CinemaKarnatakaLatestMain PostSandalwood

‘ಟಕ್ಕರ್’ ಮೂಲಕ ಪ್ರೇಕ್ಷಕರ ಮನಗೆಲ್ಲೋಕೆ ರೆಡಿಯಾದ ಮನೋಜ್ ಕುಮಾರ್

ಡಿಯೋ ಮತ್ತು ಟೀಸರ್ ಮೂಲಕ ಸಖತ್ ಸುದ್ದಿಯಲ್ಲಿರುವ ‘ಟಕ್ಕರ್’ ಸಿನಿಮಾ ಪ್ರೇಕ್ಷಕರನ್ನು ರಂಜಿಸಲು ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಕಾಲಿಡುತ್ತಿದೆ. ಈ ಚಿತ್ರದ ಮೂಲಕ ನವನಟ ಮನೋಜ್ ಕುಮಾರ್ ಸ್ಯಾಂಡಲ್‌ವುಡ್ ಅಂಗಳಕ್ಕೆ ಗ್ರ‍್ಯಾಂಡ್ ಎಂಟ್ರಿ ಕೊಡ್ತಿದ್ದಾರೆ. ಸೈಬರ್ ಕ್ರೈಂ ಕಥಾಹಂದರ ಒಳಗೊಂಡ ಮಾಸ್ ಆಕ್ಷನ್ ಸಿನಿಮಾ ಇದಾಗಿದ್ದು ಟಕ್ಕರ್ ಮೂಲಕ ಪ್ರೇಕ್ಷಕರ ಮನಗೆದ್ದು ಟರ್ನಿಂಗ್ ಪಾಯಿಂಟ್ ಪಡೆಯೋಕೆ ಮನೋಜ್ ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ.

ಮೊದಲ ಬಾರಿ ನಾಯಕ ನಟನಾಗಿ ಬಣ್ಣ ಹಚ್ಚಿರುವ ಮನೋಜ್ ಕುಮಾರ್ ಸಿನಿಮಾ ರಂಗಕ್ಕೆ ಬರೋಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಪ್ರೇಕ್ಷಕರ ಮನದ ಸಿಂಹಾಸನವನ್ನು ಅಲಂಕರಿಸಲು ನಟನೆ, ಆಕ್ಷನ್, ಡಾನ್ಸ್ ಎಲ್ಲದರಲ್ಲೂ ಪಳಗಿದ್ದಾರೆ. ಕ್ಯಾಚಿ ಟೈಟಲ್ ಈಗಾಗಲೇ ಎಲ್ಲರ ಮನದಲ್ಲೂ ರಿಜಿಸ್ಟರ್ ಆಗಿದೆ. ಸಿನಿಮಾದಲ್ಲಿ ಹೀರೋ ಯಾವ ರೀತಿ ಟಕ್ಕರ್ ಕೊಡ್ತಾರೆ ಅನ್ನೋದಕ್ಕೆ ಸಿನಿಮಾ ಬಿಡುಗಡೆಯಾಗಬೇಕಷ್ಟೆ. ಇದನ್ನೂ ಓದಿ: ‘ಟಕ್ಕರ್’ ನಿರ್ಮಾಪಕರ ಚಾಲೆಂಜಿಂಗ್ ಸ್ಟೋರಿ – ಕಲಾವಿದನಾಗಬಂದವರು ನಿರ್ಮಾಪಕರಾದ ಕಹಾನಿ

ಚಿತ್ರದಲ್ಲಿ ಮನೋಜ್ ಅವರದ್ದು ಕಾಲೇಜ್ ಹುಡುಗನ ಪಾತ್ರ. ಮನೆಯಲ್ಲಿ ಅಸಡ್ಡೆ ಮಾಡಿದ್ರು ಊರಿಗೆ ಉಪಕಾರಿಯಾಗಿರೋ ಮಗನ ಪಾತ್ರ. ಲಾಸ್ಟ್ ಬೆಂಚ್ ಸ್ಟೂಡೆಂಟ್ ಆದ್ರು ಹೊರ ಜಗತ್ತಲ್ಲಿ ಸಿಕ್ಕಾಪಟ್ಟೆ ಟ್ಯಾಲೆಂಟೆಡ್ ಹುಡುಗ. ಮಾಸ್ ಅವತಾರದ ಜೊತೆ, ಲವರ್ ಬಾಯ್ ಆಗಿ ತೆರೆ ಮೇಲೆ ಮಿಂಚಿರೋ ಮನೋಜ್‌ಗೆ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆಯೋ ಬಯಕೆ. ಅದು ಟಕ್ಕರ್ ಸಿನಿಮಾದಿಂದ ಸಾಧ್ಯವಾಗುತ್ತೆ ಅನ್ನೋ ಭರವಸೆಯೂ ಇದೆ. ಸಾಕಷ್ಟು ಹೋಮ್ ವರ್ಕ್, ಪರಿಶ್ರಮದೊಂದಿಗೆ ಈ ಚಿತ್ರದಲ್ಲಿ ನಟಿಸಿದ್ದು ಪ್ರೇಕ್ಷಕರ ರಿಯಾಕ್ಷನ್‌ಗಾಗಿ ಕಾತರರಾಗಿದ್ದಾರೆ. ಚೊಚ್ಚಲ ಸಿನಿಮಾಗಿರುವುದರಿಂದ ಸಹಜವಾಗೇ ಎಕ್ಸೈಟ್‌ಮೆಂಟ್ ಹೆಚ್ಚಿದೆ ಎನ್ನುತ್ತಾರೆ ನಟ ಮನೋಜ್ ಕುಮಾರ್. ಇದನ್ನೂ ಓದಿ: ‘ಟಕ್ಕರ್’ ನಲ್ಲಿ ಡಾಕ್ಟರ್ ಆದ ನಟಿ ರಂಜನಿ ರಾಘವನ್

ರಘು ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಟಕ್ಕರ್. ಈ ಹಿಂದೆ ಹುಲಿರಾಯ ಸಿನಿಮಾ ನಿರ್ದೇಶಿಸಿದ್ದ ನಾಗೇಶ್ ಕೋಗಿಲು ಈ ಸಿನಿಮಾ ನಿರ್ಮಾಣ ಮಾಡಿದ್ದು, ಎಸ್‌ಎಲ್‌ಎನ್ ಕ್ರಿಯೇಷನ್ಸ್ ಬ್ಯಾನರ್‌ನಡಿ ಅದ್ದೂರಿಯಾಗಿ ತೆರೆ ಮೇಲೆ ತಂದಿದ್ದಾರೆ. ಮೇ 6ಕ್ಕೆ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಸಾಧುಕೋಕಿಲ, ಸುಮಿತ್ರ, ಜೈಜಗದೀಶ್, ಭಜರಂಗಿ ಲೋಕಿ ಒಳಗೊಂಡಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

Leave a Reply

Your email address will not be published.

Back to top button