ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಭಾರೀ ಮಳೆಯಾಗುವ ಲಕ್ಷಣಗಳಿದ್ದು, ಜೂನ್ ಅಂತ್ಯಕ್ಕೆ ಮುಂಗಾರು ಚುರುಕುಗೊಳ್ಳುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣವಿದ್ದ ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೇ ಕರಾವಳಿ ಪ್ರದೇಶದಲ್ಲಿ ಮುಂದಿನ 2 ದಿನಗಳ ಕಾಲ ಹೆಚ್ಚಿನ ಮಳೆಯಾಗಲಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲೂ ಮಳೆ ಆರಂಭಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
- Advertisement 2
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 21 ಡಿಗ್ರಿ, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
- Advertisement 3
- Advertisement 4
ನಗರಗಳ ಹವಾಮಾನ ವರದಿ:
ಬೆಂಗಳೂರು: 28-21
ಮಂಗಳೂರು: 28-24
ಶಿವಮೊಗ್ಗ: 28-22
ಬೆಳಗಾವಿ: 24-21
ಮೈಸೂರು: 29-21
ಮಂಡ್ಯ: 30-22
ಮಡಿಕೇರಿ: 21-17
ರಾಮನಗರ: 30-24
ಹಾಸನ: 26-19
ಚಾಮರಾಜನಗರ: 29-21
ಚಿಕ್ಕಬಳ್ಳಾಪುರ: 28-19
ಕೋಲಾರ: 29-21
ತುಮಕೂರು: 29-21
ಉಡುಪಿ: 29-24
ಕಾರವಾರ: 28-26
ಚಿಕ್ಕಮಗಳೂರು: 25-19
ದಾವಣಗೆರೆ: 29-22
ಹುಬ್ಬಳ್ಳಿ: 27-22
ಚಿತ್ರದುರ್ಗ: 29-22
ಹಾವೇರಿ: 28-22
ಬಳ್ಳಾರಿ: 33-24
ಗದಗ: 28-22
ಕೊಪ್ಪಳ: 31-23
ರಾಯಚೂರು: 34-25
ಯಾದಗಿರಿ: 34-25
ವಿಜಯಪುರ: 33-25
ಬೀದರ್: 31-23
ಕಲಬುರಗಿ: 32-24
ಬಾಗಲಕೋಟೆ: 31-23
Web Stories