ಬೆಂಗಳೂರು/ಮಂಡ್ಯ: ಕಂದಾಯ ಸಚಿವ ಆರ್.ಅಶೋಕ್ (R Ashok) ಅಡ್ಜೆಸ್ಟ್ಮೆಂಟ್ ಪಾಲಿಟಿಕ್ಸ್ ಪಾಲಿಸಿಕೊಂಡು ಬಂದಿದ್ದರ ಪರಿಣಾಮ ಕೊನೆಗೂ ಅದರ ಬಿಸಿ ಮಂಡ್ಯದಲ್ಲಿ ತಟ್ಟೆ ಬಿಟ್ಟಿದೆ. ತಮ್ಮ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ (Adjustment Politics) ನ ಪರಿಣಾಮ ಈ ಪರಿ ಇರುತ್ತೆ ಅಂತ ಖುದ್ದು ಅಶೋಕ್ ಅವರೇ ಎಣಿಸಿರಲಿಕ್ಕಿಲ್ಲ. ಸಾಮ್ರಾಟ್ ವಿರುದ್ಧ ಸ್ವಪಕ್ಷೀಯರೇ ಗೋ ಬ್ಯಾಕ್ (Go Back Ashok), ಬಾಯ್ಕಾಟ್ ಅಶೋಕ್ ಅಭಿಯಾನ ನಡೆಸ್ತಿರುವುದು ಬಿಜೆಪಿಗೆ ದೊಡ್ಡ ತಲೆಬಿಸಿ ಆದಂತಿದೆ. ಮಂಡ್ಯ ಕಾರ್ಯಕರ್ತರ ಈ ವಿರೋಧ ಕುರಿತು ರಾಜ್ಯ ಬಿಜೆಪಿ ಘಟಕವು ಹೈಕಮಾಂಡ್ ಗಮನಕ್ಕೆ ತಂದಿದೆ. ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ಜಿಲ್ಲೆಗಳಲ್ಲಿ ಜರುಗುತ್ತಿರುವ ವಿದ್ಯಮಾನಗಳ ಕುರಿತು ಹೈಕಮಾಂಡ್ ಗೆ ರಾಜ್ಯ ಘಟಕದಿಂದ ವರದಿ ರವಾನಿಸಲಾಗಿದೆ. ವರಿಷ್ಠರ ಗಮನಕ್ಕ ಸಮಸ್ಯೆ ತರುವ ಮೂಲಕ ಮುಂದಿನ ತೀರ್ಮಾನ ಈಗ ದೆಹಲಿ ನಾಯಕರ ಹೆಗಲಿಗೇರಿದಂತಾಗಿದೆ.
Advertisement
ಮಂಡ್ಯದಲ್ಲಿ ಸಚಿವ ಆರ್.ಅಶೋಕ್ ಗೆ ಓಪನಿಂಗ್ ಶಾಕ್ ಸಿಕ್ಕಿರುವ ಬಗ್ಗೆ ಪಕ್ಷದ ವಲಯದಲ್ಲೂ ಭಾರೀ ಚರ್ಚೆಗೆ ಅವಕಾಶ ಕೊಟ್ಟಂತಾಗಿದೆ. ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತ ಮೊದಲ ದಿನನ ಆರಂಭವಾದ ಅಶೋಕ್ ವಿರುದ್ಧದ ಆಕ್ರೋಶ ಇನ್ನೂ ತಣಿದಿಲ್ಲ. ದಿನೇ ದಿನೇ ಗೋಬ್ಯಾಕ್, ಬಾಯ್ಕಾಟ್ ಅಶೋಕ್ ಅಭಿಯಾನ ಬೇರೆ ಬೇರೆ ವೇದಿಕೆ, ಸಂದರ್ಭಗಳಲ್ಲಿ ಪ್ರತಿಧ್ವಿನಿಸುತ್ತಿದೆ. ಇತ್ತ ರಾಜ್ಯ ಬಿಜೆಪಿ (BJP) ನಾಯಕರು ಜಾಣ ಮೌನ ಅಪ್ಪಿಕೊಂಡು ಸೈಲೆಂಟಾಗಿದ್ದಾರೆ. ಪಕ್ಷಕ್ಕೆ ಮಂಡ್ಯ ಕಾರ್ಯಕರ್ತರ ಆಕ್ರೋಶ ಗೊಂದಲ ಹುಟ್ಟಿಸಿದೆ. ಮಂಡ್ಯ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಬೇಕೋ, ಅಶೋಕ್ ಪರ ನಿಲ್ಲಬೇಕೋ ಅಂತ ಪಕ್ಷದ ಪ್ರಮುಖರಲ್ಲಿ ಗೊಂದಲ ಮನೆ ಮಾಡಿದೆ. ಹೀಗಾಗಿ ರಾಜ್ಯ ಬಿಜೆಪಿಯಿಂದ ಯಾವುದೇ ಕ್ರಮಕ್ಕೂ ಮುಂದಾಗದೇ ಹೈಕಮಾಂಡ್ ಅಂಗಳಕ್ಕೆ ಚೆಂಡು ಉರುಳಿಸಲಾಗಿದೆ. ಮಂಡ್ಯ ವಿದ್ಯಮಾನಗಳ ಬಗ್ಗೆ ಹೈಕಮಾಂಡ್ ಗೆ ಸಂಪೂರ್ಣ ವರದಿ ರವಾನೆ ಮಾಡಿರುವ ಹಿನ್ನೆಲೆಯಲ್ಲಿ ದೆಹಲಿಯಿಂದ ಬರಲಿರುವ ಮುಂದಿನ ರಿಯಾಕ್ಷನ್ಗಾಗಿ ರಾಜ್ಯ ನಾಯಕರು ಕಾಯುತ್ತಿದ್ದಾರೆ. ಇದನ್ನೂ ಓದಿ: ಜೆಡಿಎಸ್ ವಿರುದ್ಧ ಮಾತಾಡಿದ್ರೆ ಸುಮಲತಾ ಲೀಡರ್ ಆಗಬಹುದು ಅಂದುಕೊಂಡಿದ್ದಾರೆ: ಪುಟ್ಟರಾಜು
Advertisement
Advertisement
ಈಗ ಚೆಂಡು ಹೈಕಮಾಂಡ್ ಅಂಗಳದಲ್ಲಿದೆ. ತಾನೇ ಕೈಕೊಂಡ ತೀರ್ಮಾನಕ್ಕೆ ತಾನೇ ಪರಿಹಾರ ಹುಡುಕಬೇಕಿರುವ ಅನಿವಾರ್ಯತೆಗೆ ಹೈಕಮಾಂಡ್ ಸಿಲುಕಿದೆ. ಮಂಡ್ಯ ಸಮಸ್ಯೆಗೆ ಹೈಕಮಾಂಡ್ ಪರಿಹಾರ ಸೂತ್ರ ಏನಿರಲಿದೆ ಅನ್ನುವ ಕುತೂಹಲ ಕೆರಳಿದೆ. ವರಿಷ್ಠರು ಕಾರ್ಯಕರ್ತರ ಮನವೊಲಿಕೆಗೆ ಸೂತ್ರ ರೂಪಿಸ್ತಾರಾ ಅಥವಾ ಅಭಿಯಾನ ನಡೆಸಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ತಾರಾ ಅನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k