ಬಾಗಲಕೋಟೆ: ರಾಜಕೀಯ (Politics) ಸ್ಥಾನಮಾನಕ್ಕಾಗಿ ಇಂದು ಯಾರು ಎಲ್ಲಿ ಬೇಕಾದ್ರೂ ಸ್ಪರ್ಧಿಸಬಹುದು. ಈ ಮಧ್ಯೆ ಭವಾನಿ ರೇವಣ್ಣ (Bhavani Revanna) ನಾನೇ ಕ್ಯಾಂಡಿಡೇಟ್ ಅಂತಿದ್ದಾರೆ. ಅವರಿಗೇನು ಪಕ್ಷ ಇಲ್ವಾ? ಹೇಳೋರು ಕೇಳೋರು ಇಲ್ವಾ? ಎಂದು ಮಾಜಿ ಸಚಿವ ಈಶ್ವರಪ್ಪ (KS Eshwarappa) ಕಿಡಿಕಾರಿದ್ದಾರೆ.
`ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ’ ವಿಚಾರವಾಗಿ ಬಾಗಲಕೋಟೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಸ್ಥಾನಮಾನಕ್ಕಾಗಿ ಯಾರು ಎಲ್ಲಿ ಬೇಕಾದ್ರೂ ನಿಲ್ಲಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಎಲ್ಲಾ ನಾನೇ ನಿರ್ಧಾರ ಮಾಡ್ತೀನಿ- ದೊಡ್ಡಗೌಡ್ರ ಗುಟುರಿಗೆ ಎಲ್ಲರೂ ಗಪ್ ಚಿಪ್
ಒಂದು ಕಡೆ ಅನಿತಾ ಕುಮಾರಸ್ವಾಮಿ (Anita Kumaraswamy) ಅವರ ಮಗನನ್ನ ಚುನಾವಣಾ ಅಭ್ಯರ್ಥಿ ಅಂತಾ ಘೋಷಣೆ ಮಾಡ್ತಾರೆ. ಅವರವರೇ ತಮ್ಮನ್ನ, ತಮ್ಮ ಮಕ್ಕಳನ್ನ ಘೋಷಣೆ ಮಾಡಿದ್ರೆ ಹೇಗೆ? ಹೀಗಾದ್ರೆ ಒಂದು ಪಕ್ಷ ಅಂತಾ ಯಾಕೆ ಇರಬೇಕು? ಚುನಾವಣೆ ಸಮಿತಿ ಯಾಕೆ ಬೇಕು? ಇದು ಒಳ್ಳೆಯ ಬೆಳವಣಿಗೆ ಅಲ್ಲ, ಬಿಜೆಪಿಯಲ್ಲಿ ಇಂತಹ ವ್ಯವಸ್ಥೆ ಇಲ್ಲ. ಪಾರ್ಟಿ ಗುರುತಿಸಿ ಟಿಕೆಟ್ ನೀಡುತ್ತೇ ಎಲ್ಲರೂ ಶ್ರಮಿಸಿ ಗೆಲ್ಲುತ್ತೇವೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಭಯ ಹುಟ್ಟಿದೆ, ಹೀಗಾಗಿ ರಾಜ್ಯಕ್ಕೆ ಮೋದಿ-ಶಾರನ್ನು ಕರೆಸುತ್ತಿದ್ದಾರೆ : ಸಿದ್ದರಾಮಯ್ಯ
ಇದೇ ವೇಳೆ `ಸಿದ್ದರಾಮಯ್ಯ (Siddaramaiah) ಬಾದಾಮಿ ಕ್ಷೇತ್ರ ಬಿಟ್ರು, ನೀವೇನಾದ್ರೂ ಬಾದಾಮಿಗೆ ಬರ್ತಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗ್ಯಾಕೆ? ನಮ್ಮೂರು ಇಲ್ವಾ…? ನಮ್ಮೂರ ಜನ ನನಗೆ ತಂದೆ ತಾಯಿ ಇದ್ದಂಗೆ. 6 ಚುನಾವಣೆಗಳಲ್ಲಿ 5 ಸಲ ಗೆಲ್ಲಿಸಿದ್ದಾರೆ. ಗೆಲ್ಲಿಸಿದವರಿಗೆ ದ್ರೋಹ ಮಾಡಿ ಬೇರೆ ಕ್ಷೇತ್ರಕ್ಕೆ ಬರಲೇನು? ಅಲ್ಲಿ ಸೋತೆ, ಅಲ್ಲಿಯೇ ಗೆದ್ದೆ ಇದು ರಾಜಕಾರಣದಲ್ಲಿ ಇರಬೇಕು. ಆದ್ರೆ ಈಗ ಅವರನ್ನ ಬಿಟ್ಟು, ಇವರನ್ನ ಬಿಟ್ಟು ಇನ್ಯಾರು? ಅಂತಾ ಮಕ್ಕಳ ಆಟದಂತೆ ಆಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ಕುಟುಕಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k