Cricket

ಕ್ಯಾಪ್ಟನ್ ಪಟ್ಟದಿಂದ ಇಳಿಯಲಿದ್ದಾರೆ ಕೊಹ್ಲಿ, ರೋಹಿತ್‍ಗೆ ನಾಯಕತ್ವ

Published

on

Share this

– ಟಿ20 ವಿಶ್ವಕಪ್ ಬಳಿಕ ನಿರ್ಧಾರ ಪ್ರಕಟ
– ಟೆಸ್ಟ್ ತಂಡಕ್ಕೆ ಮಾತ್ರ ಕೊಹ್ಲಿ ನಾಯಕತ್ವ

ಮುಂಬೈ: ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ನಾಯಕ ಪಟ್ಟದಿಂದ ಕೆಳಗೆ ಇಳಿಯಲಿದ್ದಾರೆ ಎಂದು ವರದಿಯಾಗಿದೆ.

ಹೌದು. 32 ವರ್ಷದ ವಿರಾಟ್ ಕೊಹ್ಲಿ ಏಕದಿನ ಮತ್ತು ಟಿ20 ನಾಯಕ ಪಟ್ಟದಿಂದ ಕೆಳಗೆ ಇಳಿಯಲು ನಿರ್ಧರಿಸಿದ್ದು 34 ವರ್ಷದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಟೀಂ ಇಂಡಿಯವನ್ನು ಮುನ್ನಡೆಸಲಿದ್ದಾರೆ.

ಬ್ಯಾಟಿಂಗ್ ನಲ್ಲಿ ಈಗಾಗಲೇ ಉತ್ತಮ ಲಯದಲ್ಲಿರುವ ಕೊಹ್ಲಿ ಬ್ಯಾಟಿಂಗ್ ನತ್ತ ತನ್ನ ಗಮನವನ್ನು ಕೇಂದ್ರಿಕರಿಸಿದ್ದಾರೆ. ತಾನು ಕೆಳಗೆ ಇಳಿಯುತ್ತಿರುವ ವಿಚಾರವನ್ನು ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ಚರ್ಚಿಸಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನು ಆಧರಿಸಿ ವರದಿ ಮಾಡಿದೆ.

ಕಳೆದ ಕೆಲ ತಿಂಗಳಿನಿಂದ ಈ ವಿಚಾರವನ್ನು ರೋಹಿತ್ ಶರ್ಮಾ ಮತ್ತು ಟೀಂ ಮ್ಯಾನೇಜ್‍ಮೆಂಟ್ ಜೊತೆ ಕೊಹ್ಲಿ ಚರ್ಚಿಸಿದ್ದಾರೆ. ವಿಶೇಷವಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾದ ವಿಶೇಷ ಸಾಧನೆಯ ಬಳಿಕ ಈ ವಿಚಾರ ಜಾಸ್ತಿ ಚರ್ಚೆ ಆಗುತ್ತಿದೆ.

ತಾನು ನಾಯಕತ್ವದಿಂದ ಹಿಂದಕ್ಕೆ ಸರಿಯುತ್ತಿರುವ ವಿಚಾರವನ್ನು ವಿರಾಟ್ ಕೊಹ್ಲಿಯೇ ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ವರದಿ ತಿಳಿಸಿದೆ.

ವಿರಾಟ್ ಕೊಹ್ಲಿ ವಿಶ್ವಶ್ರೇಷ್ಠ ಬ್ಯಾಟ್ಸ್ ಮನ್ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಟಿ20 ಮತ್ತು ಏಕದಿನ ಕ್ರಿಕೆಟ್ ಬಂದಾಗ ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಅವರ ನಾಯಕತ್ವವೇ ಉತ್ತಮ ಎಂಬ ಚರ್ಚೆ ಮೊದಲಿನಿಂದಲೂ ಇದೆ. ಮುಂಬೈ ತಂಡ ರೋಹಿತ್ ಅಡಿ 5 ಬಾರಿ ಐಪಿಎಲ್ ಚಾಂಪಿಯನ್ ಆಗಿದೆ. ಈ ದಾಖಲೆ ಇಟ್ಟುಕೊಂಡು ವಿಶ್ಲೇಷಣೆ ಮಾಡಿದಾಗ ಕೊಹ್ಲಿಗಿಂತ ರೋಹಿತ್ ನಾಯಕತ್ವ ಉತ್ತಮ ಎಂಬ ಅಭಿಪ್ರಾಯ ಮುನ್ನೆಲೆಗೆ ಬಂದಿತ್ತು. ಇದನ್ನೂ ಓದಿ: ರಿಟರ್ನ್ ಟಿಕೆಟ್ ಬುಕ್ ಮಾಡಿದ್ದ ಎಮ್ಮಾ ರಾಡುಕಾನು ಯುಎಸ್ ಓಪನ್ ಚಾಂಪಿಯನ್

