ಯಶ್ ನಟನೆಯ ಕೆಜಿಎಫ್ 2 ಸಿನಿಮಾದಲ್ಲಿ ಅಧೀರನಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ಬಾಲಿವುಡ್ ಬ್ಯಾಡ್ ಬಾಯ್ ಸಂಜಯ್ ದತ್, ಇದೀಗ ಮತ್ತೊಮ್ಮೆ ಚಂದನವನಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಅಂದುಕೊಂಡಂತೆ ನಡೆದರೆ, ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರಲಿರುವ ‘ಕೆಡಿ’ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರವೊಂದನ್ನು ಮಾಡಲಿದ್ದಾರೆ. ಈಗಾಗಲೇ ಸಂಜಯ್ ದತ್ ಜೊತೆ ಪ್ರೇಮ್ ಮಾತುಕತೆ ಕೂಡ ನಡೆಸಿದ್ದಾರೆ.
- Advertisement 2
ಬಲ್ಲ ಮೂಲಗಳ ಪ್ರಕಾರ ‘ಕೆಡಿ’ ಸಿನಿಮಾದಲ್ಲಿ ನಟಿಸಲು ಸಂಜಯ್ ಒಪ್ಪಿಗೆ ನೀಡಿದ್ದಾರಂತೆ. ಬರೋಬ್ಬರಿ 45 ದಿನಗಳ ಕಾಲ್ ಶೀಟ್ ಕೂಡ ನೀಡಿದ್ದಾರಂತೆ. ಅದೊಂದು ಪ್ರಮುಖ ಪಾತ್ರವಾಗಿದ್ದರಿಂದ ಈ ಪ್ರಮಾಣದ ಕಾಲ್ ಶೀಟ್ ತಗೆದುಕೊಂಡಿದ್ದಾರಂತೆ ಪ್ರೇಮ್. ಇದು ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನ ಮೊದಲ ಸಿನಿಮಾವಾಗಿದ್ದು, ಇನ್ನಷ್ಟೇ ಚಿತ್ರೀಕರಣ ಪ್ರಾರಂಭಿಸಬೇಕು. ಇದನ್ನೂ ಓದಿ: ತಂದೆಯ ಹುಟ್ಟುಹಬ್ಬಕ್ಕೆ ವಿಶೇಷ ಫೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್
- Advertisement 3
- Advertisement 4
ಈ ಹಿಂದೆ ಪ್ರೇಮ್ ಅವರು ಸಂಜಯ್ ದತ್ ಅವರನ್ನು ಭೇಟಿ ಮಾಡಿದ ಫೋಟೋ ವೈರಲ್ ಆಗಿತ್ತು. ಕೆಡಿ ಸಿನಿಮಾದ ಟೈಟಲ್ ರಿಲೀಸ್ ಕಾರ್ಯಕ್ರಮಕ್ಕೆ ಸಂಜಯ್ ಅವರನ್ನು ಆಹ್ವಾನಿಸಲು ನಿರ್ದೇಶಕರು ಹೋಗಿದ್ದರು ಎಂದು ಹೇಳಲಾಗಿತ್ತು. ಮೊನ್ನೆಯಷ್ಟೇ ರವಿಚಂದ್ರನ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಗೊತ್ತಾದಾಗ, ಸಂಜಯ್ ಮಾಡಬೇಕಿದ್ದ ಪಾತ್ರವನ್ನು ರವಿಚಂದ್ರನ್ ನಿರ್ವಹಿಸುತ್ತಿದ್ದಾರೆ ಎಂದು ಸುದ್ದಿ ಆಗಿತ್ತು.
ಇದೀಗ ಮತ್ತೊಂದು ಬ್ರೇಕಿಂಗ್ ಸುದ್ದಿ ಬಂದಿದ್ದು, ಸಂಜಯ್ ದತ್ ಈ ಸಿನಿಮಾದಲ್ಲಿ ನಟಿಸುವುದು ಗ್ಯಾರಂಟಿ ಎಂದು ಗೊತ್ತಾಗಿದೆ. ಈಗಾಗಲೇ ಪ್ರೇಮ್ ಕಾಲ್ ಶೀಟ್ ಪಡೆದುಕೊಂಡು ಬಂದು, ಅವರ ಭಾಗದ ಚಿತ್ರೀಕರಣದ ಪ್ಲ್ಯಾನ್ ಕೂಡ ಮಾಡುತ್ತಿದ್ದಾರಂತೆ. ಇದೊಂದು ಭಾರೀ ಬಜೆಟ್ ಸಿನಿಮಾವಾಗಿದ್ದು, ಭಾರತೀಯ ಸಿನಿಮಾ ರಂಗದ ಮೇರು ಕಲಾವಿದರು ಜೊತೆಯಾಗಲಿದ್ದಾರಂತೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k