ಮೈಸೂರು: ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರಗೆ (Dr.Yathindra Siddaramaiah) ಎಂಎಲ್‍ಸಿ ಟಿಕೆಟ್ ಸಿಗೋದು ಫಿಕ್ಸ್ ಆಗಿದೆ. ಈ ವಿಚಾರವನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ.
ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೆಗೌಡ ಪರ ಪ್ರಚಾರಕ್ಕೆ ಯತೀಂದ್ರ ಅವರು ಟಿ ನರಸೀಪುರಕ್ಕೆ ಆಗಮಿಸಿದ್ದರು. ಈ ವೇಳೆ ಶಾಲೆಗೆ ಅನುದಾನ ಬಿಡುಗಡೆ ಮಾಡಿಕೊಡುವಂತೆ ಶಿಕ್ಷಕಿ ಮನವಿ ಮಾಡಿಕೊಂಡರು.
Advertisement
Advertisement
ಈ ವೇಳೆ ನಾನು ಎಂಎಲ್ ಸಿ ಆಗಿ ಶಾಸಕನಾಗ್ತೀನಿ. ಶಾಸಕರ ಅನುದಾನದಲ್ಲಿ ಹಣ ಹಾಕುತ್ತೇನೆ. ನಮ್ಮ ತಂದೆಯವರ ಕ್ಷೇತ್ರಕ್ಕೆ ಶಾಲೆ ಬರೋ ಕಾರಣ ಅವರ ಬಳಿ ಮಾತನಾಡಿ ಅವರಿಂದಲೂ ಅನುದಾನ ಕೊಡಿಸ್ತೇನೆ ಎಂದು ಯತೀಂದ್ರ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಈ ಮೂಲಕ ಯತೀಂದ್ರ ತಾವು ಎಂಎಲ್ ಸಿ ಆಗೋದರ ಬಗ್ಗೆ ಸುಳಿವು ನೀಡಿದರು. ಇದನ್ನೂ ಓದಿ: ಶನಿವಾರ 57 ಸ್ಥಾನಗಳಿಗೆ ಕೊನೇ ಹಂತದ ಚುನಾವಣೆ – ಕಣದಲ್ಲಿರುವ ಘಟಾನುಘಟಿಗಳು ಯಾರು?