ಕಾರ್ಪೋರೇಟ್‌ ಜಿಹಾದ್‌ಗೆ ಮಲೇಷ್ಯಾ ಲಿಂಕ್‌ – ವಿದೇಶಿ ಉದ್ಯೋಗ ಮಾರ್ಗದರ್ಶಕನಾಗಿದ್ದ ಧಾರ್ಮಿಕ ಬೋಧಕ!

2 Min Read

– ವಿಡಿಯೋ ಕಾಲ್‌ ಮೂಲಕ ಮಹಿಳಾ ಉದ್ಯೋಗಿಗಳ ಜೊತೆ ಸಂಪರ್ಕ
– ಒತ್ತಡ ಹೇರಿ ಧಾರ್ಮಿಕ ಮತಾಂತರಕ್ಕೆ ಪ್ರಚೋದನೆ

ಮುಂಬೈ: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಬಿಪಿಒ ಘಟಕದಲ್ಲಿ ನಡೆದ ಕಾರ್ಪೋರೇಟ್‌ ಜಿಹಾದ್‌ (Corporate Jihad) ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೇಷ್ಯಾ ಲಿಂಕ್‌ (Malaysia Link) ಇರುವುದು ದೃಢಪಟ್ಟಿದೆ.

ತನಿಖೆಯ ವೇಳೆ ಆರೋಪಿಗಳ ವಾಟ್ಸಪ್ ಚಾಟ್‌ಗಳನ್ನು ವಿಶೇಷ ತನಿಖಾ ತಂಡ(SIT) ಪರಿಶೀಲಿಸಿದಾಗ ಮಲೇಷ್ಯಾ ಮೂಲದ ಇರ್ಮನ್ (Irman) ಜೊತೆ ಅವರು ಅವರು ಸಂಪರ್ಕದಲ್ಲಿದ್ದ ವಿಚಾರ ಬೆಳಕಿಗೆ ಬಂದಿದೆ.

ಈಗ ವಿಡಿಯೋ ಕಾಲ್‌ಗಳ ಮೂಲಕ ಅಲ್ಲಿನ ಮಹಿಳಾ ಉದ್ಯೋಗಿಗಳೊಂದಿಗೆ ಸಂಪರ್ಕದಲ್ಲಿದ್ದ. ಮಹಿಳಾ ಉದ್ಯೋಗಿಗಳಿಗೆ ಮಲೇಷ್ಯಾದಲ್ಲಿ ಹೆಚ್ಚಿನ ಸಂಬಳದ ಕೆಲಸ ಕೊಡಿಸುವುದಾಗಿ ನಂಬಿಸಿ ಅವರ ಪಾಸ್‌ಪೋರ್ಟ್ ಮತ್ತು ಆಧಾರ್ ಕಾರ್ಡ್‌ಗಳನ್ನು ಪಡೆದುಕೊಳ್ಳಲಾಗಿತ್ತು ಎಂಬ ಗಂಭೀರ ಆರೋಪ ಈಗ ಕೇಳಿಬಂದಿದೆ.

ತನಿಖೆ ವೇಳೆ ಇರ್ಮನ್ ಮಲೇಷ್ಯಾದಲ್ಲಿ ನೆಲೆಸಿರುವ ಒಬ್ಬ ಧಾರ್ಮಿಕ ಬೋಧಕ (Preacher) ಎನ್ನುವುದು ಗೊತ್ತಾಗಿದೆ. ಈತ ಪ್ರಕರಣದ ಪ್ರಮುಖ ಆರೋಪಿಗಳ ಜೊತೆ ವಾಟ್ಸಪ್, ವಿಡಿಯೋ ಕಾಲ್ ಮೂಲಕ ಸಂಪರ್ಕದಲ್ಲಿದ್ದ. ಇದನ್ನೂ ಓದಿ: ಇನ್ಫೋಸಿಸ್‌ನಲ್ಲೂ ಕಾರ್ಪೋರೇಟ್‌ ಜಿಹಾದ್‌ ಆರೋಪ – ಮಹಾ ಸಚಿವರಿಗೆ ದೂರು

