ಕನ್ನಡ ಬೆಳ್ಳಿತೆರೆಯಲ್ಲೀಗ ಸಿನಿಮಾಗಳ ಟ್ರಾಫಿಕ್ ಶುರುವಾಗಿದೆ. ವಾರಕ್ಕೆ ಏನಿಲ್ಲ ಅಂದ್ರೂ ಏಳರಿಂದ ಎಂಟು ಸಿನಿಮಾಗಳು ರಿಲೀಸ್ ಆಗ್ತಿವೆ. ಇಷ್ಟು ಸಿನಿಮಾಗಳಲ್ಲಿ ಎಲ್ಲವೂ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತವೆ ಅಂತನೂ ಏನು ಇಲ್ಲ. ಕಂಟೆಂಟ್ ಹಾಗೂ ಕ್ವಾಲಿಟಿ ಸಿನಿಮಾಗಳನ್ನ ಮಾತ್ರ ಸಿನಿಪ್ರೇಮಿಗಳು ಬಾಚಿತಬ್ಬಿಕೊಳ್ಳುತ್ತಾರೆ ಎಂಬುವುದಕ್ಕೆ ಈ ವಾರ ತೆರೆಗೆ ಬಂದ ವೀಲ್ಚೇರ್ ರೋಮಿಯೋ ತಾಜಾ ಉದಾಹರಣೆ.
ಇದೇ ಶುಕ್ರವಾರ ಒಂದಷ್ಟು ಕಾಂಪಿಟೇಷನ್ ನಡುವೆ ಥಿಯೇಟರ್ಗೆ ಲಗ್ಗೆ ಇಟ್ಟ ‘ವೀಲ್ಚೇರ್ ರೋಮಿಯೋ’ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಗಟ್ಟಿತನ ಹಾಗೂ ಅಪರೂಪದ ಕಥಾನಕದ ಮೂಲಕ ಆಕರ್ಷಿಸುತ್ತಿರುವ ಈ ಸಿನಿಮಾಗೆ ಪೈಲ್ವಾನ್ ಬಲ ಸಿಕ್ಕಿದೆ. ಅಂದರೆ ಕಿಚ್ಚ ಸುದೀಪ್ ‘ವೀಲ್ಚೇರ್ ರೋಮಿಯೋ’ ಸಿನಿಮಾಗೆ ಶುಭ ಹಾರೈಸಿದ್ದಾರೆ. ಚಿತ್ರದ ಬಗ್ಗೆ ಒಳ್ಳೆ ರಿವ್ಯೂ ರಿಪೋರ್ಟ್ ಬರ್ತಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಟ್ವೀಟ್ ಮೂಲಕ ಶುಭ ಕೋರಿದ್ದಾರೆ. ಇದನ್ನೂ ಓದಿ: ಶೂಟಿಂಗ್ಗೂ 9 ತಿಂಗಳ ಹಿಂದೆಯೇ ಪ್ರಿಪರೇಶನ್ ಮಾಡ್ಕೊಂಡೆ: ಸುದೀಪ್
My best wshs to the team of #WheelChairRomeo..
Hearing good reviews ????????@Ramchethann @mayuri_kyatari4
— Kichcha Sudeepa (@KicchaSudeep) May 29, 2022
ಅಗಸ್ತ್ಯ ಬ್ಯಾನರ್ ನಡಿಯಲ್ಲಿ ಎಂ.ವೆಂಕಟಾಚಲಯ್ಯ ನಿರ್ಮಾಣ ಮಾಡಿರುವ ವೀಲ್ಚೇರ್ ರೋಮಿಯೋ ಚಿತ್ರಕ್ಕೆ ನಟರಾಜ್ ಓಂಕಾರ ಹಾಕಿದ್ದು, ಅಂಧ ನಾಯಕಿಯಾಗಿ ಮಯೂರಿ, ಕಾಲಿಲ್ಲದ ನಾಯಕನಾಗಿ ರಾಮ್ ಚೇತನ್, ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲನಾಣಿ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಪೋಷಣೆ ಮಾಡಿದ್ದಾರೆ.
ಭರತ್.ಬಿ.ಜೆ ಸಂಗೀತ, ಗುರು ಕಶ್ಯಪ್ ಸಂಭಾಷಣೆ, ಸಂತೋಷ್ ಪಾಂಡಿ ಕ್ಯಾಮೆರಾ ವರ್ಕ್ ಎಲ್ಲವೂ ಅದ್ಭುತವಾಗಿ ಮೂಡಿ ಬಂದಿದ್ದು, ವೀಲ್ಚೇರ್ ರೋಮಿಯೋ ಬೆಳ್ಳಿತೆರೆಯಲ್ಲಿ ಭಾವನಾತ್ಮಕ ಪಯಣದೊಂದಿಗೆ ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ಇದನ್ನೂ ಓದಿ: ಕೆಜಿಎಫ್ ಸಿನಿಮಾ ಬಗ್ಗೆ ಸುದೀಪ್ ಮಾತು