ದುಬೈ: ಆಂಡ್ರೆ ರಸೆಲ್ ಮತ್ತು ವರುಣ್ ಚಕ್ರವರ್ತಿ ದಾಳಿಗೆ ಮಕ್ಕಾಡೆ ಮಳಗಿದ ಬೆಂಗಳೂರು ತಂಡ ಹೀನಾಯ ಸೋಲು ಕಂಡಿದೆ. ಕೆಕೆಆರ್ 9 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಟೂರ್ನಿಯಲ್ಲಿ ಕಮ್‍ಬ್ಯಾಕ್ ಮಾಡಿದೆ.
Advertisement
ಆರ್‌ಸಿಬಿ ನೀಡಿದ 93 ರನ್ ಟಾರ್ಗೆಟ್‍ನ್ನು ಕೋಲ್ಕತ್ತಾ ತಂಡ 1 ವಿಕೆಟ್ ಕಳೆದುಕೊಂಡು 10 ಓವರ್‌ಗಳಲ್ಲಿ 94 ರನ್ ಹೊಡೆದು ಭರ್ಜರಿ ಜಯ ದಾಖಲಿಸಿತು. ಕೆಕೆಆರ್ ಪರ ಶುಭಮನ್ ಗಿಲ್ 48 ರನ್(34 ಎಸೆತ, 6 ಬೌಂಡರಿ 1ಸಿಕ್ಸ್) ಮತ್ತು ವೆಂಕಟೇಶ್ ಅಯ್ಯರ್ 41 ರನ್(27 ಎಸೆತ, 7 ಬೌಂಡರಿ, 1 ಸಿಕ್ಸ್)ಸಿಡಿಸಿ ಬ್ಯಾಟಿಂಗ್‍ನಲ್ಲಿ ಮಿಂಚಿದರು. ಇದನ್ನೂ ಓದಿ: ಆರ್‌ಸಿಬಿ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್ ಬೈ!
Advertisement
ರಸೆಲ್, ವರುಣ್ ಘಾತಕ ದಾಳಿ:
ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆರ್‌ಸಿಬಿ ತಂಡಕ್ಕೆ ಆಂಡ್ರೆ ರಸೆಲ್ ಮತ್ತು ವರುಣ್ ಚಕ್ರವರ್ತಿ ಮಾರಕವಾಗಿ ಎರಗಿ ತಲಾ 3 ವಿಕೆಟ್ ಕಿತ್ತು ಮಿಂಚಿದರು. ಆರ್‌ಸಿಬಿ ಪರ ಆರಂಭಿಕರಾಗಿ ಬ್ಯಾಟಿಂಗ್ ಬಂದ ವಿರಾಟ್ ಕೊಹ್ಲಿ ಕೇವಲ 5 ರನ್(4 ಎಸೆತ, 1 ಬೌಂಡರಿ)ಗೆ ಸುಸ್ತಾದರು.
Advertisement
Advertisement
ನಂತರ ಬಂದ ಶ್ರೀಕರ್ ಭರತ್ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಜೊತೆ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದರು ಕೂಡ ಹೆಚ್ಚು ಹೊತ್ತು ಕ್ರೀಸ್ ಹಚ್ಚಿಕೊಳ್ಳು ಕೆಕೆಆರ್ ಬೌಲರ್‌ಗಳು ಬಿಡಲಿಲ್ಲ. ಪಡಿಕ್ಕಲ್ 22ರನ್(20 ಎಸೆತ, 3 ಬೌಂಡರಿ ಮತ್ತು ಶ್ರೀಕರ್ ಭರತ್ 16ರನ್(19 ಎಸೆತ, 1ಬೌಂಡರಿ) ಸಿಡಿಸಿ ಔಟ್ ಆದರು. ನಂತರ ಬಂದ ಸ್ಟಾರ್ ಆಟಗಾರರಾದ ಗ್ಲೇನ್ ಮ್ಯಾಕ್ಸ್ವೆಲ್ 10ರನ್(17 ಎಸೆತ) ಎಬಿಡಿ ವಿಲಿಯರ್ಸ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಕಡೆಯಲ್ಲಿ ಹರ್ಷಲ್ ಪಟೇಲ್ 12 ರನ್(10 ಎಸೆತ, 2 ಬೌಂಡರಿ ಸಿಡಿಸಿ) ತಂಡದ ಮೊತ್ತ 90ರ ಗಡಿ ದಾಟಲು ನೆರವಾದರು. ಇದನ್ನೂ ಓದಿ: ಪಾಕ್ ಪ್ರವಾಸ ರದ್ದುಗೊಳಿಸಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್
ಕೆಕೆಆರ್ ಪರ ವರುಣ್ ಚಕ್ರವರ್ತಿ ಮತ್ತು ರಸೆಲ್ ತಲಾ 3 ವಿಕೆಟ್ ಪಡೆದರೆ, ಫರ್ಗ್ಯೂಸನ್ 2 ವಿಕೆಟ್ ಮತ್ತು ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದು ಆರ್ಸಿಬಿಗೆ ಮುಳುವಾದರು. ಇದನ್ನೂ ಓದಿ: ರವಿಶಾಸ್ತ್ರಿ ಬಳಿಕ ಟೀಂ ಇಂಡಿಯಾಕ್ಕೆ ಕನ್ನಡಿಗ ಕೋಚ್?