ಇಂಫಾಲ: ಮೂರು ತಿಂಗಳಿನಿಂದ ಈಶಾನ್ಯ ರಾಜ್ಯ ಮಣಿಪುರದಲ್ಲಿ (Manipura) ನಡೆಯುತ್ತಿರುವ ಹಿಂಸಾಚಾರದಿಂದಾಗಿ ಎನ್ಡಿಎ (NDA) ತನ್ನ ಮಿತ್ರ ಪಕ್ಷವನ್ನು ಕಳೆದುಕೊಂಡಿದೆ. ಸಿಎಂ ಎನ್ ಬಿರೇನ್ ಸಿಂಗ್ (N Biren Singh) ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಕುಕಿ ಸಮುದಾಯದ ಇಬ್ಬರು ಶಾಸಕರು ಹಿಂದಕ್ಕೆ ಪಡೆದಿದ್ದಾರೆ.
ಇಬ್ಬರು ಶಾಸಕರನ್ನು ಹೊಂದಿರುವ ಕುಕಿ ಪೀಪಲ್ಸ್ ಅಲಯನ್ಸ್ (Kuki People’s Alliance) ರಾಜ್ಯಪಾಲ ಅನುಸೂಯಾ ಉಯ್ಕೆ ಅವರಿಗೆ ಪತ್ರ ಬರೆದು ಬೆಂಬಲ ಹಿಂಪಡೆಯುವುದಾಗಿ ಘೋಷಿಸಿದೆ. ಇಬ್ಬರು ಶಾಸಕರು ಬೆಂಬಲ ಹಿಂದಕ್ಕೆ ಪಡೆದಿದ್ದರಿಂದ ಬಿರೇನ್ ಸಿಂಗ್ ಅವರ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಇದನ್ನೂ ಓದಿ: ಟೊಮೆಟೋ ಬೆಲೆ ಭಾರೀ ಇಳಿಕೆ – ರೈತರಿಗೆ ಆತಂಕ ಶುರು
- Advertisement 2
- Advertisement 3
60 ಮಂದಿ ಶಾಸಕ ಸ್ಥಾನವನ್ನು ಹೊಂದಿರುವ ಮಣಿಪುರ ವಿಧಾನಸಭೆಯಲ್ಲಿ ಪ್ರಸ್ತುತ 10 ಮಂದಿ ಕುಕಿ ಸಮುದಾಯದ ಶಾಸಕರಿದ್ದಾರೆ. ಈ ಪೈಕಿ 7 ಮಂದಿ ಬಿಜೆಪಿ, ಇಬ್ಬರು ಕುಕಿ ಪೀಪಲ್ಸ್ ಅಲಯನ್ಸ್, ಒಬ್ಬರು ಪಕ್ಷೇತರ ಶಾಸಕರಿದ್ದಾರೆ.
- Advertisement 4
ಒಟ್ಟು 32 ಬಿಜೆಪಿ ಶಾಸಕರು, 5 ಮಂದಿ ಎನ್ಪಿಎಫ್, 3 ಮಂದಿ ಪಕ್ಷೇತರ ಶಾಸಕರ ಬೆಂಬಲ ಬಿರೇನ್ ಸಿಂಗ್ ಸರ್ಕಾರಕ್ಕಿದೆ. 7 ಮಂದಿ ಎನ್ಪಿಪಿ, 5 ಕಾಂಗ್ರೆಸ್, 6 ಮಂದಿ ಜೆಡಿಯು ಶಾಸಕರಿದ್ದಾರೆ.
Web Stories