ಬೆಂಗಳೂರು: ಸಿಲಿಕಾನ್ ಸಿಟಿಯ ಮತ್ತಿಕೆರೆಯಲ್ಲಿರುವ ಕಾರು ಗ್ಯಾರೇಜ್ (Mattikere Car Ggarage) ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಮತ್ತಿಕೆರೆ ಸಮೀಪದ ದಿವಾನರಪಾಳ್ಯದ 7 ನೇಕ್ರಾಸ್ ನಲ್ಲಿ ಈ ಘಟನೆ ನಡೆದಿದೆ. ಗುರುವಾರ ರಾತ್ರಿ 10.15ರ ವೇಳೆ ಗ್ಯಾರೇಜ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ವಾಹನಗಳು ಹೊತ್ತಿ ಉರಿದಿವೆ. ಇದನ್ನೂ ಓದಿ: ಕೈಯಲ್ಲಿ ವಯೋವೃದ್ಧ ಫೋಟೋ ಹಿಡಿದು ರಸ್ತೆ ದಾಟುತ್ತಿದ್ದಾಗ ವ್ಯಕ್ತಿಗೆ ಕಾರು ಡಿಕ್ಕಿ- ಸಾವು
ಗ್ಯಾರೇಜ್ಗೆ ಬಂದಿದ್ದ ಒಂದು ಕಾರ್, ಎರಡು ಟಾಟಾ ಏಸ್ ವಾಹನಗಳು ಅಗ್ನಿಗೆ ಆಹುತಿಯಾಗಿದ್ದು, ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k