-ಸಿಎಂ-ಡಿಸಿಎಂ ನಡುವೆ ಜಿಬಿಎ ಚುನಾವಣೆ ವಿಚಾರದಲ್ಲಿ ಸಂಘರ್ಷ ನಡೆಯುತ್ತಿದೆ
ಬೆಂಗಳೂರು: ಕೆಪಿಎಸ್‌ಸಿ (KPSC) ಹಾಳಾಗೋಕೆ ಕಾಂಗ್ರೆಸ್ ಕಾರಣ, ಇವರ ಅವಧಿಯಲ್ಲಿ ಎಷ್ಟು ಬಾರಿ ಪೇಪರ್ ಲೀಕ್ ಆಗಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.
ನೀಟ್ ಮರು ಪರೀಕ್ಷೆ ವಿಚಾರವಾಗಿ ವಿಪಕ್ಷಗಳ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ರಾಜ್ಯದಲ್ಲಿ ಎಷ್ಟು ಬಾರಿ ಪರೀಕ್ಷೆ ಮುಂದೆ ಹಾಕಿದ್ದೀರಾ? ಕಾಂಗ್ರೆಸ್ ಕಾಲದಲ್ಲಿ ಎಷ್ಟು ಅನಾಹುತ ಆಗಿಲ್ಲ? ನಮ್ಮ ರಾಜ್ಯದಲ್ಲಿ ಕೆಪಿಎಸ್‌ಸಿ ಸಂಸ್ಥೆಯನ್ನು ಸರಿಪಡಿಸಲು ಆಗಲಿಲ್ಲ. ಕೆಪಿಎಸ್‌ಸಿ ಬಗ್ಗೆ ಜನ ಯಾವ ರೀತಿ ಮಾತಾಡ್ತಾರೆ. ಕಾಂಗ್ರೆಸ್‌ನಿಂದಲೇ ಕೆಪಿಎಸ್‌ಸಿ ಹಾಳಾಗೋಕೆ ಪ್ರಾರಂಭ ಆಗಿದ್ದು. ಸಿಎಂ ಅವರು ಎಲ್ಲಾ ತೊಳೆಯುತ್ತೇವೆ ಅಂದರು ಯಾವ ರೀತಿ ತೊಳೆದ್ರು? ಪಬ್ಲಿಕ್‌ನಲ್ಲಿ ಪೋಸ್ಟ್ಗೆ ಹಣ ನಿಗದಿ ಮಾಡಿ ಬೀದಿ ಬೀದಿಯಲ್ಲಿ ಚರ್ಚೆ ಆಯ್ತು. ಆ ವಾತಾವರಣ ತಂದಿದ್ದು ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೇ 3 ರಂದು ನಡೆದ ನೀಟ್ ಪರೀಕ್ಷೆ ರದ್ದು
ರಾಜಸ್ತಾನದಲ್ಲಿ ಪೇಪರ್ ಲೀಕ್ ಆಗಿದೆ. ಒಂದೊಂದು ಬಾರಿ ಯಾರೋ ಮಾಡಿದ ತಪ್ಪಿಗೆ ಸರ್ಕಾರದ ಮೇಲೆ ತಪ್ಪು ಹೊರೆಸಲು ಆಗಲ್ಲ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಅನೇಕ ಬಾರಿ ಇಂತಹ ಸಂದರ್ಭ ಎದುರಾಗಿದೆ. ಚರ್ಚೆ ಮಾಡೋಕೆ ಕಾಂಗ್ರೆಸ್ ಅವರಿಗೆ ಯಾವ ನೈತಿಕತೆ ಇದೆ ಎಂದಿದ್ದಾರೆ.
ಜಿಬಿಎ ಚುನಾವಣೆ ಮುಂದೂಡಿಕೆಗೆ ಸರ್ಕಾರದ ಪ್ರಯತ್ನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಿಬಿಎ ಚುನಾವಣೆ ಮಾಡಬೇಕು ಅಂತ ಸಿಎಂ ಎಲೆಕ್ಷನ್ ಸಿಬ್ಬಂದಿಯನ್ನು ಡಿಸಿಎಂ ಅನುಪಸ್ಥಿತಿಯಲ್ಲಿ ಕರೆದರು. ಕರೆದು ಜಿಬಿಎ ಚುನಾವಣೆ ಮಾಡೋಕೆ ಒತ್ತಡ ಹಾಕಿದ್ರು. ನಂತರ ಡಿಸಿಎಂ ಬಂದು ಮತ್ತೊಂದು ಸಭೆ ಕರೆದು ಯಾವುದೇ ಕಾರಣಕ್ಕೂ ಚುನಾವಣೆ ಮಾಡಬಾರದು ಅಂತ ಸಿಎಂ ಮೇಲೆ ಒತ್ತಡ ಹಾಕಿ, ಈಗ ಸುಪ್ರೀಂಕೋರ್ಟ್ ಮುಂದೆ ಅರ್ಜಿ ಹಾಕಿದ್ದಾರೆ. ಜನಗಣತಿ ಅದು, ಇದು ಅಂತ ಹೇಳಿ ಸೆಪ್ಟೆಂಬರ್‌ವರೆಗೂ ಚುನಾವಣೆ ಆಗಲ್ಲ ಅಂತ ಮುಂದೆ ಹಾಕೋಕೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಚುನಾವಣೆಯಾದರೆ ಹೋದ್ರೆ 6 ತಿಂಗಳು ಸ್ಥಾನ ಭದ್ರ ಆಗುತ್ತದೆ. ಡಿಸಿಎಂಗೆ ಚುನಾವಣೆ ಆದರೆ ನನ್ನ ಸ್ಥಾನಕ್ಕೆ ಚ್ಯುತಿ ಆಗುತ್ತೆ, ನನಗೆ ಸಿಗಲ್ಲ ಅಂತ ಸಿಎಂ-ಡಿಸಿಎಂ ನಡುವೆ ಗಲಾಟೆ ನಡೆಯುತ್ತಿದೆ. ಅಂತಿಮವಾಗಿ ಡಿಸಿಎಂ ಒತ್ತಡದ ಮೇರೆಗೆ ಸುಪ್ರೀಂಕೋರ್ಟ್ ಮುಂದೆ ಅರ್ಜಿ ಹಾಕಿದ್ದಾರೆ. ಚುನಾವಣೆ ನಡೆಸಿ ಸಿಎಂ ಚೇರ್ ಉಳಿಸಿಕೊಳ್ಳಬೇಕು ಅನ್ನೋದು ಒಬ್ಬರಿಗೆ. ಚುನಾವಣೆ ಮುಂದಕ್ಕೆ ಹಾಕಿ ಸಿಎಂ ಕುರ್ಚಿ ಪಡೆಯಬೇಕು ಅಂತ ನಡೆಯುತ್ತಿದೆ. ಸಿಎಂ-ಡಿಸಿಎಂ ನಡುವೆ ಚುನಾವಣೆ ವಿಚಾರದಲ್ಲಿ ಸಂಘರ್ಷ ನಡೆಯುತ್ತಿದೆ ಅಂತ ಎಂದಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ಕೊಡಲು ಕಾಂಗ್ರೆಸ್ ವಿಫಲ – ರಾಜ್ಯ ತಲೆ ತಗ್ಗಿಸುವ ವಿಷಯ: ಅರಗ ಜ್ಞಾನೇಂದ್ರ ಕಿಡಿ
—————–

