Cricket

ಆರ್​ಸಿಬಿ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್‍ ಬೈ!

Published

on

Share this

ದುಬೈ: 2021ರ ಐಪಿಎಲ್ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡದ ನಾಯಕತ್ವ ತ್ಯಜಿಸುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ. ಇದನ್ನೂ ಓದಿ:ಕ್ಯಾಪ್ಟನ್ ಪಟ್ಟದಿಂದ ಇಳಿಯಲಿದ್ದಾರೆ ಕೊಹ್ಲಿ, ರೋಹಿತ್‍ಗೆ ನಾಯಕತ್ವ

ಈ ವಿಚಾರವನ್ನು ಆರ್​ಸಿಬಿ ತಂಡ  ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, #IPL2021ರ ಬಳಿಕ ಆರ್​ಸಿಬಿ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿಯಲಿದ್ದಾರೆ ಎಂದು ಹೇಳಿದೆ. ಅಲ್ಲದೇ ಅದೇ ಟ್ವೀಟ್‌ನಲ್ಲಿ ವಿರಾಟ್‌ ಕೊಹ್ಲಿ ಹೇಳಿಕೆಯನ್ನು ಪ್ರಕಟಿಸಿದೆ.

RCB ನಾಯಕನಾಗಿ ಇದು ನನ್ನ ಕೊನೆಯ IPL. ನನ್ನ ಕೊನೆಯ IPL ಗೇಮ್‌ ಆಡುವವರೆಗೆ ನಾನು RCB ಆಟಗಾರನಾಗಿಯೇ ಉಳಿಯುತ್ತೇನೆ. ನನ್ನ ಮೇಲೆ ವಿಶ್ವಾಸವಿರಿಸಿದ ಹಾಗೂ ಬೆಂಬಲಿಸಿದ ಎಲ್ಲಾ RCB ಅಭಿಮಾನಿಗಳಿಗೆ ಧನ್ಯವಾದ: ವಿರಾಟ್‌ ಕೊಹ್ಲಿ ಇದನ್ನೂ ಓದಿ: ಉಪನಾಯಕನ ಪಟ್ಟದಿಂದ ಕೆಳಗಿಳಿಸಿ – ರೋಹಿತ್ ಬಗ್ಗೆ ಕೊಹ್ಲಿ ಮಾತು

ಕೆಲದಿನಗಳ ಹಿಂದೆ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಬಳಿಕ ಟಿ20 ನಾಯಕತ್ವಕ್ಕೆ ಗುಡ್‍ಬೈ ಹೇಳುವುದಾಗಿ ತಿಳಿಸಿದ್ದರು. ಇದೀಗ ಆರ್​ಸಿಬಿ ನಾಯಕತ್ವದಿಂದಲೂ ಹಿಂದೆ ಸರಿಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಅರಬ್ ನಾಡಿನಲ್ಲಿಂದು ಹೈವೋಲ್ಟೇಜ್ ಪಂದ್ಯ – ಯಾರಿಗೆ ಸಿಗಲಿದೆ ಜಯ?

Click to comment

Leave a Reply

Your email address will not be published. Required fields are marked *

Advertisement
Advertisement