ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ (Cabinet Expansion) ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ(Congress) ಅಸಮಾಧಾನ ಆಸ್ಫೋಟಗೊಂಡಿದ್ದು ಶಾಸಕರ ಆಕ್ರೋಶ ಭುಗಿಲೆದ್ದಿದೆ. ಡಿಕೆ ಶಿವಕುಮಾರ್ (DK Shivakumar) ಸಂಪುಟದಲ್ಲಿ ನಾವು ಸಚಿವಗುತ್ತೇವೆ ಎಂದುಕೊಂಡಿದ್ದ ಶಾಸಕರಿಗೆ ದೆಹಲಿಯ ಹೈಕಮಾಂಡ್ ನಾಯಕರು ಶಾಕ್ ಕೊಟ್ಟಿದ್ದಾರೆ. ಹೀಗಾಗಿ ಅಸಮಾಧಾನಿತ ಶಾಸಕರು ರಾಜೀನಾಮೆ ಪಥ ತುಳಿದಿದ್ದಾರೆ.
ಈಗಾಗಲೇ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಬೇಳೂರು ಗೋಪಾಲಕೃಷ್ಣ ಸಹ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಹಲವು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ಬಾಕಿ ಇದ್ದ 20 ಸಚಿವ ಸ್ಥಾನಗಳ ಮೇಲೆ ದುಪ್ಪಟ್ಟು ಶಾಸಕರು ಕಣ್ಣಿಟ್ಟಿದ್ದರು. ಆದರೆ ಈಗ ನಿರೀಕ್ಷೆಯಂತೆ ಸಚಿವಾಕಾಂಕ್ಷಿಗಳ ಅಸಮಾಧಾನ ಹೊರ ಹಾಕಿದ್ದಾರೆ.
ಅಸಮಾಧಾನಗೊಂಡ ಶಾಸಕರು ಯಾರು?
ದಿನೇಶ್ ಗುಂಡೂರಾವ್- ಗಾಂಧಿನಗರ
ಟಿ.ಬಿ. ಜಯಚಂದ್ರ -ಶಿರಾ
ಅಪ್ಪಾಜಿ ನಾಡಗೌಡ – ಮುದ್ದೇಬಿಹಾಳ
ಎನ್.ವೈ. ಗೋಪಾಲಕೃಷ್ಣ – ಮೊಳಕಾಲ್ಮೂರು
ಯಶವಂತರಾಯ ಗೌಡ -ಇಂಡಿ ಇದನ್ನೂ ಓದಿ: ಧರ್ಮಸಿಂಗ್ ಕಾಲದಲ್ಲಿ ನನ್ನ, ಪರಮೇಶ್ವರ್‌ರನ್ನ ದೂರ ಇಟ್ಟಿದ್ರು, ತಾಳ್ಮೆ ಇರಬೇಕು: ಅಸಮಾಧಾನಿತ ಶಾಸಕರಿಗೆ ಸಿಎಂ ಕಿವಿಮಾತು
ಬೇಳೂರು ಗೋಪಾಲಕೃಷ್ಣ – ಸಾಗರ
ತನ್ವೀರ್ ಸೇಠ್ – ನರಸಿಂಹರಾಜ
ಸಂಗಮೇಶ್ – ಭದ್ರಾವತಿ
ಹಂಪನಗೌಡ ಬಾದರ್ಲಿ -ಸಿಂಧನೂರು
ಮಂಕಾಳು ವೈದ್ಯ – ಭಟ್ಕಳ
ಪ್ರಸಾದ್ ಅಬ್ಬಯ್ಯ – ಹುಬ್ಬಳ್ಳಿ-ಧಾರವಾಡ ಪೂರ್ವ
ಎಸ್.ಎನ್ ನಾರಾಯಣಸ್ವಾಮಿ – ಬಂಗಾರಪೇಟೆ
ಗಾಯತ್ರಿ ಶಾಂತೇಗೌಡ – ಎಂಎಲ್‌ಸಿ
ಕೆ.ವೈ. ನಂಜೇಗೌಡ – ಮಾಲೂರು
ಸುಬ್ಬಾರೆಡ್ಡಿ – ಬಾಗೇಪಲ್ಲಿ
