Connect with us

Crime

ಕುತ್ತಿಗೆಗೆ ಚಾಕು ಇಟ್ಟು ಫೋಟೋ ತೆಗೆದು ವಾಟ್ಸಪ್ ಮಾಡಿ 3 ಕೋಟಿಗೆ ಡಿಮ್ಯಾಂಡ್

Published

on

ಹೈದರಾಬಾದ್: ವ್ಯಾಪಾಸ್ಥರೊಬ್ಬರನ್ನು ಕಿಡ್ನಾಪ್ ಮಾಡಿ ಕುತ್ತಿಗೆಗೆ ಚಾಕು ಇಟ್ಟು ಫೋಟೋ ತೆಗೆದು ಅದನ್ನು ಕುಟುಂಬವರಿಗೆ ವಾಟ್ಸಪ್ ಮೂಲಕ ಕಳುಹಿಸಿ ಹಣಕ್ಕಾಗಿ ಬೇಡಿಕೆ ಮಾಡಿದ್ದಾರೆ. ಆದರೆ ಕುಟುಂಬದವರು ಹಣ ಕೊಡಲು ನಿರಾಕರಿಸಿದ್ದರಿಂದ ಕೋಪಗೊಂಡು ಅಪಹರಣಕಾರರು ವ್ಯಕ್ತಿಯನ್ನು ಕೊಂದೇ ಬಿಟ್ಟಿದ್ದಾರೆ.

ಕುಶೈಗುಡಾ ಪೊಲೀಸ್ ವ್ಯಾಪ್ತಿಯ ಮಹೇಶ್ ನಗರದ ನಿವಾಸಿ ವಾಸುದೇವ್‍ರಾಜ್ ಅಪಹರಣಗಾರರಿಂದ ಹತ್ಯೆಯಾದ ದುರ್ದೈವಿ. ಈ ಘಟನೆ ಹೈದರಾಬಾದಿನ ಕುಶೈಗುಡಾದಲ್ಲಿ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಪರಿಚಿತ ವ್ಯಕ್ತಿಯೊಬ್ಬ ವಾಸುದೇವ್ ಬಳಿ ಬಂದು ನಿಮ್ಮ ಬಳಿ ವ್ಯಾಪಾರದ ಒಪ್ಪಂದ ಮಾಡಿಕೊಳ್ಳಬೇಕು ನಮ್ಮ ಮನೆಗೆ ಬನ್ನಿ ಎಂದು ಹೇಳಿದ್ದಾನೆ. ಅದರಂತೆ ವಾಸ್‍ದೇವ್ ಆತನ ಮನೆಗೆ ತೆರಳಿದಾಗ ಅಲ್ಲಿ ಅವರನ್ನು ಸಿಂಗಾಪುರಕ್ಕೆ ಕರೆದುಕೊಂಡಿದ್ದಾರೆ. ಅಲ್ಲಿ ಅವರ ಶರ್ಟ್ ಬಿಚ್ಚಿಸಿ, ಕೈ ಕಾಲು ಕಟ್ಟಿ ಹೊಡೆದು ಕುತ್ತಿಗೆಗೆ ಚಾಕು ಇಟ್ಟು ಫೋಟೋ ತೆಗೆದು ವಾಟ್ಸಪ್ ಮೂಲಕ 3 ಕೋಟಿ ರೂ. ಹಣದ ಬೇಡಿಕೆ ಇಟ್ಟಿದ್ದಾರೆ.

ಆದರೆ ಕುಟುಬಂಸ್ಥರು ಹಣ ಕೊಡಲು ನಿರಾಕರಿಸಿ ಅಪಹರಣಕಾರರ ಬಳಿ ವಾಸುದೇವ್ ಅವರನ್ನು ಬಿಡುವಂತೆ ಕೇಳಿಕೊಂಡಿದ್ದರು. ಆದರೆ ಹಣ ಸಿಗಲಿಲ್ಲ ಎಂದು ಕೋಪಗೊಂಡ ಅಪಹರಣಗಾರರು ವಾಸುದೇವ್ ಅವರನ್ನು ಕೊಲೆ ಮಾಡಿದ್ದಾರೆ.

ಹತ್ಯೆಯಾದ ವಾಸುದೇವ್ ಆರ್.ಕೆ ಎಂಟರ್‍ಪ್ರೈಸ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ಆರ್ಥಿಕವಾಗಿ ಸಮಸ್ಯೆಗಳನ್ನ ಹೊಂದಿದ್ದು, ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಕೂಡ ಬಳಲುತ್ತಿದ್ದರು. ಈಗ ಭಾರತೀಯ ರಾಯಭಾರಿ ಅಧಿಕಾರಿಗಳು ವಾಸುದೇವ್ ಅವರ ಶವವನ್ನು ಹೈದರಾಬಾದ್‍ಗೆ ಶನಿವಾರ ತರುವ ಪ್ರಯತ್ನ ನಡೆಸುತ್ತಿದ್ದಾರೆ.

 

Click to comment

Leave a Reply

Your email address will not be published. Required fields are marked *