ನವದೆಹಲಿ : ‘ಸಲಾಂ ಆರತಿ’ ಹೆಸರು ಬದಲಿಸುವ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ ನಿರ್ಧಾರ ತೆಗೆದುಕೊಂಡಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
Advertisement
ನವದೆಹಲಿಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಹೆಸರು ಬದಲಿಸುವ ಬಗ್ಗೆ ಸಾಕಷ್ಟು ಮನವಿಗಳು ಬಂದಿದ್ದವು. ಈ ಹಿನ್ನೆಲೆ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಚರ್ಚೆ ಮಾಡಿ ಹೆಸರು ಬದಲಿಸುವ ನಿರ್ಧಾರ ತೆಗೆದುಕೊಂಡಿದೆ. ಈ ಮನವಿ ಈಗ ಇಲಾಖೆಗೆ ಬಂದಿದ್ದು, ಮುಂದಿನ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.
Advertisement
Advertisement
ಮುಜರಾಯಿ ಇಲಾಖೆ ಹೆಸರು ಬದಲಿಸುವ ಪ್ರಸ್ತಾಪವೂ ಇದೆ. ಯಾವುದೇ ಹೆಸರನ್ನು ಏಕಾಏಕಿ ಬದಲಿಸಲು ಸಾಧ್ಯವಿಲ್ಲ. ಈ ಬಗ್ಗೆ ತಜ್ಞರು, ಇತಿಹಾಸಕಾರರು, ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಬೇಕು ಅವರ ಅಭಿಪ್ರಾಯ ಪಡೆದು ಬಳಿಕ ಸಿಎಂ ಜೊತೆಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕ ಪಾಲಿಟಿಕ್ಸ್ ಜಿದ್ದಾ ಜಿದ್ದಿ – ಬಿಜೆಪಿಗೆ ವಲಸೆ ಹೋಗಲು ಕಾಯ್ತಿವೆ ಹಕ್ಕಿಗಳು?
Advertisement
ಸಲಾಂ ಆರತಿ ಪದ ಜನಪದ ರೂಢಿಯಲ್ಲಿ ಬಂದಿದೆ ಎನ್ನುವ ಮಾತಿದೆ. ಇಲಾಖೆಯಲ್ಲಿ ಈ ಪದ ಬಳಕೆಯ ಬಗ್ಗೆ ಉಲ್ಲೇಖ ಇದೆಯೇ ಎಂದು ಪರಿಶೀಲಿಸಬೇಕಿದೆ. ಇದಕ್ಕೆಲ್ಲ 10-15 ದಿನಗಳ ಸಮಯ ಬೇಕು, ಪರಿಶೀಲನೆ ಬಳಿಕ ಅಂತಿಮವಾಗಿ ತಿರ್ಮಾನಿಸಿತ್ತೇವೆ. ಜನರ ಮನವಿ ಮೇರೆಗೆ ಪರಿಶೀಲನೆ ಮಾಡುತ್ತಿದ್ದೇವೆ ವಿನಹಃ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.