Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading:ಐಕೆ ಗುಜ್ರಾಲ್ ಸಲಹೆ ಪರಿಗಣಿಸಿದ್ದರೆ 1984ರ ಸಿಖ್ ಹತ್ಯಾಕಾಂಡ ತಪ್ಪಿಸಬಹುದಿತ್ತು: ಮನಮೋಹನ್ ಸಿಂಗ್
Share
NotificationShow More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಐಕೆ ಗುಜ್ರಾಲ್ ಸಲಹೆ ಪರಿಗಣಿಸಿದ್ದರೆ 1984ರ ಸಿಖ್ ಹತ್ಯಾಕಾಂಡ ತಪ್ಪಿಸಬಹುದಿತ್ತು: ಮನಮೋಹನ್ ಸಿಂಗ್

Latest

ಐಕೆ ಗುಜ್ರಾಲ್ ಸಲಹೆ ಪರಿಗಣಿಸಿದ್ದರೆ 1984ರ ಸಿಖ್ ಹತ್ಯಾಕಾಂಡ ತಪ್ಪಿಸಬಹುದಿತ್ತು: ಮನಮೋಹನ್ ಸಿಂಗ್

Public TV
Last updated: December 5, 2019 1:05 pm
Public TV
Share
2 Min Read
manmohan singh
SHARE

ನವದೆಹಲಿ: 1984ರಲ್ಲಿ ಐಕೆ ಗುಜ್ರಾಲ್ ಅವರು ನೀಡಿದ್ದ ಸಲಹೆಯನ್ನು ಅಂದಿನ ಗೃಹ ಸಚಿವ ನರಸಿಂಹ ರಾವ್ ಅವರು ಪರಿಗಣಿಸಿದ್ದರೆ ಸಿಖ್ ಮಾರಣಹೋಮವನ್ನು ತಪ್ಪಿಸಬಹುದಿತ್ತು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಹೇಳಿದ್ದಾರೆ.

ಐಕೆ ಗುಜ್ರಾಲ್ ಅವರ 100ನೇ ಜನ್ಮ ದಿನೋತ್ಸದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಮನಮೋಹನ್ ಸಿಂಗ್ ಅವರು, 1984 ರಲ್ಲಿ ನಡೆದ ಘಟನೆ ಸಂದರ್ಭದಲ್ಲಿ ಐಕೆ ಗುಜ್ರಾಲ್ ಅವರು ಸಂಜೆ ಗೃಹ ಸಚಿವ ನರಸಿಂಹ ರಾವ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇಶದಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳ ಬಗ್ಗೆ ಎಚ್ಚರಿಕೆ ನೀಡಿ ಸಾಧ್ಯವಾದಷ್ಟು ಬೇಗ ಸೇನೆಯನ್ನು ನೆರವು ಪಡೆಯಲು ಸಲಹೆ ನೀಡಿದ್ದರು. ಈ ಸಲಹೆಯನ್ನು ನರಸಿಂಹ ರಾವ್ ಅವರು ಪರಿಗಣಿಸಿದ್ದರೆ ಅಂದು ನಡೆದಿದ್ದ ಸಿಖ್ ಹತ್ಯಾಕಾಂಡವನ್ನು ತಪ್ಪಿಸಬಹುದಿತ್ತು ಎಂದು ಅಭಿಪ್ರಾಯವ್ಯಕ್ತಪಡಿಸಿದರು.

MANMOHAN SINGH

ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಐಕೆ ಗುಜ್ರಾಲ್ ಅವರೊಂದಿಗಿನ ಸಂಬಂಧದ ಬಗ್ಗೆಯೂ ಮಾತನಾಡಿರುವ ಸಿಂಗ್, ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದರು. ಈ ವೇಳೆ ಅವರು ಹಲವು ಸಮಸ್ಯೆಗಳನ್ನು ಎದುರಿಸಿದ್ದರು. ಬಳಿಕ ಯೋಜನಾ ಆಯೋಗದ ರಾಜ್ಯ ಸಚಿವರಾಗಿದ್ದರು. ಆ ವೇಳೆ ಅವರಿಗೆ ನಾನು ಸಚಿವಾಲಯದ ಸಲಹೆಗಾರನಾಗಿದ್ದೆ, ನಂತರ ನಮ್ಮಿಬ್ಬರ ಸಂಬಂಧ ಗಟ್ಟಿಯಾಯಿತು ಎಂದು ಹೇಳಿದ್ದಾರೆ. ಇದನ್ನು ಓದಿ:ಒಳ್ಳೆಯ ವ್ಯಕ್ತಿತ್ವ ಇರೋ ಮನುಷ್ಯ- ಮನಮೋಹನ್ ಸಿಂಗ್‍ರನ್ನು ಹೊಗಳಿದ ಖುರೇಷಿ

