Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೆಟ್ರೋ ದರ ಪರಿಷ್ಕರಣೆ ಕೇಂದ್ರದ ಹೊಣೆ – ತೇಜಸ್ವಿ ಸೂರ್ಯ ಗೂಬೆ ಕೂರಿಸುವುದು ಬೇಡ: ದಿನೇಶ್ ಗುಂಡೂರಾವ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Kalaburagi | ಮೆಟ್ರೋ ದರ ಪರಿಷ್ಕರಣೆ ಕೇಂದ್ರದ ಹೊಣೆ – ತೇಜಸ್ವಿ ಸೂರ್ಯ ಗೂಬೆ ಕೂರಿಸುವುದು ಬೇಡ: ದಿನೇಶ್ ಗುಂಡೂರಾವ್

Kalaburagi

ಮೆಟ್ರೋ ದರ ಪರಿಷ್ಕರಣೆ ಕೇಂದ್ರದ ಹೊಣೆ – ತೇಜಸ್ವಿ ಸೂರ್ಯ ಗೂಬೆ ಕೂರಿಸುವುದು ಬೇಡ: ದಿನೇಶ್ ಗುಂಡೂರಾವ್

Public TV
Last updated: February 8, 2026 3:46 pm
Public TV
Share
2 Min Read
Dinesh Gundu Rao 4
SHARE

ಕಲಬುರಗಿ: ಬೆಂಗಳೂರು ಮೆಟ್ರೋ (Namma Metro) ಟಿಕೆಟ್ ದರ ಪರಿಷ್ಕರಣೆ ವಿಚಾರದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಅನಗತ್ಯವಾಗಿ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೆಟ್ರೋ ದರ ಏರಿಕೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ರಾಜ್ಯ ರಾಜಕೀಯದ ಇತ್ತೀಚಿನ ಬೆಳವಣಿಗೆಗಳ ಕುರಿತು ಬಿಜೆಪಿಯ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಕೇಂದ್ರದಿಂದ ಪತ್ರ ಬಾರದೇ ಇದ್ದರೆ ಮೆಟ್ರೋ ದರ ಏರಿಕೆ ಫಿಕ್ಸ್‌

ಮೆಟ್ರೋ ದರ ಪರಿಷ್ಕರಣೆ ಮಾಡುವ ಸಂಪೂರ್ಣ ಅಧಿಕಾರ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದೆ. ಈ ಸತ್ಯ ಗೊತ್ತಿದ್ದರೂ ಬಿಜೆಪಿಯವರು ಏನಾದರೂ ನೆಪ ಸಿಗುತ್ತದೆಯೇ ಎಂದು ಕಾಯುತ್ತಿರುತ್ತಾರೆ. ಟಿಕೆಟ್ ವಿಚಾರದಲ್ಲೂ ನಮ್ಮ ಮೇಲೆ ಗೂಬೆ ಕೂರಿಸಲು ನೋಡಿದರು. ಆದರೆ, ಈಗ ನಿಜಾಂಶ ಬಯಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಅಧಿಕೃತವಾಗಿ ಪತ್ರ ಬರೆದಿದ್ದು, ದರ ಪರಿಷ್ಕರಣಾ ಸಮಿತಿ ರಚಿಸುವಂತೆ ಕೋರಿದ್ದಾರೆ. ಹೀಗಿರುವಾಗ ಬಿಜೆಪಿ ಸಂಸದರು ನಮ್ಮ ಮೇಲೆ ಆರೋಪ ಮಾಡುವ ಬದಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿ ಎಂದು ಸಚಿವರು ಸವಾಲು ಹಾಕಿದರು.

