ಕವರಟ್ಟಿ: ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದಡಿ ಲಕ್ಷದ್ವೀಪ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಕಾಸಿಂ ಎಚ್‍ಕೆ ವಿರುದ್ಧ ಕವರಟ್ಟಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೊಹಮ್ಮದ್ ಕಾಸಿಂ ಅವರು ತಮ್ಮ ಪತ್ನಿಯೊಂದಿಗೆ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಿಡಿದಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಈ ಕುರಿತಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಅವರಿಗೆ ನೋಟಿಸ್ ಕಳುಹಿಸಿದ್ದಾರೆ.
Advertisement
Advertisement
CrPC ಯ ಸೆಕ್ಷನ್ 41-A ನ ಸೆಕ್ಷನ್ (1) ಉಪವಿಭಾಗದ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸುವಾಗ, ರಾಷ್ಟ್ರಧ್ವಜಕ್ಕೆ U/s 2 ಅವಮಾನ ಮಾಡಿರುವ ಆರೋಪದಡಿ ನೀವು ಕವರಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಆರೋಪಿ ಎಂದು ಶಂಕಿಸಲಾಗಿರುಬುದಾಗಿ ಈ ಮೂಲಕ ತಿಳಿಸುತ್ತೇನೆ. ಇದನ್ನೂ ಓದಿ: ಮದರಸಾಗಳಲ್ಲಿ ಇನ್ಮುಂದೆ ರಾಷ್ಟ್ರಗೀತೆ ಕಡ್ಡಾಯ – ಶೀಘ್ರವೇ ಸರ್ಕಾರದ ಆದೇಶ ಸಾಧ್ಯತೆ
Advertisement
Advertisement
ಆಗಸ್ಟ್ 14 ರಂದು ರಾಷ್ಟ್ರೀಯ ಗೌರವ ಕಾಯಿದೆ 1971ರ ಪ್ರಕಾರ ಮತ್ತು ಈ ಪ್ರಕರಣದ ವಿಚಾರಣೆಗಾಗಿ ಆಗಸ್ಟ್ 25 ರಂದು ಬೆಳಗ್ಗೆ 10:30ಕ್ಕೆ ಲಕ್ಷದ್ವೀಪದ ಕವರಟ್ಟಿ, ಲಕ್ಷದ್ವೀಪ ಪೊಲೀಸ್ ಠಾಣೆಗೆ ಹಾಜರಾಗಲು ನಿಮಗೆ ಸೂಚಿಸಲಾಗಿದೆ. ಈ ಆದೇಶದ ಅನುಸಾರ ಬರಲು ನಿರಾಕರಿಸಿದ್ದಕ್ಕೆ U/s 174 IPC ಶಿಕ್ಷಾರ್ಹವಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ ಎಂದು ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ಸಿರಿಯಾ ಗಡಿಯಲ್ಲಿ ಟರ್ಕಿಯ ವೈಮಾನಿಕ ದಾಳಿ – 17 ಸೈನಿಕರ ಸಾವು