– ಸಾಯಿ ಸುದರ್ಶನ್ ಶತಕದಾಟ ವ್ಯರ್ಥ
ಬೆಂಗಳೂರು: ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕರ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ 5 ವಿಕೆಟ್‌ಗಳ ಜಯ ಸಾಧಿಸಿದೆ.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. 206 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ಐದು ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು.
ಗುಜರಾತ್ ಪರ ಸಾಯಿ ಸುದರ್ಶನ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು. 58 ಬಾಲ್‌ಗಳಿಗೆ 11 ಫೋರ್, 5 ಸಿಕ್ಸರ್ ಜೊತೆ ಸೆಂಚುರಿ ಬಾರಿಸಿದರು. ನಾಯಕ ಶುಭಮನ್ ಗಿಲ್ 32, ಜೋಶ್ ಬಟ್ಲರ್ 25, ವಾಷಿಂಗ್ಟನ್ ಸುಂದರ್ 19, ಜೇಸನ್ ಹೋಲ್ಡರ್ 23 ರನ್ ಗಳಿಸಿ ತಂಡ ಸವಾಲಿನ ಮೊತ್ತ ಪೇರಿಸಲು ನೆರವಾದರು.
ನಂತರ ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಉತ್ತಮ ಆರಂಭ ನೀಡಿತು. ಫಿಲ್ ಸಾಲ್ಟ್ ಬದಲು ಓಪನರ್ ಆಗಿ ಕಣಕ್ಕಿಳಿದಿದ್ದ ಜಾಕೋಬ್ ಬೆಥೆಲ್ 10 ಬಾಲ್‌ಗೆ 14 ರನ್ ಗಳಿಸಿ ಔಟಾದರು. ನಂತರ ಕೊಹ್ಲಿ ಮತ್ತು ಪಡಿಕ್ಕಲ್ ಶತಕದ ಜೊತೆಯಾಟ ತಂಡದ ಗೆಲುವಿಗೆ ಕೊಡುಗೆ ನೀಡಿತು. ಕೊಹ್ಲಿ 44 ಬಾಲ್‌ಗೆ 8 ಫೋರ್, 4 ಸಿಕ್ಸರ್ ಜೊತೆ 81 ರನ್ ಗಳಿಸಿದರು. ಪಡಕ್ಕಲ್ 27 ಬಾಲ್‌ಗೆ 55 ರನ್ ಸಿಡಿಸಿ ಗಮನ ಸೆಳೆದರು.
ಕೃಣಾಲ್ ಪಾಂಡ್ಯ 23, ಟಿಮ್ ಡೇವಿಡ್ ಮತ್ತು ಜಿತೇಶ್ ಶರ್ಮಾ ತಲಾ 10 ರನ್ ಗಳಿಸಿದರು. ಕೊನೆಗೆ ಪಾಂಡ್ಯ 12 ಬಾಲ್‌ಗೆ 23 ರನ್‌ಗಳ ಉತ್ತಮ ಆಟವಾಡಿ ತಂಡವನ್ನು ಜಯದ ದಡ ಸೇರಿಸಿದರು.



