Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಶಾಲಾ ಮುಖ್ಯಸ್ಥನ ಕೊಲೆ ರಹಸ್ಯ ಬಾರ್‌ನಲ್ಲಿ ಬಯಲು: ಮುಚ್ಚಿ ಹೋಗಿದ್ದ ಪ್ರಕರಣ ಮತ್ತೆ ಓಪನ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಶಾಲಾ ಮುಖ್ಯಸ್ಥನ ಕೊಲೆ ರಹಸ್ಯ ಬಾರ್‌ನಲ್ಲಿ ಬಯಲು: ಮುಚ್ಚಿ ಹೋಗಿದ್ದ ಪ್ರಕರಣ ಮತ್ತೆ ಓಪನ್

Crime

ಶಾಲಾ ಮುಖ್ಯಸ್ಥನ ಕೊಲೆ ರಹಸ್ಯ ಬಾರ್‌ನಲ್ಲಿ ಬಯಲು: ಮುಚ್ಚಿ ಹೋಗಿದ್ದ ಪ್ರಕರಣ ಮತ್ತೆ ಓಪನ್

Public TV
Last updated: November 11, 2017 1:16 pm
Public TV
Share
2 Min Read
mys murder
SHARE

ಮೈಸೂರು: ಖಾಸಗಿ ಶಾಲೆಯ ಮುಖ್ಯಸ್ಥನ ಕೊಲೆ ರಹಸ್ಯ ಬಾರ್ ನಲ್ಲಿ ಬಯಲಾಗುವ ಮೂಲಕ ಮುಚ್ಚಿಹೋಗಿದ್ದ ಪ್ರಕರಣವೊಂದು ಮತ್ತೆ ಓಪನ್ ಆಗಿದೆ.

ಚಾಣಕ್ಯ ಶಾಲಾ ಮುಖ್ಯಸ್ಥ ಕೃಷ್ಣ (40) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಒಬ್ಬನನ್ನು ಬಂಧಿಸಿ ನಾಪತ್ತೆಯಾಗಿರುವ ಪತ್ನಿ ಹಾಗೂ ಇಬ್ಬರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?
ಮೈಸೂರಿನ ದಟ್ಟಗಳ್ಳಿಯಲ್ಲಿ ಚಾಣಕ್ಯ ಶಾಲೆಯ ಸಂಸ್ಥಾಪಕ ಕೃಷ್ಣ ಅವರು ವರ್ಷದ ಹಿಂದೆ ಮೃತಪಟ್ಟಿದ್ದರು. ಈ ವೇಳೆ ಪತ್ನಿ ರಾಧಾ ಪತಿ ಕೃಷ್ಣ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಪೊಲೀಸರು ಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಕೃಷ್ಣ ಮೃತದೇಹಕ್ಕೆ ಸಂಬಂಧಿಕರು ಅಗ್ನಿಸ್ಪರ್ಶ ನೆರವೇರಿಸುವ ಮೂಲಕ ಅಂತ್ಯಕ್ರಿಯೆ ನಡೆಸಿದ್ದರು. ಇದಾದ ಬಳಿಕ ಪ್ರತಿ ತಿಂಗಳು ಪತ್ನಿ ಮತ್ತು ಕುಟುಂಬದ ಸದಸ್ಯರು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರುತ್ತಿದ್ದರು. ಕೃಷ್ಣ ಮೃತಪಟ್ಟ ನಂತರ ರಾಧಾ ಅವರು ಚಾಣಕ್ಯ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದರು.

