ಹನಿಮೂನ್‌ ಮುಗಿಸಿ ಬಂದ್ರು ಕಿಯಾರಾ-ಸಿದ್..!‌

ಬಾಲಿವುಡ್‌ನ ನೂತನ ಜೋಡಿ ಸಿದ್ಧಾರ್ಥ್‌ ಮಲ್ಹೋತ್ರಾ - ಕಿಯಾರಾ ಅಡ್ವಾಣಿ

2023ರ ಫೆಬ್ರವರಿ 7ರಂದು ಮದುವೆಯಾಗಿದ್ದ ಸಿದ್‌-ಕಿಯಾರಾ ಜೋಡಿ

ಹನಿಮೂನ್‌ ಹೋಗಿದ್ದ ಜೋಡಿ ಮುಂಬೈ ಏರ್‌ಪೋರ್ಟಲ್ಲಿ ಕಾಣಿಸಿಕೊಂಡಿದ್ದಾರೆ.

ಜೈಸಲ್ಮೇರ್‌ ನ ಸೂರ್ಯಗಢದಲ್ಲಿ ಮದುವೆಯಾಗಿದ್ದ ಸಿದ್ಧಾರ್ಥ್‌ - ಕಿಯಾರಾ

ಮದುವೆ ಬಳಿಕ ಮುಂಬೈನಲ್ಲಿ ಅದ್ಧೂರಿ ಆರತಕ್ಷತೆ ನೆರವೇರಿತ್ತು

ಕರಣ್‌ ಜೋಹರ್‌, ಕರೀನಾ ಕಪೂರ್‌ ಖಾನ್‌, ಆಲಿಯಾ ಭಟ್‌, ಅನನ್ಯಾ ಪಾಂಡೆ, ಮೀರಾ ರಜಪೂತ್‌ ಮೊದಲಾದ ಬಿ-ಟೌನ್‌ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

ಶೇರ್‌ ಶಾ (Shershaah) ಸಿನೆಮಾದಲ್ಲಿ ಜೊತೆಯಾಗಿ ನಟಿಸಿದ್ದ ಜೋಡಿ

2018ರಲ್ಲಿ ಕಿಯಾರಾ ನಟಿಸಿದ್ದ ಲಸ್ಟ್‌ ಸ್ಟೋರೀಸ್‌ (Lust Stories) ಚಿತ್ರದ ಪಾರ್ಟಿಯಲ್ಲಿ ಮೊದಲ ಬಾರಿಗೆ ಕಿಯಾರಾ - ಸಿದ್ಧಾರ್ಥ್‌ ಭೇಟಿ

ಕಾಫಿ ವಿದ್‌ ಕರಣ್‌ ಸೀಸನ್‌ 7 (Koffee With Karan Season 7) ರಲ್ಲಿ ತಮ್ಮ ಮೊದಲ ಭೇಟಿಯ ವಿಚಾರ ಬಹಿರಂಗಪಡಿಸಿದ್ದ ಕಿಯಾರಾ ಅಡ್ವಾಣಿ

2019ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹೊಸ ವರ್ಷಾಚರಣೆಗೆ ತೆರಳಿದ್ದ ಕಿಯಾರಾ - ಸಿದ್ಧಾರ್ಥ್‌