ಸಿನಿಮಾ- ರಾಜಕೀಯ ಎರಡು ರಂಗದಲ್ಲೂ ನಟ ಪವನ್ ಕಲ್ಯಾಣ್ (Pawan Kalyan) ಅವರು ಆಕ್ಟೀವ್ ಆಗಿದ್ದಾರೆ. ಸದ್ಯ ರಾಜಕೀಯ ಕೆಲಸದ ಕಡೆ ಗಮನ ನೀಡ್ತಿರೋ ನಟ ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶದಲ್ಲಿ (Andrapradesha) ವರಾಹಿ ಯಾತ್ರೆಯಲ್ಲಿ (Varahi Yatre) ಭಾಗವಹಿಸಿದ್ದರು. ಈ ವೇಳೆ, ಪವನ್ ಕಲ್ಯಾಣ್ ಅವರು ಅಸ್ವಸ್ಥರಾಗಿದ್ದಾರೆ. ಇದಕ್ಕೆ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ.
Advertisement
ತೆಲುಗು ಚಿತ್ರರಂಗದ ಸ್ಟಾರ್‌ನಟ ಪವನ್ ಕಲ್ಯಾಣ್ ಅವರು ಜನಸೇನಾ ಪಕ್ಷದ (Janasena Paksha) ಮೂಲಕ ಜನರ ಸೇವೆ ಮಾಡ್ತಿದ್ದಾರೆ. ಸಿನಿಮಾ, ಜನಸೇವೆ ಅಂತಾ ಸದಾ ಒಂದಲ್ಲಾ ಒಂದು ಕಾರ್ಯದ ಮೂಲಕ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಸಹೋದರ ನಾಗಬಾಬು ಪುತ್ರ ವರುಣ್ ತೇಜ್ ಎಂಗೇಜ್‌ಮೆಂಟ್ ಸಂಭ್ರಮದ ಬೆನ್ನಲ್ಲೇ ರಾಜಕೀಯದತ್ತ ನಟ ಮುಖ ಮಾಡಿದ್ದಾರೆ. ಇದನ್ನೂ ಓದಿ:ಜನವರಿಯಲ್ಲಿ ಅರ್ಜುನ್ ಸರ್ಜಾ ಮಗಳ ಮದುವೆ: ಮಾವನ ಮನೆಯಿಂದ ಅಧಿಕೃತ ಘೋಷಣೆ
Advertisement
Advertisement
ಪ್ರಸ್ತುತ ಆಂಧ್ರಪ್ರದೇಶದ ವರಾಹಿ ಯಾತ್ರೆಯಲ್ಲಿ ಇದಕ್ಕಿದ್ದಂತೆ ಅಸ್ವಸ್ಥರಾದ ಪವನ್ ಕಲ್ಯಾಣ್, ಪೆಡಮಿರಂನಲ್ಲಿರುವ ನಿರ್ಮಲಾ ಫಂಕ್ಷನ್ ಹಾಲ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪವನ್ ಕಲ್ಯಾಣ್ ಅವರ ಅನಾರೋಗ್ಯದ ಹಿನ್ನೆಲೆ ಇಂದು ಬೆಳಗ್ಗೆ 11 ಗಂಟೆಗೆ ಭೀಮಾವರಂ ಕ್ಷೇತ್ರದ ಮುಖಂಡರ ಜೊತೆ ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಗಿದೆ. ಮಂಗಳವಾರದ ಮಧ್ಯಾಹ್ನದ ನಂತರ ಸಭೆ ನಡೆಯುವ ಸಾಧ್ಯತೆ ಇದೆ. ಕಳೆದ ಕೆಲ ದಿನಗಳಿಂದ ಪವನ್ ಕಲ್ಯಾಣ್ ವಾರಾಹಿ ಯಾತ್ರೆಯಲ್ಲಿ ದಣಿವರಿಯದೆ ಭಾಗವಹಿಸುತ್ತಿದ್ದಾರೆ. ಇದರಿಂದ ಅಸ್ವಸ್ಥರಾಗಿದ್ದರು ಎಂದು ಹೇಳಲಾಗ್ತಿದೆ.
Advertisement
ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಅಭಿಮಾನಿಗಳ ಶಕ್ತಿಯೊಂದಿಗೆ, ದೈವ ಇಚ್ಛೆಯನ್ನು ಪಡೆದುಕೊಂಡು ಜೂನ್ 14ರಂದು ವಾರಾಹಿ ವಿಜಯ ಯಾತ್ರೆ ಆಂಧ್ರ ಪ್ರದೇಶದಲ್ಲಿ ಆರಂಭಿಸಿದ್ರು. ಅನ್ನವರಂನಿಂದ ನರಸಾಪುರದವರೆಗೆ ವಾರಾಹಿ ಯಾತ್ರೆಯ ವೇಳಾಪಟ್ಟಿಯನ್ನು ಫೈನಲ್ ಮಾಡಲಾಗಿದೆ. ವಾರಾಹಿ ಯಾತ್ರೆಯಲ್ಲಿ ಪವನ್ ಕಲ್ಯಾಣ್ ಮತ್ತು ಪಕ್ಷದ ಮುಖಂಡರಿಗೆ ವೈದ್ಯಕೀಯ ಸೇವೆಗಾಗಿ ಜನಹಿತ ಅಂಬ್ಯುಲೆನ್ಸ್ ಕೂಡ ಸಿದ್ಧವಾಗಿದೆ. ವಾಹನದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಪ್ರವಾಸವನ್ನು ಅನುಸರಿಸುತ್ತಾರೆ. ವಾರಾಹಿ ಸಭೆಗೆ ಆಗಮಿಸುವವರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಸಭೆಯ ಬಳಿ ವೈದ್ಯಕೀಯ ತಂಡವನ್ನು ಸ್ಥಾಪಿಸಲಾಗಿದೆ.