ಕೊಪ್ಪಳ: ಅಂಜನಾದ್ರಿ ಬೆಟ್ಟದ (Anjanadri Hills) ಆಂಜನೇಯ ಸ್ವಾಮಿಗೆ ದೇಣಿಗೆಯಾಗಿ ಬಂದ ಆಭರಣಗಳು ಚಿನ್ನ ಲೇಪಿತವಾಗಿದ್ದು, 2.50 ಕೋಟಿ ರೂ. ಮೌಲ್ಯದ ಖರೀದಿ ಮಾಡಿರುವುದರ ಬಗ್ಗೆ ಉದ್ಯಮಿ ಬಿಲ್ ನೀಡಿದ್ದಾರೆ.
ಕಿಷ್ಕಿಂದಾ ಅಂಜನಾದ್ರಿಯ ಆಂಜನೇಯ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿ ಮಹೇಶ ರೆಡ್ಡಿ ಎಂಬುವವರು ಇತ್ತೀಚೆಗಷ್ಟೇ ಬಂದು ರ‍್ಜರಿ ದೇಣಿಗೆ ನೀಡಿದ್ದರು. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಆಪ್ತ ಗೆಳೆಯರೂ ಆಗಿರುವ ಮಹೇಶ ರೆಡ್ಡಿ, ಆಂಜನೇಯ ಸ್ವಾಮಿಗೆ ಪ್ರಭಾವಳಿ, ಚಕ್ರ ಹಾಗೂ ಗದೆಯನ್ನು ದಾನವಾಗಿ ರ‍್ಪಿಸಿದ್ದರು. ಈ ಆಭರಣಗಳ ಮೌಲ್ಯ ಬರೋಬ್ಬರಿ 2.50 ಕೋಟಿ ರೂ. ಮೌಲ್ಯದ ಬಂಗಾರದ ಆಭರಣಗಳು ಎಂದು ಸ್ವತಃ ಜನಾರ್ದನ ರೆಡ್ಡಿ ಅವರೇ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಇದನ್ನೂ ಓದಿ: ಅಂಜನಾದ್ರಿಯ ಆಂಜನೇಯನಿಗೆ 2.5 ಕೋಟಿ ಮೌಲ್ಯದ ಆಭರಣ ದೇಣಿಗೆ ನೀಡಿದ ಉದ್ಯಮಿ
ದೇಣಿಗೆ ನೀಡುವ ವೇಳೆ ಯಾವುದೇ ಅಧಿಕೃತ ಬಿಲ್ ಅಥವಾ ದಾಖಲೆಗಳನ್ನು ಉದ್ಯಮಿ ನೀಡಿರಲಿಲ್ಲ. ಉದ್ಯಮಿಯ ಮನವಿಯ ಮೇರೆಗೆ ಎರಡು ದಿನಗಳ ಕಾಲ ಈ ಆಭರಣಗಳನ್ನು ಆಂಜನೇಯನ ಅಲಂಕಾರಕ್ಕೆ ಬಳಸಲಾಗಿತ್ತು. ಅದಾದ ಬಳಿಕ ಆಭರಣಗಳನ್ನು ಖಜಾನೆಯಲ್ಲಿಡುವಾಗ ಅದರ ದಾಖಲೆಗಳ ಅವಶ್ಯಕತೆಯಿತ್ತು. ಹೀಗಾಗಿ ಉದ್ಯಮಿ ನೋಟಿಸ್ ನೀಡಲಾಗಿತ್ತು. ಅದರಂತೆ ಉದ್ಯಮಿ ಮಹೇಶ್ ರೆಡ್ಡಿಯವರು ಖರೀದಿಯ ಬಿಲ್ ರಿಲೀಸ್ ಮಾಡಿದ್ದಾರೆ.
ನೀಡಿದ ಬಿಲ್ ಪ್ರಕಾರ, 2,20,42,1400 ಗ್ರಾಂ ಬಂಗಾರ ಖರೀದಿ ಮಾಡಿರೋದಾಗಿ ತಿಳಿಸಿದ್ದಾರೆ. ಏ.28ರಂದು ಬಂಗಾರ ಖರೀದಿ ಮಾಡಿ, ಮೇ 08ರಂದು ದೇವಸ್ಥಾನಕ್ಕೆ ದೇಣಿಗೆ ನೀಡಿದ್ದೇನೆ ಎಂದಿದ್ದಾರೆ. ಇದನ್ನು ಜಿಲ್ಲಾಡಳಿತ ಪರಿಶೀಲನೆ ನಡೆಸಿದ್ದು, ಸುಂದರ ಕಲಾಕೃತಿ ಹೊಂದಿರುವ ಪ್ರಭಾವಳಿ, ಚಕ್ರ, ಆಂಜನೇಯನ ಗದೆ ಸೇರಿ ಒಟ್ಟು 1 ಕೆ.ಜಿ 400 ಗ್ರಾಂ ಚಿನ್ನ ಲೇಪಿನ ಆಭರಣಗಳು ಎಂದು ತಿಳಿದುಬಂದಿದೆ.
ಇನ್ನೂ ಭಾನುವಾರ (ಮೇ 10) ಕಿಷ್ಕಿಂದಾ ಅಂಜನಾದ್ರಿ ದೇವಾಲಯದ ಆಡಳಿತಾಧಿಕಾರಿ ಹಾಗೂ ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಉದ್ಯಮಿ ಮಹೇಶರೆಡ್ಡಿ ಕುಟುಂಬದವರು ಸರ‍್ಪಣೆ ಮಾಡಿರುವ ಪ್ರಭಾವಳಿ, ಕಿರೀಟ, ಗದೆ ಸೇರಿದಂತೆ 12 ಸಾಮಾನುಗಳು ಚಿನ್ನ ಲೇಪಿತ ತಾಮ್ರದಿಂದ ಕೂಡಿದೆ. ಮುಜರಾಯಿ ಮತ್ತು ಧರ‍್ಮಿಕ ದತ್ತಿ ಇಲಾಖೆಯ ನಿಯಮದಂತೆ ದಾನಿಗಳು ದೇವಾಲಯಗಳಿಗೆ ನೀಡಿದ ಚಿನ್ನಾಭರಣ, ಬೆಳ್ಳಿ, ವಜ್ರಾ, ವೈಢರ‍್ಯ ಇತರೆ ಅಮೂಲ್ಯ ವಸ್ತುಗಳ ಮೌಲ್ಯಮಾಪನ ಮಾಡಿ ರಸೀದಿ ಸಮೇತ ದಾಖಲೆಗಳನ್ನು ಇಡಬೇಕಾಗುತ್ತದೆ. ಆದ್ದರಿಂದ ಲೋಹ ಶೋಧಕರು ಮತ್ತು ಮೌಲ್ಯಮಾಪನ ಮಾಡುವವರಿಂದ ಮೌಲ್ಯ ಮಾಡಿಸಿ ದಾಖಲೆ ಇರಿಸಲಾಗುತ್ತದೆ ಎಂದಿದ್ದರು.ಇದನ್ನೂ ಓದಿ: ಬಿಜೆಪಿ ನಾಯಕರನ್ನ ಬ್ಲ್ಯಾಕ್‌ಮೇಲ್ ಮಾಡೋಕೆ ಮಾಡ್ತಿದ್ದಾರೆ, ಇದು ಅಭಿಮಾನೋತ್ಸವ ಅಲ್ಲ, ಬ್ಲ್ಯಾಕ್‌ಮೇಲೋತ್ಸವ: ಯತ್ನಾಳ್