ಬೆಳಕಿಗೆ ಬಂದಿದ್ದು ಹೇಗೆ?
ಕೆಲ ದಿನಗಳ ಹಿಂದೆ ಕುವೆಂಪು ನಗರದ ಬಾರ್ ನಲ್ಲಿ ರಾತ್ರಿ ವೇಳೆ ಕಂಠಪೂರ್ತಿ ಕುಡಿದಿದ್ದ ಮೂವರು ಯುವಕರು ಮಾತನಾಡಿಕೊಳ್ಳುತ್ತಿದ್ದರು. ಈ ವೇಳೆ ಒಬ್ಬಾತ, ಕೃಷ್ಣರ ಮುಖವನ್ನು ದಿಂಬಿನಿಂದ ಅದುಮಿ ಉಸಿರು ಕಟ್ಟಿಸಿ ಕೊಂದ್ರು ಯಾರಿಗೂ ಗೊತ್ತಾಗಿಲ್ಲ. ಘಟನೆ ಆಗಿ ಒಂದು ವರ್ಷ ಆದ್ರೂ ಇದೂವರೆಗೂ ಕೊಂದವರು ಯಾರು ಅನ್ನೋದೆ ಗೊತ್ತಾಗಿಲ್ಲ. ಇದಕ್ಕೆ ಧಮ್ ಬೇಕಲೆ ಧಮ್ ಬೇಕು. ನೋಡು ನಮ್ಮ ಹವಾ ಹೆಂಗೆ ಮೇಂಟೆನ್ ಮಾಡಿದ್ವಿ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಈತ ತನ್ನ ಕೃತ್ಯದ ಬಗ್ಗೆ ಓಪನ್ ಆಗಿ ಬಡಾಯಿ ಕೊಚ್ಚಿಕೊಳ್ಳುತ್ತಿರುವುದನ್ನು ಆತನ ಟೇಬಲ್ ಹಿಂಭಾಗದಲ್ಲಿ ಕುಳಿತುಕೊಂಡಿದ್ದ ಕೃಷ್ಣ ಅವರ ಸಂಬಂಧಿಯೊಬ್ಬರು ಕೇಳಿಸಿಕೊಂಡಿದ್ದಾರೆ.

ಬಾರ್ ನಲ್ಲಿ ಯುವಕ ಹೇಳಿದ ವಿಚಾರವನ್ನು ಸಂಬಂಧಿಗಳ ಬಳಿ ತಿಳಿಸಿ ಬಳಿಕ ಪತ್ನಿ ರಾಧಾ ಅವರಲ್ಲಿ ಚರ್ಚಿಸಿದ್ದಾರೆ. ಈ ವೇಳೆ ರಾಧಾ ಅವರು ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವಾದ ಮಾಡಿದ್ದಾರೆ.

ಕೊನೆಗೆ ಕೃಷ್ಣ ಅವರ ಸಂಬಂಧಿಗಳು ಬಾರ್ ನಲ್ಲಿ ನಡೆದ ಯುವಕನ  ಮಾತುಕತೆಯ ಆಧಾರದಲ್ಲಿ ಕುವೆಂಪುನಗರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ನಗರ ಪೊಲೀಸ್ ಆಯುಕ್ತ ಡಾ.ಎ. ಸುಬ್ರಹ್ಮಣೇಶ್ವರರಾವ್ ಅವರು ತನಿಖೆ ನಡೆಸುವಂತೆ ಸಿಸಿಬಿಗೆ ಆದೇಶಿಸಿದರು.

ಸಿಸಿಬಿ ಪೊಲೀಸರು ಶಂಕಿತ ಮಂಜುನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಗಾಢ ನಿದ್ರೆಯಲ್ಲಿದ್ದ ಕೃಷ್ಣ ಅವರನ್ನು ಅವರ ಮನೆಯಲ್ಲೇ ಹತ್ಯೆಮಾಡಿದ್ದೇವೆ ಎಂದು ತಿಳಿಸಿದ್ದಾನೆ.

ಚಾಣಕ್ಯ ಶಾಲೆಗೆ ಮಂಜುನಾಥ್ ಕುಡಿಯುವ ನೀರಿನ ಕ್ಯಾನ್ ಪೂರೈಕೆ ಮಾಡುತ್ತಿದ್ದ. ಈ ವೇಳೆ ರಾಧಾ ಮತ್ತು ಮಂಜುನಾಥ್ ನಡುವೆ ಪರಿಚಯವಾಗಿತ್ತು. ಈಗ ನಾಪತ್ತೆಯಾಗಿರುವ ಪತ್ನಿ ರಾಧಾ ಮತ್ತು ಉಳಿದ ಇಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

MYS MURDER TWIST AV 1

MYS MURDER TWIST AV 2

MYS MURDER TWIST AV 3

MYS MURDER TWIST AV 4

 

TAGGED:barchaitanya schooleducationfamilyKrishnamysuruಕೃಷ್ಣಕೊಲೆಚಾಣಕ್ಯ ಶಾಲೆಮೈಸೂರುಶಿಕ್ಷಣಸಿಸಿಬಿ
Share This Article
Facebook Whatsapp Whatsapp Telegram

