahadevapura) ನಡೆದಿದೆ.

ಕಾರಿಪಾಲಯ್ಯನಹಟ್ಟಿ ಮೂಲದ ಸುಮಲತಾ (21) ಮೃತ ನವವಿವಾಹಿತೆ. ಘಟನೆ ಸಂಬಂಧ ಗುಂಡಯ್ಯನಹಟ್ಟಿ ಗಜೇಂದ್ರ ಮತ್ತಿತರರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಚಾಮರಾಜನಗರ ಎನ್‌ಕೌಂಟರ್ ಪ್ರಕರಣದ ನ್ಯಾಯಾಂಗ ತನಿಖೆಗಾಗಿ ಪರಿಷತ್‌ನಲ್ಲಿ ಗಲಾಟೆ
ಆ.13ಕ್ಕೆ ಸುಮಲತಾ ಮನೆಬಿಟ್ಟು ಗಜೇಂದ್ರ ಜೊತೆ ತೆರಳಿದ್ದಳು. ಅಲ್ಲದೇ ಸುಮಲತಾ, ಗಜೇಂದ್ರ ಪ್ರೇಮ ವಿವಾಹ (Love Marriage) ಆಗಿದ್ದರು. ಭಾನುವಾರ ಸಂಜೆ ಮಹಾದೇವಪುರ ಬಾವಿಯಲ್ಲಿ ಸುಮಲತಾ ಶವ ಪತ್ತೆಯಾಗಿದೆ. ನಾಯಕನಹಟ್ಟಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: 13 ಲಕ್ಷ ಫಾಲೋವರ್ಸ್ ಹೊಂದಿದ್ದ ಪಾಕಿಸ್ತಾನಿ ಟಿಕ್‌ಟಾಕ್ ಸ್ಟಾರ್ ಶಂಸು ಬೀಬಿ ಗುಂಡಿನ ದಾಳಿಗೆ ಬಲಿ
