* ಸತ್ಯ ನಿಕೇತನದಲ್ಲಿ ಹಾಸ್ಟೆಲ್ ಕುಸಿದು 7 ಮಂದಿ ಮೃತಪಟ್ಟ ಘಟನೆ ಬೆನ್ನಲ್ಲೇ ಮತ್ತೊಂದು ದುರಂತ
ನವದೆಹಲಿ: ಈಶಾನ್ಯ ದೆಹಲಿಯ (Delhi) ಸೀಮಾಪುರಿ ಪ್ರದೇಶದಲ್ಲಿ ಬುಧವಾರ ಐದು ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿದ್ದು, ಹಲವರು ಸಿಲುಕಿಕೊಂಡಿರುವ ಶಂಕೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸತ್ಯ ನಿಕೇತನದಲ್ಲಿ ಏಳು ಮಂದಿಯ ಸಾವಿಗೆ ಕಾರಣವಾದ ಹಾಸ್ಟೆಲ್ ದುರಂತ ಸಂಭವಿಸಿದ ಒಂದು ತಿಂಗಳ ಬೆನ್ನಲ್ಲೇ ಈ ಅವಘಡ ಆಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮಧ್ಯಾಹ್ನ ಭೋಜನಕೂಟ, ಸಂಜೆ ಆಗ್ತಿದಂಗೆ ಜಂತರ್ ಮಂತರ್‌ನತ್ತ ಹೊರಟ ಸಂಸದರು
ದೆಹಲಿ ಅಗ್ನಿಶಾಮಕ ದಳಕ್ಕೆ (DFS) ಮಧ್ಯಾಹ್ನ 3:30ರ ಸುಮಾರಿಗೆ ಕಟ್ಟಡ ಕುಸಿದಿರುವ ಕುರಿತು ಕರೆ ಬಂದಿತು. ತಕ್ಷಣವೇ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು.
ಸೀಮಾಪುರಿಯಲ್ಲಿ ಬಹುಮಹಡಿ ಕಟ್ಟಡವೊಂದು ಕುಸಿದುಬಿದ್ದಿದ್ದು, ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸೀಮಾಪುರಿ ಗೋಲ್ ಚಕ್ಕರ್, ಡಿಎಲ್‌ಎಫ್ ಭೋಪೂರ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ. ದಯವಿಟ್ಟು ಈ ಪ್ರದೇಶದಲ್ಲಿ ಸಂಚಾರ ಮಾಡಬೇಡಿ. ಘಟನಾ ಸ್ಥಳದ ಬಳಿ ವಾಹನಗಳನ್ನು ನಿಲ್ಲಿಸುವುದು, ಪಾರ್ಕ್ ಮಾಡುವುದು ಅಥವಾ ಗುಂಪುಗೂಡುವುದನ್ನು ಮಾಡಬೇಡಿ. ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸಿ ಎಂದು ದೆಹಲಿ ಸಂಚಾರ ಪೊಲೀಸರು ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: CEC ನೇಮಕಾತಿ ಕಾಯ್ದೆ: ವಿಭಜಿತ ತೀರ್ಪು ಹಿಂಪಡೆಯಲು ಅರ್ಜಿ – ಪರಿಶೀಲಿಸುವ ಭರವಸೆ ನೀಡಿದ ಸಿಜೆಐ