Tejasvi Surya

ಇವಿಎಂ ಗೊಂದಲ ಮತ್ತು ಬ್ಯಾಲೆಟ್ ಪೇಪರ್ ಬಳಕೆ:
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಬಿಜೆಪಿಯ ವಿರೋಧದ ಕುರಿತು ಮಾತನಾಡಿದ ಅವರು, ವಿಶ್ವದ ಮುಂದುವರಿದ ರಾಷ್ಟ್ರಗಳೇ ಇವಿಎಂ ನಂಬದೆ ಬ್ಯಾಲೆಟ್ ಪೇಪರ್ ಬಳಸುತ್ತಿವೆ. ದೇಶದಲ್ಲಿ ಇವಿಎಂ ಕುರಿತು ಸಾರ್ವಜನಿಕರಲ್ಲಿ ಮತ್ತು ರಾಜಕೀಯ ಪಕ್ಷಗಳಲ್ಲಿ ಸಾಕಷ್ಟು ಸಂಶಯಗಳಿವೆ. ಚುನಾವಣಾ ಆಯೋಗವು ಈ ಗೊಂದಲಗಳನ್ನು ಪರಿಹರಿಸುವ ಕೆಲಸ ಮಾಡಿಲ್ಲ. ಹೀಗಾಗಿ, ಪಾರದರ್ಶಕ ಮತ್ತು ವಿಶ್ವಾಸಾರ್ಹವಾಗಿ ಚುನಾವಣೆ ನಡೆಸಲು ನಾವು ಬ್ಯಾಲೆಟ್ ಪೇಪರ್ ಬಳಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಪಕ್ಷದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಸಚಿವ ಗುಂಡೂರಾವ್, ಯತೀಂದ್ರ ಅವರು ಯಾವ ಸಂದರ್ಭದಲ್ಲಿ ಆ ಮಾತು ಹೇಳಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಸಿಎಂ ಮತ್ತು ಡಿಸಿಎಂ ಇಬ್ಬರೂ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಮೆಟ್ರೋ ನಿಲ್ದಾಣಗಳ ಹತ್ತಿರದಲ್ಲೇ ಬಸ್ ನಿಲ್ದಾಣ ಓಪನ್

ಯೋಗದ ಬಗ್ಗೆ ಹೇಳಲು ನಾನೇನು ಜ್ಯೋತಿಷಿಯಲ್ಲ:
ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಯೋಗವಿದೆಯೇ ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಅವರು, ಯಾರ‍್ಯಾರಿಗೆ ಏನೇನು ಯೋಗ ಇದೆ ಎಂದು ಹೇಳಲು ನಾನೇನು ಜ್ಯೋತಿಷಿಯಲ್ಲ. ರಾಜಕೀಯದಲ್ಲಿ ಎಲ್ಲವೂ ಕಾಲಕ್ಕೆ ತಕ್ಕಂತೆ ನಡೆಯುತ್ತದೆ ಎಂದು ಚಟಾಕಿ ಹಾರಿಸಿದರು.

TAGGED:dinesh gundu raoKalaburaginamma metroಕಲಬುರಗಿದಿನೇಶ್ ಗುಂಡೂರಾವ್ನಮ್ಮ ಮೆಟ್ರೋ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Yadagiri Bus Fire
Bengaluru City

ಮುಖಾಮುಖಿ ಡಿಕ್ಕಿಯಾಗಿ ಧಗಧಗನೆ ಹೊತ್ತಿಯುರಿದ ಖಾಸಗಿ ಬಸ್‌, ಕಾರು – 7 ಮಂದಿ ಸಜೀವ ದಹನ

Public TV
By Public TV
5 minutes ago
Dharmasthala Temple
Dakshina Kannada

ಧರ್ಮಸ್ಥಳ ದೇವರ ದರ್ಶನ ಸಮಯದಲ್ಲಿ ಬದಲಾವಣೆ

Public TV
By Public TV
7 minutes ago
Bengaluru Sarjapura Murder
Bengaluru City

ಕುಡಿದ ಮತ್ತಲ್ಲಿ ಕಿರಿಕ್ – ತಲೆ ಮೇಲೆ ಕಲ್ಲು ಎತ್ತಿಹಾಕಿ ಸ್ನೇಹಿತನ ಕೊಲೆ

Public TV
By Public TV
8 minutes ago
karnataka trekking SOP
Bengaluru City

ರಾಜ್ಯದಲ್ಲಿ ಟ್ರೆಕ್ಕಿಂಗ್‌ಗೆ ಹೊಸ ಗೈಡ್‌ಲೈನ್ಸ್ – ಚಾರಣಿಗರ ಮೊಬೈಲ್‌ಗೆ ಟ್ರ್ಯಾಕಿಂಗ್ ಆ್ಯಪ್ ಕಡ್ಡಾಯ: ಈಶ್ವರ್ ಖಂಡ್ರೆ

Public TV
By Public TV
21 minutes ago
Weather 1
Bengaluru City

ಉರಿಬಿಸಿಲಿನ ಮಧ್ಯೆಯೂ ಏ.21ರವರೆಗೆ ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ

Public TV
By Public TV
35 minutes ago
Channapatna Wild Elephant Attack
Districts

ರಾತ್ರಿವೇಳೆ ಮನೆ ಬಾಗಿಲಿಗೆ ಬಂದ ಕಾಡಾನೆಗಳು – ಬೆಚ್ಚಿಬಿದ್ದ ಮನೆ ಮಾಲೀಕ

Public TV
By Public TV
44 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?