InternationalLatestMain Post

ಸಿರಿಯಾ ಗಡಿಯಲ್ಲಿ ಟರ್ಕಿಯ ವೈಮಾನಿಕ ದಾಳಿ – 17 ಸೈನಿಕರ ಸಾವು

ಡಮಾಸ್ಕಸ್: ಸಿರಿಯಾ ಗಡಿ ಪೋಸ್ಟ್‌ಗಳ ಮೇಲೆ ಟರ್ಕಿಯ ಆಡಳಿತ ಪಡೆಗಳು ವೈಮಾನಿಕ ದಾಳಿಕ ನಡೆಸಿರುವ ಪರಿಣಾಮ 17 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸಿರಿಯಾ ಗಡಿ ಬಳಿಯ ಹಲವಾರು ಆಡಳಿತದ ಹೊರಠಾಣೆಗಳ ಮೇಲೆ ಟರ್ಕಿಯ ವೈಮಾನಿಕ ದಾಳಿ ನಡೆದಿದ್ದು, ಘಟನೆಯಲ್ಲಿ 17 ಯೋಧರು ಮೃತಪಟ್ಟಿದ್ದಾರೆ ಎಂದು ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗ್ತಿದ್ದಂತೆಯೇ ಸ್ಥಾನ ತೊರೆದ ಗುಲಾಂ ನಬಿ ಆಜಾದ್

ಬಲಿಪಶುಗಳು ಸಿರಿಯಾ ಅಥವಾ ಕುರ್ದಿಶ್ ಪಡೆಗಳೊಂದಿಗೆ ಸಂಬಂಧ ಹೊಂದಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಟರ್ಕಿಯ ದಾಳಿಯಲ್ಲಿ ಮೂವರು ಸಿರಿಯಾದ ಸೈನಿಕರು ಮೃತಪಟ್ಟಿದ್ದಾರೆ ಹಾಗೂ 6 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಟರ್ಕಿಯ ಪಡೆಗಳು ಹಾಗೂ ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್(ಎಸ್‌ಡಿಎಫ್) ನಡುವೆ ಕುರ್ದಿಶ್ ಹಿಡಿತದಲ್ಲಿರುವ ಕೊಬಾನ್ ಪಟ್ಟಣದಲ್ಲಿ ಘರ್ಷಣೆ ನಡೆದಿದೆ. ಕುರ್ದಿಷ್ ಪಡೆಗಳು ರಾತ್ರಿಯಿಡೀ ಟರ್ಕಿಯ ಪ್ರದೇಶದೊಳಗೆ ದಾಳಿ ಮಾಡಿ, ಒಬ್ಬ ಸೈನಿಕನನ್ನು ಕೊಂದಿದ್ದಾರೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಸಹಜ ಸ್ಥಿತಿಯತ್ತ ಶಿವಮೊಗ್ಗ: ಇಂದಿನಿಂದ ಶಾಲಾ-ಕಾಲೇಜು ಓಪನ್

ಟರ್ಕಿ 2016ರಿಂದ ಕುರ್ದಿಶ್ ಪಡೆಗಳು ಹಾಗೂ ಇಸ್ಲಾಮಿಕ್ ರಾಜ್ಯಗಳ ಗುಂಪನ್ನು ಗುರಿಯಾಗಿಸಿಕೊಂಡು ಆಕ್ರಮಣಗಳನ್ನು ನಡೆಸುತ್ತಿವೆ. ಆದರೆ ದಾಳಿಗೆ ಸಿರಿಯಾದ ಸೈನಿಕರೂ ಬಲಿಯಾಗುತ್ತಿದ್ದಾರೆ.

Live Tv

Leave a Reply

Your email address will not be published.

Back to top button