ಜ್ಯೂ.ಎನ್‌ಟಿಆರ್ (Jr.Ntr)ಸಹೋದರ ತೆಲುಗು ನಟ- ರಾಜಕಾರಣಿ ನಂದಮೂರಿ ತಾರಕ ರತ್ನ (Nandamuri Tarak Ratna) ಅವರು ಬೆಂಗಳೂರಿನಲ್ಲಿ ಶನಿವಾರ (ಫೆ.18) ಕೊನೆಯುಸಿರೆಳೆದಿದ್ದಾರೆ. ತಾರಕ ರತ್ನ ನಿಧನ ನಂದಮೂರಿ ಕುಟುಂಬಕ್ಕೆ (Nandamuri Family) ಆಘಾತ ನೀಡಿದೆ. ತೆಲುಗು ಫಿಲ್ಮ್ ಚೇಂಬರ್ ಆವರಣದಲ್ಲಿ ಫೆ.20ರ ಬೆಳಗ್ಗೆ ತಾರಕ ರತ್ನ ಅವರ ಪಾರ್ಥಿವ ಶರೀರವನ್ನ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ.
ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರ ಪುತ್ರ ನರಾ ಲೋಕೇಶ್ ಅವರು ಏರ್ಪಡಿಸಿದ್ದ ಪಾದಯಾತ್ರೆಯಲ್ಲಿ ಜ.27ರಂದು ನಂದಮೂರಿ ತಾರಕ ರತ್ನ ಭಾಗಿ ಆಗಿದ್ದರು. ಪಾದಯಾತ್ರೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ಕುಪ್ಪಂ ಬಳಿ ಇರುವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದನ್ನೂ ಓದಿ:ನಟ ನಂದಮೂರಿ ತಾರಕ ರತ್ನ ಇನ್ನಿಲ್ಲ


ಇನ್ನೂ ನಂದಮೂರಿ ತಾರಕ ರತ್ನ ಅವರ ನಿಧನಕ್ಕೆ ಟಾಲಿವುಡ್ ಜೊತೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ತಾರಕ ರತ್ನ ಅವರ ನಿಧನ ಚಿತ್ರರಂಗಕ್ಕೆ ಮತ್ತು ರಾಜಕೀಯಕ್ಕೆ ತುಂಬಲಾರದ ನಷ್ಟವಾಗಿದೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k