ಬಿಳಿ ಮತ್ತು ಕೆಂಪು ಚೆಂಡಿನ ಕ್ರಿಕೆಟ್‍ಗೆ ಪ್ರತ್ಯೇಕ ನಾಯಕತ್ವದಲ್ಲಿ ತಂಡ ಇಳಿಯುವುದು ಹೊಸದೆನಲ್ಲ. ಈ ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ಈ ಹಿಂದೆ ಆಸ್ಟ್ರೇಲಿಯಾವನ್ನು ಮಾರ್ಕ್ ಟೇಲರ್ ಮತ್ತು ಸ್ವೀವ್ ವಾ ನಂತರ ಸ್ವೀವ್ ವಾ ಮತ್ತು ರಿಕ್ಕಿ ಪಾಟಿಂಗ್ ಮುನ್ನಡೆಸಿದ್ದರು.

ಭಾರತದಲ್ಲೂ ಈ ಪ್ರಯೋಗ ನಡೆದಿದೆ. 2007ರಲ್ಲಿ ಟೆಸ್ಟ್ ತಂಡವನ್ನು ಅನಿಲ್ ಕುಂಬ್ಳೆ ಮುನ್ನಡೆಸಿದ್ದರೆ ಧೋನಿ ಏಕದಿನ ತಂಡವನ್ನು ಮುನ್ನಡೆಸಿದ್ದರು. 2015ರಲ್ಲಿ ಧೋನಿ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ಹೇಳಿದ ಬಳಿಕ 2017ರವರೆಗೂ ಏಕದಿನ ಮತ್ತು ಟಿ20 ಪಂದ್ಯದ ನಾಯಕರಾಗಿ ಮುಂದುವರಿದಿದ್ದರು. ಇದನ್ನೂ ಓದಿ: ಟಿ20 ವಿಶ್ವಕಪ್‍ಗೆ ಅಚ್ಚರಿಯಾಗಿ ಆಯ್ಕೆಗೊಂಡ ಆಟಗಾರರಿವರು

ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಏಕದಿನದಲ್ಲಿ 844 ರೇಟಿಂಗ್ ಪಡೆದಿರುವ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದರೆ ರೋಹಿತ್ ಶರ್ಮಾ 813 ರೇಟಿಂಗ್ ಪಡೆದು 3ನೇ ಸ್ಥಾನದಲ್ಲಿದ್ದಾರೆ. ಟಿ20ಯಲ್ಲಿ ವಿರಾಟ್ ಕೊಹ್ಲಿ 717 ರೇಟಿಂಗ್ ಪಡೆದು 5ನೇ ಸ್ಥಾನದಲ್ಲಿದ್ದರೆ 577 ರೇಟಿಂಗ್ ಪಡೆದಿರುವ ರೋಹಿತ್ ಶರ್ಮಾ 19ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ನಲ್ಲಿ 813 ರೇಟಿಂಗ್ ಪಡೆದಿರುವ ರೋಹಿತ್ ಶರ್ಮಾ 5ನೇ ಸ್ಥಾನದಲ್ಲಿದ್ದರೆ, 783 ರೇಟಿಂಗ್ ಪಡೆದಿರುವ ವಿರಾಟ್ ಕೊಹ್ಲಿ 6ನೇ ಸ್ಥಾನದಲ್ಲಿದ್ದಾರೆ.

ರೋಹಿತ್ ಶರ್ಮಾ ಅಡಿಯಲ್ಲಿ ಟೀಂ ಇಂಡಿಯಾ 2 ಬಾರಿ ಚಾಂಪಿಯನ್ ಆಗಿದೆ. ಶ್ರೀಲಂಕಾದಲ್ಲಿ 2018ರ ನಿಧಾಸ್ ಟ್ರೋಫಿ ತ್ರಿಕೋನಾ ಸರಣಿ ಮತ್ತು 2018ರ ಯುಎಇಯಲ್ಲಿ 6 ತಂಡಗಳು ಪಾಲ್ಗೊಂಡಿದ್ದ ಏಷ್ಯಾ ಕಪ್ ಜಯಿಸಿತ್ತು.

ಏಕದಿನದಲ್ಲಿ 2 ಬಾರಿ ದ್ವಶತಕ ಹೊಡೆದಿರುವ ರೋಹಿತ್ ನಾಯಕತ್ವದ ಅಡಿ 2013, 2015, 2017, 2019ರಲ್ಲಿ ಮುಂಬೈ ಇಂಡಿಯನ್ಸ್ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ.

Click to comment

Leave a Reply

Your email address will not be published. Required fields are marked *

Advertisement
Advertisement