– ನೇಪಾಳ ಜೊತೆ ನಿಲ್ಲುವಂತೆ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ
ಬೆಂಗಳೂರು: ಯಾವುದೇ ಫೈಲ್ ನನ್ನ ಬಳಿ ಬರದೇ ಹೋವುದಿಲ್ಲ. ಯಾರನ್ನೇ ಸೇರಿಸಬೇಕಿದ್ರೂ, ತೆಗೆಯಬೇಕಾದ್ರೂ ನನ್ನ ಬಳಿಯೇ ಬರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ತಿಳಿಸಿದರು.
ಸಚಿವ ಸಂಪುಟ ಬದಲಾವಣೆ ವಿಚಾರವಾಗಿ ಸಿಎಂ ಡಿಕೆಶಿ (DK Shivakumar) ದೇಹಲಿ ಭೇಟಿ ಸಂಬಂಧ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ನಿಮಗೇನಾದ್ರೂ ಗೊತ್ತಿದ್ರೆ ಹೇಳಿ, ನನಗೇನು ಗೊತ್ತಿಲ್ಲ. ನಾನು ಕಲಬುರಗಿಯಲ್ಲಿ ಇದ್ದೇನೆ ಏನಾದ್ರು ಬರಬೇಕಾದ್ರೆ ನನ್ನ ಬಳಿಯೇ ಬರಬೇಕು ತಾನೆ ಎಂದರು.

ಯಾವುದೇ ಫೈಲ್ ನನ್ನ ಬಳಿ ಬರದೇ ಹೋಗೋದಿಲ್ಲ. ಯಾರನ್ನೇ ಸೇರಿಸಬೇಕು, ಯಾರನ್ನ ತೆಗೆಯಬೇಕಾದ್ರೂ ನನ್ನ ಬಳಿಯೇ ಬರಬೇಕು. ಹಾಗೆ ನನ್ನ ಬಳಿ ಫೈಲ್ ಬಂದಾಗ ನಿಮಗೆ ತಿಳಿಸುತ್ತೇನೆ ಎಂದು ಹೇಳಿದರು.
ಇನ್ನೂ ನೇಪಾಳ ಪ್ರವಾಹದಲ್ಲಿ (Nepal Flood) ಭಾರತೀಯರು ನಾಪತ್ತೆಯಾಗಿರುವ ಬಗ್ಗೆ ಮಾತನಾಡಿ, ನೇಪಾಳ ಪ್ರವಾಹದಲ್ಲಿ ಕರ್ನಾಟಕ ಮಾತ್ರವಲ್ಲ, ದೇಶದ ಸಾಕಷ್ಟು ಜನ ಸಿಲುಕಿದ್ದಾರೆ. ನೂರಾರು ಜನ ಕೊಚ್ಚಿಹೋಗಿದ್ದಾರೆ. ಅವರೆಲ್ಲರಿಗೂ ನಾನು ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಜೊತೆಗೆ ಪ್ರಧಾನಿಗೆ ಪತ್ರ ಬರೆದಿದ್ದೇನೆ. ಕರ್ನಾಟಕ ಅಷ್ಟೇ ಅಲ್ಲಾ ದೇಶದ ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ ಅವರಿಗೆ ಪರಹಾರ ಕೊಡಬೇಕು. ನೇಪಾಳದ ಜೊತೆಗೆ ನಿಲ್ಲುವಂತೆ ಕೂಡ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.
