Connect with us

Crime

ಅಪ್ರಾಪ್ತೆ ಮೇಲೆ ಗ್ಯಾಂಗ್‍ರೇಪ್ ಮಾಡಿ ಬೆಂಕಿ ಹಚ್ಚಿದ್ರು!

Published

on

ಭೋಪಾಲ್: 15 ವರ್ಷದ ಹುಡುಗಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಆಕೆಗೆ ಬೆಂಕಿ ಹಚ್ಚಿರುವ ಹೀನ ಕೃತ್ಯ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ದೆವಾಲ್ ಗ್ರಾಮದಲ್ಲಿ ನಡೆದಿದೆ.

ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ಸಂತ್ರಸ್ತೆಯ ದೇಹ 80% ಸುಟ್ಟು ಹೋಗಿದೆ. ಆಕೆಯನ್ನು ಬುಂದೇಲ್ ಖಂಡ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭಂಗಾರ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಹೇಂದ್ರ ಸಿಂಗ್ ಧಾಕಡ್ ತಿಳಿಸಿದ್ದಾರೆ.

ಆರೋಪಿ ಸರ್ವೇಶ್ ಸೇನ್ (21) ಹಾಗೂ ಮತ್ತೊಬ್ಬ ಆರೋಪಿ ಸಂತ್ರಸ್ತ ಹುಡುಗಿಯ ಮನೆಗೆ ಹೋಗಿದ್ದು, ಆಕೆ ನಿದ್ದೆ ಮಾಡುತ್ತಿದ್ದ ಸಂದರ್ಭದಲ್ಲಿ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಸಂತ್ರಸ್ತೆ ಅಳುತ್ತಾ ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡಿದ್ದಾಳೆ. ಆಗ ಆರೋಪಿಗಳು ಆಕೆಯ ಮನೆಯಲ್ಲಿದ್ದ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಸಿಂಗ್ ತಿಳಿಸಿದರು.

ಕೆಲವು ವರ್ಷಗಳ ಹಿಂದೆ ಸಂತ್ರಸ್ತೆ ತನ್ನ ತಂದೆಯನ್ನ ಕಳೆದುಕೊಂಡಿದ್ದಳು. ಘಟನೆ ನಡೆದ ವೇಳೆ ಆಕೆಯ ತಾಯಿ ಗ್ರಾಮದ ಹೊರವಲಯದಲ್ಲಿರುವ ಅಜ್ಜಿಯ ಮನೆಗೆ ಹೋಗಿದ್ದರು. ಸಂತ್ರಸ್ತೆಯ ಅಜ್ಜ ಕಿವುಡರಾಗಿದ್ದು, ತುಂಬಾ ವಯಸ್ಸಾಗಿತ್ತು. ಅವರು ಮನೆಯ ಹೊರಗೆ ಮಲಗಿದ್ದರು ಎಂದು ಪೊಲೀಸರು ತಿಳಿಸಿದರು.

ಆರೋಪಿಗಳಲ್ಲಿ ಒಬ್ಬನಾದ ಸರ್ವೇಶ್ ಸೇನ್‍ನನ್ನು ಬಂಧಿಸಲಾಗಿದ್ದು, ಐಪಿಸಿ ಸೆಕ್ಷನ್ 376ಡಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮತ್ತೊಬ್ಬ ತಲೆ ಮರಿಸಿಕೊಂಡಿದ್ದಾನೆ. ಅವನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಎಸ್‍ಪಿ ಶುಕ್ಲಾ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *