ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone) ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ (Amitabh Bachchan) ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಬಿಗ್ ಬಿ ಲುಕ್ ಹೇಗಿರಲಿದೆ ಎಂಬುದರ ಝಲಕ್ ಹಂಚಿಕೊಂಡಿದೆ ಚಿತ್ರತಂಡ. ಅಮಿತಾಭ್ ಪಾತ್ರದ ಪೋಸ್ಟರ್ ಇದೀಗ ರಿವೀಲ್ ಆಗಿದೆ.
ಸ್ಟಾರ್ ಕಲಾವಿದರ ದಂಡೇ ಇರುವ ‘ಕಲ್ಕಿ’ ಸಿನಿಮಾದಲ್ಲಿ ಹಿರಿಯ ನಟ ಬಿಗ್ ಬಿ ಪಾತ್ರದ ಪೋಸ್ಟರ್ ರಿವೀಲ್ ಮಾಡುವ ಮೂಲಕ ನಿರೀಕ್ಷೆ ಹುಟ್ಟಿಸಿದ್ದಾರೆ. ದೇವಸ್ಥಾನದ ಎದುರು ಬಿಗ್ ಬಿ ಕುಳಿತಿದ್ದಾರೆ. ಕಣ್ಣಿಗೆ ಸೂರ್ಯ ಕಿರಣ ಬಿದ್ದಿದೆ. ಮೈತುಂಬಾ ಬಟ್ಟೆ ಸುತ್ತಿಕೊಂಡಿದ್ದಾರೆ. ಕಣ್ಣಿನ ನೋಟ ಖಡಕ್ ಆಗಿದೆ. ಪೋಸ್ಟರ್ನಲ್ಲಿ ಈಗ ಸಮಯ ಬಂದಿದೆ ಎಂದು ಅಡಿಬರಹ ನೀಡಿದ್ದಾರೆ. ಅವರ ಕ್ಯಾರೆಕ್ಟರ್ ಕುರಿತು ಇಂದು ಸಂಜೆ (ಏ.21) ಮತ್ತಷ್ಟು ಮಾಹಿತಿ ಸಿಗಲಿದೆ.
- Advertisement 2
𝐓𝐡𝐞 𝐭𝐢𝐦𝐞 𝐡𝐚𝐬 𝐜𝐨𝐦𝐞 𝐭𝐨 𝐤𝐧𝐨𝐰 𝐰𝐡𝐨 𝐡𝐞 𝐢𝐬!
Exclusively on @StarSportsIndia at 7:15 PM on April 21st.#Kalki2898AD @SrBachchan @ikamalhaasan #Prabhas @deepikapadukone @nagashwin7@DishPatani @Music_Santhosh @VyjayanthiFilms @Kalki2898AD #IPLonStar pic.twitter.com/pFtsBYK9sR
— Kalki 2898 AD (@Kalki2898AD) April 20, 2024
- Advertisement 3
ನಾಗ್ ಅಶ್ವೀನ್ ನಟನೆಯ ಸಿನಿಮಾದಲ್ಲಿ ಅಮಿತಾಭ್, ಕಮಲ್ ಹಾಸನ್, ದಿಶಾ ಪಟಾನಿ ಸೇರಿದಂತೆ ಹಲವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಇದನ್ನೂ ಓದಿ:ಡಾ.ಮಂಜುನಾಥ್ ಪರ ಇಂದು ಪವನ್ ಕಲ್ಯಾಣ್ ಪ್ರಚಾರ
- Advertisement 4
ಪ್ರಭಾಸ್, ದೀಪಿಕಾ ಪಡುಕೋಣೆ ಮೊದಲ ಬಾರಿಗೆ ನಟಿಸಿರುವ ಈ ಸಿನಿಮಾ ಸದ್ಯದಲ್ಲೇ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.