ಅಂದಹಾಗೇ ಐಕೆ ಗುಜ್ರಾಲ್ ಅವರು, 1997ರ ಏಪ್ರಿಲ್ ನಿಂದ 1998ರ ಮಾರ್ಚ್ ವರೆಗೂ ದೇಶದ 12ನೇ ಪ್ರಧಾನಿಯಾಗಿದ್ದರು. 1984ರಲ್ಲಿ ಪ್ರಧಾನಿ ಇಂಧಿರಾ ಗಾಂಧಿ ಅವರನ್ನು ಅವರ ಸಿಖ್ ಅಂಗರಕ್ಷಕರೇ ಹತ್ಯೆ ಮಾಡಿದ್ದರು. ಈ ಹತ್ಯೆಯ ಪ್ರತೀಕಾರವಾಗಿ ನಡೆದ ಘರ್ಷಣೆಯಲ್ಲಿ ನವದೆಹಲಿಯೊಂದರಲ್ಲೇ 2,800 ಜನರನ್ನು ಹತ್ಯೆ ಮಾಡಲಾಗಿತ್ತು. ದೇಶಾದ್ಯಂತ ಈ ಸಾವಿನ ಸಂಖ್ಯೆ 3 ಸಾವಿರ ಜನರನ್ನು ದಾಟಿತ್ತು. ಸರ್ಕಾರಿ ಅಂಕಿ ಅಂಶಗಳು 3,350 ಮಂದಿ ಸಿಖ್ ಹತ್ಯಾಕಾಂಡದಲ್ಲಿ ಬಲಿಯಾಗಿದ್ದಾರೆ ಎಂದು ತಿಳಿಸಿದರೆ, ಸ್ವತಂತ್ರ ಸಂಸ್ಥೆಗಳು ನೀಡಿರುವ ಮಾಹಿತಿ ಅನ್ವಯ ಈ ಸಂಖ್ಯೆ 8 ಸಾವಿರದಿಂದ 17 ಸಾವಿರ ಮಂದಿಯ ಹತ್ಯೆ ಮಾಡಲಾಗಿತ್ತು ಎಂದಿದೆ. ಈ ಹತ್ಯಾಕಾಂಡ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಕಪ್ಪುಚುಕ್ಕೆಯಾಗಿತ್ತು.

PV NARASIMHA RAO

TAGGED:I K GujralIndira GandhiManmohan SinghNew DelhiPublic TVSikh Massacreಇಂದಿರಾ ಗಾಂಧಿಐಕೆ ಗುಜ್ರಾಲ್ನವದೆಹಲಿಪಬ್ಲಿಕ್ ಟಿವಿಮನಮೋಹನ್ ಸಿಂಗ್ಸಿಖ್ ಹತ್ಯಾಕಾಂಡ
Share This Article
FacebookWhatsappWhatsappTelegram

Cinema news

Vijay Trisha Krishnan
ತಿರುಪತಿಯಿಂದ ನೇರ ವಿಜಯ್ ಮನೆಗೆ ತೆರಳಿದ ತ್ರಿಷಾ
CinemaLatestNationalTop Stories
Trisha at tirupati
ನಟ ವಿಜಯ್‌ ಗೆಲುವಿಗಾಗಿ ತಿಮ್ಮಪ್ಪನ ಮೊರೆ ಹೋದ ತ್ರಿಷಾ
CinemaLatestNationalTop Stories
darshan 1
ಜೈಲಿನಲ್ಲಿ ಅಮಾನವೀಯ ವರ್ತನೆ, ಸಹಕೈದಿಗಳಿಂದ ಬೆದರಿಕೆ- ವೃತ್ತಿಜೀವನಕ್ಕೆ ಮರಣಗಂಟೆ: ಸುಪ್ರೀಂನಲ್ಲಿ ದರ್ಶನ್ ಅಳಲು
Bengaluru CityCinemaCourtLatestMain Post
Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru CityCrimeDistrictsKarnatakaLatestSandalwoodTop Stories

You Might Also Like

Vijay Car Driver
Latest

ವಿಜಯ್‌ ಕಾರು ಚಾಲಕನ ಪುತ್ರನಿಗೆ ಖುಲಾಯಿಸಿದ ಅದೃಷ್ಟ – ಗೆಲುವಿನ ಸನಿಹದತ್ತ ಶಬರಿನಾಥನ್‌

Public TV
ByPublic TV
13 minutes ago
R Ashok 3
Bengaluru City

ಬಂಗಾಳ ಫಲಿತಾಂಶದಿಂದ ಬಾಂಗ್ಲಾ, ಪಾಕಿಸ್ತಾನಕ್ಕೆ ಆಘಾತ: ಆರ್.ಅಶೋಕ್

Public TV
ByPublic TV
15 minutes ago
bjp flag
Latest

ಕಳೆದ ಬಾರಿ ಶೂನ್ಯ – ಈ ಬಾರಿ ಕೇರಳದಲ್ಲಿ ಖಾತೆ ತೆರೆದ ಬಿಜೆಪಿ

Public TV
ByPublic TV
23 minutes ago
Samarth Mallikarjun
Davanagere

ದಾವಣಗೆರೆಯಲ್ಲಿ ಕಾಂಗ್ರೆಸ್‌ ಗೆಲುವು – ಸಮರ್ಥ್‌ ಮಲ್ಲಿಕಾರ್ಜುನ್‌ಗೆ ವಿಜಯಮಾಲೆ

Public TV
ByPublic TV
26 minutes ago
DN Jeevaraj
Chikkamagaluru

ಅಂಚೆ ಮತ ಮರು ಎಣಿಕೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗೆ ECI ಪ್ರಮಾಣ ಪತ್ರ

Public TV
ByPublic TV
31 minutes ago
modi hd kumaraswamy
Bengaluru City

ಪ್ರಧಾನಿ ಮೋದಿ ದೂರದೃಷ್ಟಿಯ ನಾಯಕತ್ವಕ್ಕೆ ಎನ್‌ಡಿಎ ಭರ್ಜರಿ ಗೆಲುವು – ಅಭಿನಂದನೆ ಸಲ್ಲಿಸಿದ ಹೆಚ್‌ಡಿಕೆ

Public TV
ByPublic TV
55 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?