ಮುಂಬೈ: ಕೊರೊನಾ ಅಷ್ಟೇನು ಕೆಟ್ಟದಲ್ಲ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಸೋದರಿ ರಂಗೋಲಿ ಚಾಂಡೆಲ್ ಟ್ವೀಟ್ ಮಾಡಿದ್ದಾರೆ.
ಕೊರೊನಾ ವೈರಸ್ ದಿಂದಾಗ ಬಾಲಿವುಡ್ ಸ್ತಬ್ಧವಾಗಿದೆ. ಕೊರೊನಾ ವೈರಸ್ ಭೀತಿಯಿಂದಾಗ ವಿದೇಶಗಳಲ್ಲಿ ನಡೆಯಬೇಕಿದ್ದ ಬಹುತೇಕ ಸಿನಿಮಾ ಚಿತ್ರೀಕರಣ ರದ್ದುಗೊಂಡಿವೆ. ಇತ್ತ ಸಿನಿಮಾ ಮಂದಿರಗಳನ್ನು ರಾಜ್ಯ ಸರ್ಕಾರಗಳು ಬಂದ್ ಮಾಡಿವೆ. ಜನ ಸಹ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಒಂದು ರೀತಿ ಚಿತ್ರರಂಗವೇ ಬಂದ್ ಆಗಿದೆ. ಸಿನಿಮಾ ಶೂಟಿಂಗ್ ರದ್ದುಗೊಂಡ ಹಿನ್ನೆಲೆಯಲ್ಲಿ ಬಾಲಿವುಡ್ ಕ್ವೀನ್ ಕಂಗನಾ ರಣಾವತ್, ಸ್ವಂತ ಊರು ಮನಾಲಿಗೆ ತೆರಳಿದ್ದಾರೆ.
- Advertisement 2
https://twitter.com/Rangoli_A/status/1239803878880600064
- Advertisement 3
ಸೋದರಿ ಮನೆಗೆ ಬಂದು ತಮ್ಮ ಪುತ್ರ ಪೃಥ್ವಿ ಜೊತೆಗಿನ ಫೋಟೋವನ್ನು ಟ್ವಿಟ್ಟರ್ ನಲ್ಲಿ ರಂಗೋಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಚಿಕ್ಕಮ್ಮ ಮನಾಲಿಗೆ ಬರುತ್ತಿದ್ದಂತೆ ಮಗ ಪೃಥ್ವಿ ತನಗೆ ಚಾಕ್ಲೆಟ್ ಸಿಗುತ್ತೆ ಅಂತ ಥ್ರಿಲ್ ಆಗಿದ್ದ. ಕೊರೊನಾ ವೈರಸ್ ನಿಂದಾಗಿ ಕಂಗನಾ ಮನೆಗೆ ಬಂದ್ಳು. ಹಾಗಾಗಿ ಕೊರೊನಾ ಏನು ಅಷ್ಟೊಂದು ಕೆಟ್ಟದಲ್ಲ. ಈ ಬಾರಿ ಹುಟ್ಟುಹಬ್ಬದಂದು ಕುಟುಂಬದ ಜೊತೆ ಇರಲಿದ್ದಾಳೆ ಎಂದು ರಂಗೋಲಿ ಬರೆದುಕೊಂಡಿದ್ದಾರೆ.
- Advertisement 4
ಸದಾ ಸಿನಿಮಾದಲ್ಲಿ ಬ್ಯುಸಿಯಾಗಿರುವ ಕಂಗನಾ ಕುಟುಂಬಸ್ಥರ ಜೊತೆಯಲ್ಲಿ ಹೆಚ್ಚು ಇರಲ್ಲ. ಕೊರೊನಾದಿಂದಾಗಿ ಊರು ಸೇರಿರುವ ಕಂಗಾನ ಮಾರ್ಚ್ 23ರಂದು ತಮ್ಮ ಹುಟ್ಟುಹಬ್ಬವನ್ನ ಕುಟುಂಬಸ್ಥರ ಜೊತೆಯಲ್ಲಿಯೇ ಆಚರಿಸಿಕೊಳ್ಳಲಿದ್ದಾರೆ.