ಶಾಸಕರು ಕುಳಿತುಕೊಳ್ಳುವ ಸ್ಥಾನದಲ್ಲಿ ಕುಳಿತಿದ್ದ ರತ್ನಪ್ರಭಾ!

1 Min Read

– ಆಸನ ಖಾಲಿ ಮಾಡಿಸಲು ಎಳೆದಾಡಿದ ಪೊಲೀಸರು

ಬೆಂಗಳೂರು: ಶಾಸಕರಿಗೆ ನಿಗದಿಯಾಗಿದ್ದ ಚೇರ್ ಮೇಲೆ ಕುಳಿತ್ತಿದ್ದ ರಾಜ್ಯ ಕಾಂಗ್ರೆಸ್ ಮಹಿಳಾ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರನ್ನು ಪೊಲೀಸರು ಕೈ ಹಿಡಿದು ಎಳೆದ ಘಟನೆ ರಾಜಭವನದಲ್ಲಿ ಇಂದು ನಡೆಯಿತು.

ರಾಜಭವನದಲ್ಲಿ ಇಂದು ಸಂಜೆ ನಡೆದ ನೂತನ ಸಚಿವ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕರಿಗೆ, ಗಣ್ಯರಿಗೆ ಹಾಗೂ ಸಚಿವರಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಶಾಸಕರಿಗೆ ಮೀಸಲಾಗಿದ್ದ ವೇದಿಕೆಯ ಮುಂದಿನದ ಆಸನದಲ್ಲಿ ರತ್ನಪ್ರಭಾ ಕುಳಿತಿದ್ದರು. ಇದನ್ನು ಗಮನಿಸಿದ ಪೊಲೀಸರು ಇದು ಶಾಸಕರಿಗೆ ಮೀಸಲಾಗಿರುವ ಜಾಗವೆಂದು ಮನವರಿಕೆ ಮಾಡಿದ್ದಾರೆ. ಆದರೆ ಆಸನವನ್ನು ಬಿಟ್ಟುಬರುವುದಿಲ್ಲ ಅಂತಾ ರತ್ನಪ್ರಭಾ ಪಟ್ಟು ಹಿಡಿದಿದ್ದಾರೆ.

ನಾಯಕಿಯ ವರ್ತನೆಯಿಂದ ಬೇಸತ್ತ ಪೊಲೀಸರು ಕೈಹಿಡಿದು ಏಳೆದಾಡಿ ಹೊರ ಕಳುಹಿಸಲು ಪ್ರಯತ್ನಿಸಿದರು. ಆದರೆ ಪಟ್ಟು ಬಿಡದ ರತ್ನಪ್ರಭಾ ಅಲ್ಲಿಂದ ಕದಲೇ ಇಲ್ಲ. ಈ ಘಟನೆಯೂ ಕಾಂಗ್ರೆಸ್ ನಾಯಕರನ್ನು ಮುಜುಗುರಕ್ಕೆ ಗುರಿಮಾಡಿತು. ಶಿಷ್ಠಾಚಾರ ಉಲ್ಲಂಘಿಸಿದ ರತ್ನಪ್ರಭಾ ಅವರ ವಿರುದ್ಧ ಕೆಲವರು ಅಸಮಾಧಾನ ಹೊರಹಾಕಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *