ನಟಿ ಸಮಂತಾ (Samantha) ಸದ್ಯ ತಾಯ್ತನದ ಸಂಭ್ರಮದಲ್ಲಿದ್ದಾರೆ. ಪ್ರಸ್ತುತ ಗರ್ಭಿಣಿಯಾಗಿರುವ ಅವರು ತಮ್ಮ ಮೊದಲ ತ್ರೈಮಾಸಿಕ (First Trimester) ಹಂತದಲ್ಲಿದ್ದಾರೆ. ಈ ಹಿಂದೆ ಕೇವಲ ವೇದಿಕೆಯ ಮೇಲಷ್ಟೇ ತಾವು ತಾಯಿಯಾಗುತ್ತಿರುವ ವಿಷಯ ಘೋಷಿಸಿದ್ದ ಸ್ಯಾಮ್ ಇದೀಗ ಮೊದಲ ಬಾರಿಗೆ ತಮ್ಮ ಬೇಬಿ ಬಂಪ್ (Baby Bump) ಪ್ರದರ್ಶಿಸಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಕಠಿಣ ವರ್ಕೌಟ್ ಹಾಗೂ ಅತ್ಯಂತ ಫಿಟ್ ಆದ ದೇಹದ ಮೂಲಕವೇ ಸುದ್ದಿಯಾಗುತ್ತಿದ್ದ ಸಮಂತಾ, ಈ ಹಿಂದೆ ಕಷ್ಟಪಟ್ಟು ಸಿಕ್ಸ್ ಪ್ಯಾಕ್ ಆ್ಯಬ್ಸ್ (Six-Pack Abs) ಹೊಂದಿದ್ದರು. ಆದರೆ ಈಗ ಸಿಕ್ಸ್ ಪ್ಯಾಕ್ ಇದ್ದ ಜಾಗದಲ್ಲಿ ಪ್ರೀತಿಯ ಬೇಬಿ ಬಂಪ್ ಮೂಡಿದೆ. ಗರ್ಭಾವಸ್ಥೆಯ ಈ ಹಂತದಲ್ಲಿ ಕೇವಲ ಸರಳ ವ್ಯಾಯಾಮಗಳನ್ನಷ್ಟೇ ಮಾಡಲು ಸಾಧ್ಯವಿದ್ದು, ಕಠಿಣ ವರ್ಕೌಟ್ ಮಾಡಲು ಸಾಧ್ಯವಿಲ್ಲ. ಇದನ್ನೇ ಉಲ್ಲೇಖಿಸಿ ತಮ್ಮ ಹೊಟ್ಟೆಯ ಫೋಟೋ ಪೋಸ್ಟ್ ಮಾಡಿರುವ ಸಮಂತಾ, “ನನ್ನ ಸಿಕ್ಸ್ ಪ್ಯಾಕ್… ಮತ್ತೆ ಯಾವಾಗ ಭೇಟಿಯಾಗಬೇಕೋ ಆವಾಗ ಭೇಟಿಯಾಗೋಣ”ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ಹೊಸನಗರದಲ್ಲಿ ಹೋಳಿಯಾಡಿದ ಸಮಂತಾ

ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಖ್ಯಾತ ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಸಮಂತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮುಂಬರುವ ಡಿಸೆಂಬರ್ ವೇಳೆಗೆ ಈ ದಂಪತಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ‘ತಾರಾ ಪಟ್ಟ’ದ ಮೋಡಿಗೆ ವ್ಯಸನಿಯಾಗಿದ್ದೆ – ನ್ಯೂನ್ಯತೆ ಮೆಟ್ಟಿನಿಂತ ಸಮಂತಾ!
