ಅಲ್ಲಿ ಟಾರ್ಗೆಟ್ ಡಿಕೆಶಿ, ಇಲ್ಲಿ ಟಾರ್ಗೆಟ್ ಸಿದ್ದರಾಮಯ್ಯ- ಏನಿದು ಬಿಜೆಪಿ ತಂತ್ರ?

ಬೆಂಗಳೂರು: ಎರಡು ಅಸ್ತ್ರ, ಎರಡು ರಿಸಲ್ಟ್. ಬಿಜೆಪಿ (BJP) ಯಿಂದಲೇ ಪೊಲಿಟಿಕಲ್ ಸುಪಾರಿ. ಇದು ಎಲೆಕ್ಷನ್ ವಾರ್ ಫೀಲ್ಡ್ ಗೇಮ್ ಅಂದರೂ ತಪ್ಪಾಗಲಾರದು. ಸಿದ್ದರಾಮಯ್ಯ (Siddaramaiah), ಡಿಕೆಶಿ (DK Shivakumar) ಇಬ್ಬರ ಮೇಲೂ ಪ್ರತ್ಯೇಕ ಚಕ್ರವ್ಯೂಹ ರಚನೆಗೆ ಬಿಜೆಪಿ ಹೈಕಮಾಂಡ್ (BJP HighCommand) ನಿಂದಲೇ ಸಂದೇಶ ರವಾನೆ ಆಗಿದೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ಒಂದೆಡೆ ರಮೇಶ್ ಜಾರಕಿಹೊಳಿ (Ramesh Jarakiholi) ಯಿಂದ ಅಸ್ತ್ರ ಪ್ರಯೋಗ. 2023ರ ಚುನಾವಣೆಯ ಇಡೀ ಪ್ರಚಾರದಲ್ಲಿ ಡಿಕೆಶಿ ಪರ್ಸನಲ್ ಆಟ್ಯಾಕ್ ಗೆ ರಮೇಶ್ ಜಾರಕಿಹೊಳಿಗೆ ಸೂಚನೆ ಹೋಗಿದೆ ಎನ್ನಲಾಗಿದೆ. ಇನ್ನೊಂದು ಕಡೆ ಸಿದ್ದರಾಮಯ್ಯ ವಿರುದ್ಧ ಹಳೇ ಶಿಷ್ಯರಿಂದಲೇ ದಾಳಿ ತಂತ್ರಕ್ಕೂ ಪ್ಲಾನ್ ಆಗಿದೆ. ಸಿದ್ದರಾಮಯ್ಯ (Siddaramaiah) ಮೇಲೆ ಚಾರ್ಜ್ ಫ್ರೇಮ್ ಆಗ್ತಿಲ್ಲ, ಎಲೆಕ್ಷನ್ ಆಟ್ಯಾಕ್ ಕಠಿಣವಾಗಿರಬೇಕು. ಹಳೆಯ ಆರೋಪಗಳ ಬಗ್ಗೆ ಕಾಂಗ್ರೆಸ್ ತಲೆ ಕೆಡಿಸಿಕೊಳ್ಳುವಂತೆ ಮಾಡಿ, ಹಳೆಯದನ್ನ ಕೆದಕಿ ಎಂದು ಮಹಾ ಸಂದೇಶ ಬಿಜೆಪಿ ಹೈಕಮಾಂಡ್‍ನಿಂದ ರಾಜ್ಯ ಬಿಜೆಪಿಗೆ ರವಾನೆ ಆಗಿದೆಯಂತೆ.
ಈ ನಡುವೆ ಸಿದ್ದರಾಮಯ್ಯ ಟಾರ್ಗೆಟ್ ಮಾಡಲು ಹಳೇ ಶಿಷ್ಯ ಸುಧಾಕರ್ ಫಿಕ್ಸ್ ಮಾಡಿದ್ದು ರಾಷ್ಟ್ರೀಯ ನಾಯಕರೊಬ್ಬರು ಎನ್ನಲಾಗಿದೆ. ಸುಧಾಕರ್ (Sudhakar) ಅಸ್ತ್ರಕ್ಕೆ ಸಿದ್ದರಾಮಯ್ಯ ಡಿಸ್ಟರ್ಬ್ ಆಗಿಯೇ, ಗುರುವಾರ ಸುಧಾಕರ್ ಮೇಲೆ ಸಿದ್ದರಾಮಯ್ಯ ನಿಗಿನಿಗಿ ಕೆಂಡ ಕಾರಿದ್ರು ಎಂಬ ಮಾತುಗಳಿವೆ. ಇನ್ನೊಂದೆಡೆ ಡಿಕೆಶಿ ವಿರುದ್ಧ ಪರ್ಸನಲ್ ಆಟ್ಯಾಕ್‍ಗೆ ಇಳಿಯುವಂತೆ ರಮೇಶ್ ಜಾರಕಿಹೊಳಿಗೆ ಸೂಚನೆ ಹೋಗಿದೆ. ಇದನ್ನೂ ಓದಿ: ಶ್ರೀರಾಮನ ಹೆಸರು ಕೇಳಿದ್ರೆ ಕೆಲವರಿಗೆ ನಡುಕ ಶುರುವಾಗುತ್ತೆ: ಅಶ್ವಥ್ ನಾರಾಯಣ
ಬೆಳಗಾವಿ (Belagavi) ಭಾಗದಲ್ಲಿ ಷಡ್ಯಂತ್ರ ವಿಚಾರವನ್ನ ಭಾವನಾತ್ಮಕವಾಗಿ ಬಳಸುವಂತೆಯೂ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆ ಭಾವನಾತ್ಮಕವಾಗಿ ಬಳಸಿದ್ರೆ ಹೆಚ್ಚು ಅನುಕೂಲ ಆಗಬಹುದೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಹಾಗಾಗಿ ಇಬ್ಬರು ನಾಯಕರನ್ನ ಬಿಟ್ಟು ಸಿದ್ದರಾಮಯ್ಯ, ಡಿಕೆಶಿ ಮೇಲೆ ಟಾರ್ಗೆಟ್ ಶುರು ಮಾಡಿರುವ ಬಿಜೆಪಿ ತಂತ್ರಕ್ಕೆ ಡಿಕೆಶಿ, ಸಿದ್ದರಾಮಯ್ಯ ತಿರುಗುಬಾಣ ಪ್ರಯೋಗಿಸ್ತಾರಾ..? ಯಾವ ಹಂತ ತಲುಪುತ್ತೆ ಟಾರ್ಗೆಟ್ ಫೈಟ್..!? ಅನ್ನೋದನ್ನ ಕಾದುನೋಡಬೇಕಿದೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k