ನಟಿ ರೂಪಾ ರಾಯಪ್ಪ (Roopa Rayappa) ಅವರು ಕೆಜಿಎಫ್ (KGF) ಸಿನಿಮಾ ಮೂಲಕ ಗುರುತಿಸಿಕೊಂಡರು. ಮಾಡೆಲ್, ಕಂಟೆಂಟ್ ಕ್ರಿಯೇಟರ್ ಆಗಿ ರೂಪಾ ರಾಯಪ್ಪ ಅವರು ಗುರುತಿಸಿಕೊಂಡಿದ್ದಾರೆ. ಸದ್ಯ ನಟಿ ರೂಪಾ ಹಾಟ್ ಆಗಿ ಟೈಲರ್ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಯಶ್ (Yash) ನಟನೆಯ ‘ಕೆಜಿಎಫ್’ ಸಿನಿಮಾದಲ್ಲಿ ಡಿ ಗ್ಲಾಮ್ ಲುಕ್‌ನಲ್ಲಿ ರೂಪಾ ರಾಯಪ್ಪ ಅವರು ಶಾಂತಿ (Shanthi Role) ಪಾತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಪುಟ್ಟ ಪಾತ್ರವಾಗಿದ್ದರು. ಶಾಂತಿ ರೋಲ್ ಅನ್ನ ಕೆಜಿಎಫ್ ಚಿತ್ರದ ಫ್ಯಾನ್ಸ್ ಇನ್ನೂ ನೆನಪಿಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಗ್ಲ್ಯಾಮರ್ ಇಲ್ಲದ ಪಾತ್ರದಲ್ಲಿ ನಟಿಸಿರೋ ರೂಪಾ ಇದೀಗ ಗ್ಲ್ಯಾಮರಸ್ ಆಗಿ ಹಾಟ್ & ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ.
‘ಕೆಜಿಎಫ್’ ಶಾಂತಿ ರೋಲ್‌ನಲ್ಲಿ ನೋಡಿದ್ದ ಅಭಿಮಾನಿಗಳಿಗೆ ಈಗೀನ ರೂಪಾ ಹಾಟ್ ಲುಕ್ ನೋಡಿ ಕಳೆದು ಹೋಗಿದ್ದಾರೆ. ಇವ್ರು ಅವರೇನಾ ಅಂತಾ ಕೇಳ್ತಿದ್ದಾರೆ. ಅಷ್ಟರ ಮಟ್ಟಿಗೆ ರೂಪಾ ರಾಯಪ್ಪ ಬದಲಾದ ಅವತಾರದಲ್ಲಿ ಕಾಣಿಸಿಕೊಂಡಿರೋದು ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ಹಳದಿ ಬಣ್ಣದ ಬಿಕಿನಿ ಧರಿಸಿ, ಶಾರ್ಟ್ ಸ್ಕರ್ಟ್ ಧರಿಸಿದ್ದಾರೆ. ಟೈಲರ್ ಲುಕ್‌ನಲ್ಲಿರೋ ಹಸಿಬಿಸಿ ಫೋಟೋಗಳನ್ನ ನಟಿ ಶೇರ್ ಮಾಡಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:ವರಾಹಿ ಯಾತ್ರೆಯಲ್ಲಿ ಪವನ್ ಕಲ್ಯಾಣ್ ಆರೋಗ್ಯದಲ್ಲಿ ಏರುಪೇರು
ನಟಿ ರೂಪಾ ರಾಯಪ್ಪ ಅವರು ಸ್ಯಾಂಡಲ್‌ವುಡ್‌ನಲ್ಲಿ (Sandalwood) ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಸದ್ಯ ‘ದಿ ಜಡ್ಜ್‌ಮೆಂಟ್’ ಎಂಬ ಸಿನಿಮಾದಲ್ಲಿ ರವಿಚಂದ್ರನ್, ಧನ್ಯಾ ರಾಮ್‌ಕುಮಾರ್ ಮತ್ತು ದಿಗಂತ್ ಜೊತೆ ರೂಪಾ ರಾಯಪ್ಪ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದಿಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ. ಯಶ್ ಸಿನಿಮಾದಲ್ಲಿ ನಟಿಸಿದ್ದ ನಟಿಗೆ ಲಕ್ ಬದಲಾಗಿದೆ. ಒಳ್ಳೆಯ ಪಾತ್ರಗಳು ಅವರನ್ನ ಅರಸಿ ಬರುತ್ತಿದೆ.