Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಳ್ಳಾರಿ ಬ್ಯಾನರ್‌ ಗಲಭೆ; ಸದನದಲ್ಲಿ ಶಾಸಕ ನಾಗೇಂದ್ರ – ಜನಾರ್ದನ ರೆಡ್ಡಿ ನಡುವೆ ಮಾತಿನ ʻಫೈರಿಂಗ್‌ʼ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಬಳ್ಳಾರಿ ಬ್ಯಾನರ್‌ ಗಲಭೆ; ಸದನದಲ್ಲಿ ಶಾಸಕ ನಾಗೇಂದ್ರ – ಜನಾರ್ದನ ರೆಡ್ಡಿ ನಡುವೆ ಮಾತಿನ ʻಫೈರಿಂಗ್‌ʼ

Districts

ಬಳ್ಳಾರಿ ಬ್ಯಾನರ್‌ ಗಲಭೆ; ಸದನದಲ್ಲಿ ಶಾಸಕ ನಾಗೇಂದ್ರ – ಜನಾರ್ದನ ರೆಡ್ಡಿ ನಡುವೆ ಮಾತಿನ ʻಫೈರಿಂಗ್‌ʼ

Public TV
Last updated: January 30, 2026 3:48 pm
Public TV
Share
2 Min Read
B Nagendra
SHARE

ಬೆಂಗಳೂರು: ಬಳ್ಳಾರಿ ಫೈರಿಂಗ್ ಮತ್ತು ಬ್ಯಾನರ್ ಗಲಾಟೆಗೆ (Bellari Banner Riot) ಸಂಬಂಧಿಸಿದಂತೆ ವಿಧಾನಸಭೆ ಇಂದು ಶಾಸಕರಾದ ಬಿ. ನಾಗೇಂದ್ರ ಹಾಗೂ ಜನಾರ್ದನ ರೆಡ್ಡಿ (Janardhana Reddy) ನಡುವೆ ಪರಸ್ಪರ ಮಾತಿನ ಫೈರಿಂಗ್‌ಗೆ ವೇದಿಕೆಯಾಗಿತ್ತು.

ನಿನ್ನೆ ಜನಾರ್ದನ ರೆಡ್ಡಿಯವರು ಸದನದಲ್ಲಿ ಬಳ್ಳಾರಿ ಗಲಾಟೆಗೆ (Ballari Clash) ನಾರಾ ಭರತ್ ರೆಡ್ಡಿ ಕಾರಣ, ಕಾಂಗ್ರೆಸ್‌ ಕಾರ್ಯಕರ್ತನ ಸಾವಿಗೆ ಗನ್‌ಮ್ಯಾನ್‌ಗಳು ಕಾರಣ, ಪ್ರಕರಣ ಸಿಬಿಐಗೆ ಕೊಡಬೇಕೆಂದು ಒತ್ತಾಯಿಸಿದ್ರು. ಇಂದು ಶಾಸಕ ಬಿ ನಾಗೇಂದ್ರ ಮಾತಾಡಿ, ಜನಾರ್ದನ ರೆಡ್ಡಿಯವರು ಸದನಕ್ಕೆ ಸುಳ್ಳು ಮಾಹಿತಿ ಕೊಟ್ಟು ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿ ಪ್ರಕರಣದ ವಿವರಣೆ ಕೊಡಲು ಮುಂದಾದ್ರು. ಇದನ್ನೂ ಓದಿ: ಚೀಟಿ ವ್ಯವಹಾರದಲ್ಲಿ ವಂಚನೆ; ಕೇಸ್‌ನಿಂದ ಕೈಬಿಡಲು 5 ಲಕ್ಷಕ್ಕೆ ಡೀಲ್ ಮಾಡಿದ್ದ ಇನ್‌ಸ್ಪೆಕ್ಟರ್ ‘ಲೋಕಾ’ ಬಲೆಗೆ

