ಕಿರುತೆರೆ ಲೋಕದಲ್ಲಿ ಸಾಲು ಸಾಲು ಕಲಾವಿದರು ಹಸೆಮಣೆ ಏರುತ್ತಿದ್ದಾರೆ. ಇತ್ತೀಚೆಗಷ್ಟೇ `ನಾಗಿಣಿ 2′ ಖ್ಯಾತಿಯ ನಿನಾದ್ ಕೂಡ ಅದ್ದೂರಿಯಾಗಿ ಮದುವೆ ಆಗಿದ್ದರು. ಈಗ `ರಾಜ ರಾಣಿ’ ಧಾರಾವಾಹಿ ಮೂಲಕ ಗುರುತಿಸಿಕೊಂಡಿದ್ದ ನಟ ಶಶಿ ಹೆಗ್ಡೆ ಮತ್ತು ಲಾವಣ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Advertisement
ಖಾಸಗಿ ವಾಹಿನಿಯ `ದಾಸಪುರಂದರ’ ಸೀರಿಯಲ್‌ನ ಪದ್ಮಾ ಪಾತ್ರಧಾರಿ ಲಾವಣ್ಯ, ನಟ ಶಶಿ ಹೆಗ್ಡೆ ಅವರನ್ನು ವಿವಾಹವಾಗಿದ್ದಾರೆ. ಗುರುಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ರಾಜ ರಾಣಿಯಿಂದ ಪರಿಚಯವಾದ ಸ್ನೇಹಿತರಾಗಿದ್ದ ಶಶಿ ಮತ್ತು ಲಾವಣ್ಯ ಪರಸ್ಪರ ಪ್ರೀತಿಸುತ್ತಿದ್ದರು. ನಾಲ್ಕು ವರ್ಷಗಳ ಪ್ರೀತಿಯ ಪಯಣದ ನಂತರ ಹಸೆಮಣೆ ಏರಿದ್ದಾರೆ.
Advertisement
View this post on Instagram
Advertisement
ಇಬ್ಬರ ಪ್ರಿ ವೆಡ್ಡಿಂಗ್ ಫೋಟೋಶೂಟ್ ಕೂಡ ವೈರಲ್ ಆಗಿದೆ ಫೋಟೋಗಳನ್ನು ಸೇರ್ ಮಾಡಿ ನಟ ಶಶಿ ಸಾಮಾಜಿಕ ಜಾಲತಾಣದಲ್ಲಿ `ನಾಲ್ಕು ವರ್ಷಗಳಿಂದ ಕಂಡ ಕನಸು ನನಸಾಗಿದೆ. ನಮ್ಮ ಮನೆಯ ಅರಸಿ, ನೀವೆಲ್ಲರೂ ನಮಗೆ ಹರಸಿ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಾರಕ್ಕೆ ಹತ್ತತ್ತು ಸಿನಿಮಾಗಳು ರಿಲೀಸ್ : ಥಿಯೇಟರ್ ಮಾತ್ರ ಖಾಲಿ ಖಾಲಿ
Advertisement
View this post on Instagram
ಇನ್ನು ಕಿರುತೆರೆಯ ಮತ್ತೋರ್ವ ನಟ ವಿಜಯ್ ಕುಮಾರ್ ಕೂಡ ಸರಳವಾಗಿ ಮದುವೆ ಆಗಿದ್ದಾರೆ. ಟಿವಿ ಲೋಕದ ಜನಪ್ರಿಯ ಧಾರಾವಾಹಿ ಲಕ್ಷ್ಮಿ ಬಾರಮ್ಮ ಖ್ಯಾತಿಯ ರಾಮು ಕೂಡ ಹಸೆಮಣೆ ಏರಿದ್ದಾರೆ.