ಬೆಂಗಳೂರು: ನೈಸ್ (NICE) ರಸ್ತೆ ಯೋಜನೆಗಾಗಿ ಜಮೀನು ಬಿಟ್ಟುಕೊಟ್ಟ ರೈತರಿಗೆ(Farmers) ಸೂಕ್ತ ನಿವೇಶನಗಳನ್ನು ಹಂಚಿಕೆ ಮಾಡಲು ರಾಜ್ಯ ಸರ್ಕಾರ(Karnataka Government) ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕುರಿತು ಇಂದು ನಡೆದ ಸಂಪುಟ ಸಭೆಯಲ್ಲಿ (Cabinet Meeting) ವಿಸ್ತೃತ ಚರ್ಚೆ ನಡೆದಿದ್ದು, ಬಾಕಿ ಇರುವ ಎಲ್ಲಾ ಫಲಾನುಭವಿ ರೈತರಿಗೆ ಮುಂದಿನ ಎರಡು ತಿಂಗಳ ಒಳಗಾಗಿ ನಿವೇಶನ ಹಂಚಿಕೆ ಮಾಡುವಂತೆ ನೈಸ್ ಸಂಸ್ಥೆಗೆ ಸರ್ಕಾರ ಕಟ್ಟುನಿಟ್ಟಿನ ಗಡುವು ವಿಧಿಸಿದೆ.
1 ಎಕರೆಗಿಂತ ಕಡಿಮೆ ಜಮೀನು ಕೊಟ್ಟವರಿಗೆ 30+40, 1ಕ್ಕಿಂತ ಹೆಚ್ಚು ಎಕರೆಗಿಂತ ಹೆಚ್ಚು ಜಮೀನು ಕೊಟ್ಟವರಿಗೆ 60+40 ಕೊಡಬೇಕು. 1453 ಜನರಿಗೆ ಸೈಟ್ ಕೊಡಬೇಕಿದ್ದು ಇಲ್ಲಿಯವರೆಗೆ ನೈಸ್ ಕೇವಲ 540 ಸೈಟ್ ನೀಡಿದೆ. ಇನ್ನೂ, 879 ಸೈಟ್ ಬೇಕು. ನೈಸ್ ವಶದಲ್ಲಿರುವ ಭೂಮಿಯಲ್ಲಿ ಎಲ್ಲಿ ಜಮೀನು ಲಭ್ಯವಿದೆಯೋ ಅಲ್ಲಿ ಸೈಟ್ ನೀಡಬೇಕು ಎಂಸು ಡಿಸಿಎಂ ಪರಮೇಶ್ವರ್ ತಿಳಿಸಿದ್ಧಾರೆ.
ರೈತರು ಸ್ವಯಂಪ್ರೇರಿತರಾಗಿ ಭೂಮಿ ನೀಡಿದ್ದ ಸಂದರ್ಭದಲ್ಲಿ ನಿವೇಶನ ಹಂಚಿಕೆ ಮಾಡುವುದಾಗಿ ಅಂದಿನ ಜಿಲ್ಲಾಧಿಕಾರಿಗಳು ಹಾಗೂ ನೈಸ್ ಕಂಪನಿ ಒಪ್ಪಿಕೊಂಡಿದ್ದವು. ಆದರೆ, ಅಂತಿಮ ‘ಫ್ರೇಮ್‌ವರ್ಕ್ ಅಗ್ರಿಮೆಂಟ್’ನಲ್ಲಿ ನಿವೇಶನ ನೀಡುವ ಷರತ್ತು ನಮೂದಾಗಿರಲಿಲ್ಲ. ಈ ಲೋಪವನ್ನು ಸರಿಪಡಿಸಿ ಸಂತ್ರಸ್ತ ರೈತರಿಗೆ ನ್ಯಾಯ ದೊರಕಿಸಲು ಈಗ 2 ತಿಂಗಳ ಡೆಡ್‌ಲೈನ್ ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಉದ್ಯಾನ ಭೂಮಿ ಬಳಕೆ ಮಸೂದೆ ಹಿಂಪಡೆದ ಸರ್ಕಾರ
3 ದಿನಗಳ ವಿಶೇಷ ಅಧಿವೇಶನ
ಇದೇ ವೇಳೆ ಸೆಪ್ಟೆಂಬರ್ 21 ರಿಂದ 23 ರವರೆಗೆ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲು ಸಂಪುಟ ಸಭೆ ತೀರ್ಮಾನಿಸಿದೆ. ಈ ಅಧಿವೇಶನದಲ್ಲಿ ಮುಖ್ಯವಾಗಿ ಕಸ್ತೂರಿ ರಂಗನ್ ವರದಿ ಜಾರಿ ವಿಚಾರ ಹಾಗೂ ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಸಮಗ್ರ ಚರ್ಚೆ ನಡೆಯಲಿದೆ.
