ಬಾಲಿವುಡ್ ನಲ್ಲಿ ಕರಣ್ ಜೋಹಾರ್ ನಡೆಸಿಕೊಡುತ್ತಿರುವ ಕಾಫಿ ವಿತ್ ಕರಣ್ ಕಾರ್ಯಕ್ರಮ ಬಿಸಿಬಿಸಿ ಸುದ್ದಿಗಳ ಕಾರಣದಿಂದಾಗಿ ಗಮನ ಸೆಳೆಯುತ್ತಿದೆ. ಸಿಲೆಬ್ರಿಟಿಗಳ ವೃತ್ತಿ ಬದುಕಿಗಿಂತ ಅವರ ಖಾಸಗಿ ಬದುಕಿನ ರಸನಿಮಿಷಗಳೇ ಹೆಚ್ಚು ಸದ್ದು ಮಾಡುತ್ತಿವೆ. ಹಾಗಾಗಿ ಸಿಲೆಬ್ರಿಟಿಗಳ ಒಂದು ರೀತಿಯಲ್ಲಿ ಭಯದಿಂದಲೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಾಗಿದೆ.
ಡೇಟಿಂಗ್, ಬಾಯ್ ಫ್ರೆಂಡ್, ಬ್ರೇಕ್ ಅಪ್, ಅಕ್ರಮ ಸಂಬಂಧ ಕೇವಲ ಇಂಥದ್ದೇ ಪ್ರಶ್ನೆಗಳನ್ನು ಕೇಳುವ ಮೂಲಕ ಕರಣ್ ಜೋಹಾರ್ ಅತಿಥಿಗಳಿಗೆ ಶಾಕ್ ಮೇಲೆ ಶಾಕ್ ಕೊಡುತ್ತಿದ್ದಾರೆ. ಕೆಲವರು ಈ ಕುರಿತು ಬೋಲ್ಡ್ ಆಗಿಯೇ ಉತ್ತರಿಸಿದ್ದರೆ, ಇನ್ನೂ ಕೆಲವರು ಮೌನಕ್ಕೆ ಜಾರುತ್ತಾರೆ. ಆದರೂ, ಕರಣ್ ಇಂತಹ ಪ್ರಶ್ನೆಗಳನ್ನು ಕೇಳದೇ ಬಿಡುವುದಿಲ್ಲ. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್
ಕೆಲ ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟಿಯರಾದ ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇವರಿಬ್ಬರೂ ಕುಚಿಕು ಗೆಳೆತಿಯರು ಆಗಿರುವುದರಿಂದ ಮತ್ತು ಬಾಲಿವುಡ್ ನಲ್ಲಿ ಸಣ್ಣ ವಯಸ್ಸಿನಲ್ಲೇ ಡೇಟಿಂಗ್ ಮಾಡಿದವರು ಎಂದು ಹಣೆಪಟ್ಟ ಕಟ್ಟಿಕೊಂಡಿರುವುದರಿಂದ ಇವರು ಏನೆಲ್ಲ ಮಾತನಾಡಲಿದ್ದಾರೆ ಎನ್ನುವ ಕುತೂಹಲವಂತೂ ನೋಡುಗರಿಗೆ ಇತ್ತು. ಅದಕ್ಕೆ ತಕ್ಕಂತೆ ಕರಣ್ ಪ್ರಶ್ನೆ ಕೇಳಿದ್ದಾರೆ.
ಅನೇಕ ಪ್ರಶ್ನೆಗಳನ್ನು ಈ ಜೋಡಿಗೆ ಕೇಳಿದ ಕರಣ್, ಅಚ್ಚರಿ ಎನ್ನುವಂತೆ ನೀವಿಬ್ಬರೂ ಒಂದೇ ಕುಟುಂಬದ ಹುಡುಗರ ಜೊತೆ ಡೇಟಿಂಗ್ ಮಾಡುತ್ತಿದ್ದೀರಿ ಅಲ್ಲವಾ ಎಂದು ಕರಣ್ ಕೇಳುತ್ತಾರೆ. ಈ ಪ್ರಶ್ನೆಯನ್ನು ಕನಸು ಮನಸಲ್ಲೂ ಎಣಿಸಿರದ ಸಾರಾ ಮತ್ತು ಜಾಹ್ನವಿ ಒಂದು ಕ್ಷಣ ಕಕ್ಕಾಬಿಕ್ಕಿಯಾಗುತ್ತಾರೆ. ಕೊನೆಗೆ ಆ ಹುಡುಗರು ಯಾರು ಎನ್ನುವುದನ್ನು ಕರಣ್ ಅವರೇ ಬಾಯ್ಬಿಡ್ತಾರೆ. ಮಹಾರಾಷ್ಟ್ರದ ಮಾಜಿ ಸಿಎಂ. ಶಿಂಧೆ ಅವರ ಮಕ್ಕಳಾದ ವೀರ ಪಹಾರಿ, ಶಿಖರ್ ಪಹಾರಿ ಹೆಸರು ಹೇಳುವ ಮೂಲಕ ಮತ್ತೆ ಅಚ್ಚರಿಗೆ ದೂಡುತ್ತಾರೆ ಕರಣ್. ಆದರೆ, ಈ ಕುರಿತು ಸಾರಾ ಆಗಲಿ, ಜಾಹ್ನವಿ ಆಗಲೇ ಏನೂ ಹೇಳದೇ ಮೌನಕ್ಕೆ ಜಾರುತ್ತಾರೆ.