Cinema news

Sri murali and prashant neel
ಪ್ರಶಾಂತ್ ನೀಲ್ ಜೊತೆಗಿನ ಉಗ್ರಂ ವೀರಂ ಸಿನಿಮಾ ಬಗ್ಗೆ ಶ್ರೀಮುರಳಿ ಮಾತು
Cinema Latest Sandalwood Top Stories
p.c.shekhar
‘ಜಸ್ಟ್ ಅಸ್’ ಅಂತ ವೆಬ್ ಸಿರೀಸ್ ಲೋಕಕ್ಕೆ ನಿರ್ದೇಶಕ ಪಿ.ಸಿ.ಶೇಖರ್ ಎಂಟ್ರಿ
Cinema Latest Sandalwood Top Stories
srimurali
ಪ್ರಶಾಂತ್ ನೀಲ್ ಜೊತೆಗಿನ ಉಗ್ರಂ ವೀರಂ ಸಿನಿಮಾ ಬಗ್ಗೆ ಶ್ರೀಮುರಳಿ ಹೇಳಿದ್ದೇನು?
Cinema Latest Sandalwood Top Stories
Rukmini Vasanth
ಬಾಲಿವುಡ್‌ಗೆ ಜಿಗಿದ ʻಕನಕವತಿʼ – ರಶ್ಮಿಕಾ, ಶ್ರೀಲೀಲಾ ಹಾದಿಯಲ್ಲಿ ರುಕ್ಮಿಣಿ ವಸಂತ್!
Bollywood Cinema Latest Sandalwood

You Might Also Like

Indian High Commission in Dhaka
Latest

ಢಾಕಾದಲ್ಲಿರುವ ಭಾರತೀಯ ಹೈಕಮಿಷನ್‌ಗೆ ಬೆದರಿಕೆ – ಬಾಂಗ್ಲಾದೇಶ ರಾಯಭಾರಿಗೆ ಸಮನ್ಸ್

Public TV
By Public TV
20 minutes ago
supreme Court 1
Latest

ಮಾಲಿನ್ಯ ಹೆಚ್ಚಿರುವಾಗ ಟೋಲ್‌ಗಳಿಂದ ಆದಾಯ ಗಳಿಕೆಗೆ ಆದ್ಯತೆ ನೀಡೋದು ಅಸಾಧ್ಯ, ಸಂಗ್ರಹ ಸ್ಥಗಿತಗೊಳಿಸಿ: ಸುಪ್ರೀಂ

Public TV
By Public TV
24 minutes ago
Dharmasthala Chinnayya
Dakshina Kannada

ಧರ್ಮಸ್ಥಳದ ಬುರುಡೆ ಚಿನ್ನಯ್ಯನಿಗೆ ಕೊನೆಗೂ ಬಿಡುಗಡೆ ಭಾಗ್ಯ – ಶೀಘ್ರವೇ ಜೈಲಿನಿಂದ ರಿಲೀಸ್‌

Public TV
By Public TV
54 minutes ago
gaurav bhatia
Latest

ಗಾಂಧಿ ಕುಟುಂಬ ರಾಜಕೀಯದಲ್ಲಿ ಅತ್ಯಂತ ಭ್ರಷ್ಟ ಕುಟುಂಬ – ಬಿಜೆಪಿ ವಕ್ತಾರ ಗೌರವ್ ಭಾಟಿಯಾ

Public TV
By Public TV
1 hour ago
Ramalinga Reddy
Belgaum

ಬೌದ್ಧ ಬಿಕ್ಕುಗಳಿಗೆ ಸರ್ಕಾರದಿಂದ ಮಾಸಿಕ ಗೌರವ ಧನ: ರಾಮಲಿಂಗಾರೆಡ್ಡಿ

Public TV
By Public TV
2 hours ago
Krishna Byre Gowda
Bagalkot

ಕೂಡಲಸಂಗಮ ಅಭಿವೃದ್ಧಿ ಮಂಡಳಿ ಯೋಜನೆ ನಮ್ಮ ಕೂಸು, ಮುಗಿಸುವ ಬದ್ಧತೆ ನಮಗಿದೆ: ಕೃಷ್ಣ ಬೈರೇಗೌಡ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?