ಬಂಧಿತ ಆರೋಪಿಗಳಾದ ಡ್ಯಾನಿಶ್ ಶೇಖ್ ಮತ್ತು ಇತರರು ಈತನನ್ನು ಉದ್ಯೋಗಿಗಳಿಗೆ ವಿದೇಶಿ ಉದ್ಯೋಗದ ಮಾರ್ಗದರ್ಶಕ ಎಂಬಂತೆ ಪರಿಚಯಿಸುತ್ತಿದ್ದರು. ಈತನೊಂದಿಗೆ ನಡೆಸಿದ ವಾಟ್ಸಪ್ ಸಂಭಾಷಣೆಗಳನ್ನು ಎಸ್‌ಐಟಿ ವಶಪಡಿಸಿಕೊಂಡಿದೆ.

ಇರ್ಮನ್ ವಿಡಿಯೋ ಕಾಲ್‌ಗಳ ಮೂಲಕ ಮಹಿಳಾ ಉದ್ಯೋಗಿಗಳಿಗೆ ಮಲೇಷ್ಯಾದಲ್ಲಿ ಹೆಚ್ಚು ಸಂಬಳವಿರುವ ಕೆಲಸ ಮತ್ತು ಉತ್ತಮ ಜೀವನಶೈಲಿಯ ಆಮಿಷ ತೋರಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೆ ಮಹಿಳೆಯರ ಮೇಲೆ ಮಾನಸಿಕ ಒತ್ತಡ ಹೇರಿ ಧಾರ್ಮಿಕ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದ.

ಈತ ಕೇವಲ ವೈಯಕ್ತಿಕವಾಗಿ ಸಂಪರ್ಕದಲ್ಲಿದ್ದನೇ ಅಥವಾ ಅಂತರಾಷ್ಟ್ರೀಯ ಮಾನವ ಕಳ್ಳಸಾಗಣೆ (Human Trafficking) ಅಥವಾ ಸಂಘಟಿತ ಮತಾಂತರ ಜಾಲದ ಭಾಗವಾಗಿದ್ದನೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: Corporate Jihad | ಹಿಂದೂ ಮಹಿಳಾ ಉದ್ಯೋಗಿಗಳಿಗೆ ಬಲವಂತವಾಗಿ ಗೋಮಾಂಸ ಸೇವಿಸುವಂತೆ, ನಮಾಜ್‌ ಮಾಡುವಂತೆ ಒತ್ತಾಯ

ಈ ಹಗರಣವನ್ನು ಬಯಲಿಗೆಳೆಯಲು ಮಹಿಳಾ ಪೊಲೀಸರು ಸುಮಾರು 40 ದಿನಗಳ ಕಾಲ ಕಂಪನಿಯಲ್ಲಿ ಸ್ವಚ್ಛತಾ ಕಾರ್ಮಿಕರ ಸೋಗಿನಲ್ಲಿ ಗುಪ್ತಚರ ಕಾರ್ಯಾಚರಣೆ ನಡೆಸಿದ್ದರು.

ಬಂಧಿತರು ಯಾರು?
ಆಸಿಫ್ ಅನ್ಸಾರಿ, ಶಾಫಿ ಶೇಖ್, ಶಾರುಖ್ ಖುರೇಷಿ, ರಜಾ ಮೇಮನ್, ತೌಸಿಫ್ ಅತ್ತಾರ್ ಮತ್ತು ಅಶ್ವಿನ್ ಚೈನಾನಿ ಸೇರಿದಂತೆ ಏಳು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಉದ್ಯೋಗಿಗಳ ದೂರುಗಳನ್ನು ನಿರ್ಲಕ್ಷಿಸಿದ ಆರೋಪದ ಮೇಲೆ ಪುಣೆ ಮೂಲದ ಹೆಚ್‌ಆರ್ ಮ್ಯಾನೇಜರ್ ನಿಧಾ ಖಾನ್‌ಳನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

Share This Article