ಈ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಹಾಗೂ ಬಿ ನಾಗೇಂದ್ರಗೂ ತೀವ್ರ ವಾಕ್ಸಮರ ನಡೆದು ಸದನ ಗದ್ದಲ, ಕೋಲಾಹಲದಲ್ಲಿ ಮುಳುಗಿತ್ತು. ಮೊದಲು ಮಾತಾಡಿದ ಬಿ ನಾಗೇಂದ್ರ, ರೆಡ್ಡಿ ಮನೆ ಮುಂದೆ ಗಲಾಟೆ ಆದಾಗ ಬಿಜೆಪಿ ಕಾರ್ಯಕರ್ತರು ವಾಲ್ಕೀಕಿ ಫೋಟೋ ಇದ್ದ ಬ್ಯಾನರ್ ಕೆಳಕ್ಕೆ ಹಾಕಿ ಅವಮಾನ ಮಾಡಿದ್ರು. ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಸಾವಾಯ್ತು. ಯಾರು ಕಾರಣ ಅಂತ ತನಿಖೆಯಲ್ಲಿ ಬಹಿರಂಗ ಆಗುತ್ತೆ. ಆದ್ರೆ ನಂತರ ಬಿಜೆಪಿ ನಾಯಕರ ಬಳ್ಳಾರಿಯಲ್ಲಿ ಸಮಾವೇಶದಲ್ಲಿ ಶ್ರೀರಾಮುಲು ಅವರು ಏ ಭರತ್ ರೆಡ್ಡಿ, ಏಯ್ ಕಾಂಗ್ರೆಸ್ ಕಾರ್ಯಕರ್ತರೇ ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ. ನೀವೆಲ್ಲಿದ್ರೂ, ಪಾತಾಳದಲ್ಲಿದ್ರೂ ಹುಡುಕಿ ಒದ್ದು ಓಡಿಸ್ತೇವೆ ಅಂದ್ರು.

B Nagendra 2

ಜನಾರ್ದನ ರೆಡ್ಡಿಯವರು ನಿನ್ನೆ ಹಲವು ಸುಳ್ಳು ಹೇಳಿ ಸದನಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಮಧ್ಯೆ ಎದ್ದು ಜನಾರ್ದನ ರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ರು. ನಾಗೇಂದ್ರ ವಿರುದ್ಧ ರೆಡ್ಡಿ ವಾಗ್ದಾಳಿ ನಡೆಸಿದ್ರು.  ಇದನ್ನೂ ಓದಿ: ಮಂಡ್ಯದ ಗ್ರಾಮ ಪಂಚಾಯ್ತಿ ಇ-ಖಾತೆಗಳಲ್ಲಿ ಅಕ್ರಮ

ವಾಲ್ಮೀಕಿ ಸಮಾಜದಲ್ಲಿ ರಾಮುಲು ಎದುರು ನೀನು ನಾಯಕನಾಗಲು ಸಾಧ್ಯವಿಲ್ಲ. ವಾಲ್ಮೀಕಿ ನಿಗಮದ ಹಣ ಲೂಟಿ‌ ಮಾಡಿರೋ ನಿನಗೆ ವಾಲ್ಮೀಕಿ ಬಗ್ಗೆ ಮಾತಾಡೋ ನೈತಿಕತೆ ಇಲ್ಲ. ನೂರು ಜನ್ಮ ಹುಟ್ಟಿ ಬಂದರು ನೀನು ನಾಯಕನಾಗೋಕೆ ಸಾಧ್ಯವಿಲ್ಲ ಗುಡುಗಿದರು. ಇದಕ್ಕೆ ನಾಗೇಂದ್ರ ವಾಲ್ಮೀಕಿ ನಮ್ಮ ಸಮಾಜ, ನಮ್ಮ ಜನರು ನನ್ನ ಜೊತೆಗಿದ್ದಾರೆ ಎಂದು ಹೇಳಿ ರೊಚ್ಚಿಗೆದ್ದು ಮೇಜು ಕುಟ್ಟಿ ಸವಾಲು ಸ್ವೀಕರಿಸಿ ತಿರುಗೇಟು ನೀಡಿದರು.

