ರಾಯಚೂರು: ಕಾರಹುಣ್ಣಿಮೆ ಹಿನ್ನೆಲೆ ರಾಯಚೂರು (Raichuru) ಜಿಲ್ಲೆಯ ಹಲವೆಡೆ ಮುಂಗಾರು ಸಾಂಸ್ಕೃತಿಕ ಹಬ್ಬವನ್ನ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ರಾಯಚೂರು ತಾಲೂಕಿನ ಆಶಾಪೂರ ಗ್ರಾಮದಲ್ಲಿ ಎತ್ತುಗಳಿಗೆ ಭಾರದ ಕಲ್ಲು ಎಳೆಯುವ ಸ್ಪರ್ಧೆ ಆಯೋಜಿಸಲಾಗಿತ್ತು.
ರಾಯಚೂರಿನ ಮಂಗಳವಾರಪೇಟೆ ಹಿರೇಮಠದ ಪೀಠಾಧಿಪತಿ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮಿ ಮುಂಗಾರು ಹಬ್ಬಕ್ಕೆ ಚಾಲನೆ ನೀಡಿದರು. ಹೊರಜಿಲ್ಲೆಗಳಿಂದ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ 15 ಜೋಡಿ ಎತ್ತುಗಳು ಒಂದು ಟನ್ ಕಲ್ಲನ್ನ ಎಳೆದು ತಮ್ಮ ಸಾಮರ್ಥ್ಯ ಪ್ರದರ್ಶಿಸಿದವು. ಇದನ್ನೂ ಓದಿ: ಪ್ರಿಯತಮೆ ಹಿಂದೂ… ನಾನು ಮುಸ್ಲಿಂ ಆಗಿ ಹುಟ್ಟಿದ್ದೇ ತಪ್ಪಾ? – ಸಂಜೀತ್ ಆಲಿ ಡೆತ್ ನೋಟ್
ಗ್ರಾಮದಲ್ಲಿ ಸತತ 20 ವರ್ಷಗಳಿಂದ ಮುಂಗಾರು ಹಬ್ಬವನ್ನ ಆಚರಿಸಿಕೊಂಡು ಬಂದಿದ್ದು, ಈ ಭಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ಎತ್ತುಗಳ ಮಾಲೀಕರಿಗೆ ಸನ್ಮಾನಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳ ರೈತರು ಮುಂಗಾರು ಹಬ್ಬದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಈ ಭಾರಿ ಮುಂಗಾರು ಉತ್ತಮವಾಗಿರಲಿ ಅಂತ ದೇವರಲ್ಲಿ ಪ್ರಾರ್ಥಿಸಿದರು.
