ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಮಳೆ ಕಡಿಮೆಯಾಗಿದೆ. ಬೆಳಗಿನ ಜಾವ ಚಳಿ ವಾತಾವರಣ ಇರಲಿದ್ದು, ಕೊಂಚ ಬಿಸಿಲು ಹಾಗೂ ಆಗಾಗ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ & ಮಲೆನಾಡು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಇನ್ನುಳಿದಂತೆ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ಕವಿದ ವಾತಾವರಣ ಇರಲಿದೆ ಎಂದು ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 29-20
ಮಂಗಳೂರು: 29-24
ಶಿವಮೊಗ್ಗ: 28-22
ಬೆಳಗಾವಿ: 26-21
ಮೈಸೂರು: 31-21

ಮಂಡ್ಯ: 31-21
ಮಡಿಕೇರಿ: 25-20
ರಾಮನಗರ: 31-21
ಹಾಸನ: 27-19
ಚಾಮರಾಜನಗರ: 31-21
ಚಿಕ್ಕಬಳ್ಳಾಪುರ: 29-20

ಕೋಲಾರ: 30-21
ತುಮಕೂರು: 29-21
ಉಡುಪಿ: 29-24
ಕಾರವಾರ: 28-26
ಚಿಕ್ಕಮಗಳೂರು: 24-18

ದಾವಣಗೆರೆ: 29-22
ಹುಬ್ಬಳ್ಳಿ: 28-22
ಚಿತ್ರದುರ್ಗ: 29-22
ಹಾವೇರಿ: 28-22
ಬಳ್ಳಾರಿ: 32-24
ಗದಗ: 29-22
ಕೊಪ್ಪಳ: 31-23

ರಾಯಚೂರು: 33-24
ಯಾದಗಿರಿ: 32-24
ವಿಜಯಪುರ: 31-23
ಕಲಬುರಗಿ: 32-23
ಬಾಗಲಕೋಟೆ: 31-23

