Bengaluru CityDistrictsKarnatakaLatestLeading News

ಎಲ್ಲಾ ಶಾಲೆಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ- ಶೀಘ್ರವೇ ಸರ್ಕಾರದ ಆದೇಶ ಸಾಧ್ಯತೆ

- ಮದರಸಾಗಳಲ್ಲಿಯೂ ರಾಷ್ಟ್ರಗೀತೆ ಕಡ್ಡಾಯ

ಬೆಂಗಳೂರು: ನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳಾದ ಬಿಷಪ್ ಕಾಟನ್, ಬಾಲ್ಡ್ ವಿನ್, ಸೆಂಟ್ ಜೋಸೆಫ್ ಶಾಲೆಗಳಲ್ಲಿ ನಿತ್ಯ ರಾಷ್ಟ್ರಗೀತೆ ಹಾಡಿಸದ್ದನ್ನ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಬೇಕು ಎಂದು ಸುತ್ತೋಲೆ ಹೊರಡಿಸಲು ಮುಂದಾಗಿದೆ.

ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ. ಈ ಬೆನ್ನಲ್ಲೇ ಖಾಸಗಿ ಶಾಲೆಗಳ ಜೊತೆಗೆ ಮದರಸಾಗಳಲ್ಲೂ ನಿತ್ಯ ರಾಷ್ಟ್ರಗೀತೆ ಹಾಡಿಸುತ್ತಿಲ್ಲ ಎಂಬ ದೂರು ಶಿಕ್ಷಣ ಇಲಾಖೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಸಚಿವರು, ಮದರಸಾಗಳಲ್ಲೂ ಕಡ್ಡಾಯವಾಗಿ ನಿತ್ಯ ರಾಷ್ಟ್ರಗೀತೆ ಹಾಡಿಸಲು ಸುತ್ತೋಲೆ ಹೊರಡಿಸುವಂತೆ ನಿರ್ದೇಶನ ನೀಡಿದ್ದಾರೆ.

ಇಂದು ಅಥವಾ ನಾಳೆ ಒಳಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆ ಇದೆ. ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆ ನಿತ್ಯ ಹಾಡಿಸದೇ ಹೋದರೆ ಮದರಸಾಗಳ ಮೇಲೆ ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ. ಈ ಬಗ್ಗೆ ನಿಗಾ ಇರಿಸಲು ಡಿಡಿಪಿಐ ಮತ್ತು ಬಿಇಓ ನೇತೃತ್ವದಲ್ಲಿ ತಂಡ ರಚನೆ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗ್ತಿದ್ದಂತೆಯೇ ಸ್ಥಾನ ತೊರೆದ ಗುಲಾಂ ನಬಿ ಆಜಾದ್

Live Tv

Leave a Reply

Your email address will not be published.

Back to top button