ಈ ವೇಳೆ, ಸದನದಲ್ಲಿ ವಾಕ್ಸಮರದ ಕಾವು ಜೋರಾಗಿ, ಪರಿಸ್ಥಿತಿ ನಿಯಂತ್ರಿಸಲು ಸ್ಪೀಕರ್ ಹರಸಾಹಸ ಪಡಬೇಕಾಯಿತು. ಇಷ್ಟಕ್ಕೆ ಸುಮ್ಮನಾಗದ ಜನಾರ್ದನ ರೆಡ್ಡಿ ಗಲಾಟೆಯ ಸಂದರ್ಭದಲ್ಲಿ ಪೆಟ್ರೋಲ್ ಬಾಂಬ್ ಹಾಕೋಕೆ ಮುಂದಾದ್ರು. ನಿಮ್ಮ ಕಾರ್ಯಕರ್ತ ಸಾವನ್ನಪ್ಪಿದ್ದಾರೆ. ಆದ್ರೆ ನೀನು ಅದನ್ನೆ ಸಮರ್ಥನೆ ಮಾಡಿಕೊಳ್ಳುತ್ತಿಯಾ ಎಂದ್ರೆ ಹೇಗೆ? ಎಂದು ನಾಗೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ರೆಡ್ಡಿ ಹಾಗೂ ಬಿ.ನಾಗೇಂದ್ರ ನಡುವೆ ಮಾತಿನ ಚಕಮಕಿ ತೀವ್ರ ಸ್ವರೂಪಕ್ಕೆ ತಿರುಗಿತು.

ಇದನ್ನು ನಿಯಂತ್ರಣ ಮಾಡಲು ಸ್ಪೀಕರ್ ಯು.ಟಿ ಖಾದರ್ ಹರಸಾಹಸ ಪಡುವಂತಾಯಿತು. ಜನಾರ್ದನ ರೆಡ್ಡಿ ಅವರನ್ನು ಸುಮ್ಮನಾಗಿಸಲು ಸ್ಪೀಕರ್ ಖಾದರ್, ಸುನೀಲ್ ಕುಮಾರ್ ಅವರಲ್ಲಿ ಮನವಿ ಮಾಡಿದ ಪ್ರಸಂಗ ನಡೆಯಿತು.

TAGGED:b nagendraBellari Banner RiotBharat ReddyJanardhana Reddyಜನಾರ್ದನ ರೆಡ್ಡಿಬಳ್ಳಾರಿ ಬ್ಯಾನರ್‌ ಗಲಾಟೆಬಿ.ನಾಗೇಂದ್ರಭರತ್‌ ರೆಡ್ಡಿ
Share This Article
Facebook Whatsapp Whatsapp Telegram

Cinema news

Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories

You Might Also Like

adugodi women death
Bengaluru City

ಬೆಂಗಳೂರಲ್ಲಿ ಯುವತಿ ಅನುಮಾನಾಸ್ಪದ ಸಾವು – ಬೆತ್ತಲೆ, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

Public TV
By Public TV
3 hours ago
RCB 1
Cricket

ಬೆಂಗಳೂರು ಹೊಡೆತಕ್ಕೆ ಮಕಾಡೆ ಮಲಗಿದ ಡೆಲ್ಲಿ – ಆರ್‌ಸಿಬಿಗೆ 9 ವಿಕೆಟ್‌ಗಳ ಭರ್ಜರಿ ಜಯ 

Public TV
By Public TV
3 hours ago
Panchamasali Peetha 1
Davanagere

ಹರಿಹರ ಪಂಚಮಸಾಲಿ ಗುರುಪೀಠದಲ್ಲಿ ಭಾರಿ ಹೈಡ್ರಾಮಾ – ಚಪ್ಪಲಿ, ಬಾಟೆಲ್ ತೂರಾಟ, ಕರೆಂಟ್ ಕಟ್

Public TV
By Public TV
4 hours ago
ramanath rai team mangaluru
Dakshina Kannada

ಬ್ರಹ್ಮರಕೊಟ್ಲು ಟೋಲ್‌ಗೇಟ್‌ ಬಂದ್‌: ನಾಳೆ ಬೃಹತ್‌ ಜನಾಂದೋಲನ ನಡಿಗೆ

Public TV
By Public TV
5 hours ago
pm modi 5
Latest

ಭಯದಲ್ಲಿ ಬದುಕಿದ್ದು ಸಾಕು.. ನಮಗಿನ್ನು ನಂಬಿಕೆ ಬೇಕು: ಬಂಗಾಳ ಜನತೆಗೆ ಮೋದಿ ಪತ್ರ

Public TV
By Public TV
6 hours ago
4 Of Mumbai Family Die Of Suspected Food Poisoning After Eating Biryani Watermelon
Crime

ಬಿರಿಯಾನಿ, ಕಲ್ಲಂಗಡಿ ತಿಂದ ಒಂದೇ ಕುಟುಂಬದ ನಾಲ್ವರು ಸಾವು

Public TV
By Public TV
6 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?