ಗಾಂಧಿನಗರ: ಆಪರೇಷನ್ ಥಿಯೇಟರ್‌ನ ಕಬೋರ್ಡ್‍ನಲ್ಲಿ ಮಗಳ (Daughter) ಹಾಗೂ ಹಾಸಿಗೆಯ ಕೆಳಗೆ ತಾಯಿಯ (Mother) ಶವ ಪತ್ತೆಯಾದ ಘಟನೆ ಅಹಮದಾಬಾದ್‍ನ ಭೂಬಾಯ್ ಪಾರ್ಕ್ ಬಳಿ ಇರುವ ಆಸ್ಪತ್ರೆಯಲ್ಲಿ (Hospital) ನಡೆದಿದೆ.
ಮೃತರನ್ನು ತಾಯಿಯನ್ನು ಚಂಪಾ ಮತ್ತು ಮಗಳನ್ನು ಭಾರತಿ ವಾಲಾ (30) ಎಂದು ಗುರುತಿಸಲಾಗಿದೆ. ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ದುರ್ವಾಸನೆ ಬರುತ್ತಿತ್ತು. ಇದನ್ನು ತಾಳಲಾರದ ಅಲ್ಲಿನ ಸಿಬ್ಬಂದಿ ಅಲ್ಲಿದ್ದ ಕಬೋರ್ಡ್‍ನ್ನು (Cupboard) ತೆರೆದಿದ್ದಾರೆ. ಆ ವೇಳೆ ಭಾರತಿಯ ಮೃತದೇಹ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಈ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ್ದಾರೆ.
Advertisement
Advertisement
ಸಿಸಿಟಿವಿಯಲ್ಲಿ ಭಾರತಿ ಮತ್ತೊಬ್ಬ ಮಹಿಳೆಯೊಂದಿಗೆ ಇರುವುದು ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಹುಡುಕಿದಾಗ ಕೊಠಡಿಯೊಂದರಲ್ಲಿ ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದ ತಾಯಿಯ ಶವ ಪತ್ತೆ ಆಗಿದೆ. ಅದಾದ ಬಳಿಕ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಗೆ ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ಮೆಸ್ಸಿ ಕೈಯಲ್ಲಿ ಕಮಲ – ಬಿಜೆಪಿಗೆ ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೋಲ್
Advertisement
Advertisement
ಈ ವೇಳೆ ತಾಯಿ, ಮಗಳಿಬ್ಬರೂ ಚಿಕಿತ್ಸೆಗಾಗಿ ಇಬ್ಬರೂ ಆಸ್ಪತ್ರೆಗೆ ಬಂದಿದ್ದರು. ತಾಯಿ ಮತ್ತು ಮಗಳಿಗೆ ಮೊದಲು ಇಂಜೆಕ್ಷನ್ ನೀಡಿ ಕೊಂದಿದ್ದು, ಅದಾದ ಬಳಿಕ ಖಚಿತ ಪಡಿಸಿಕೊಳ್ಳಲು ಕತ್ತು ಹಿಸುಕಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಭಾರತಿ ಮದುವೆಯಾಗಿದ್ದರೂ ತಾಯಿಯೊಂದಿಗೆ ನರೋಲ್‍ನಲ್ಲಿ ನೆಲೆಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದ್ದು, ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಮನ್ಸುಖ್ ಎಂಬಾತನನ್ನು ಬಂಧಿಸಲಾಗಿದೆ. ಈತ ಭಾರತಿಯ ಸಂಬಂಧಿಯಾಗಿದ್ದ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ ಪಂಚಮಸಾಲಿ ಸವಾಲು – ಬೇಡಿಕೆ ಏನು? ವಸ್ತುಸ್ಥಿತಿ ಏನಿದೆ? ಯಾವ ಜಿಲ್ಲೆಗಳಲ್ಲಿಎಷ್ಟಿದೆ ಪ್ರಭಾವ?