ಬಾಲಿವುಡ್ ನಟಿ ಶೆಹನಾಜ್ ಗಿಲ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸಿದ್ಧಾರ್ಥ್ ಶುಕ್ಲಾ ಜೊತೆ ಗಳೆತನ ವಿಚಾರವಾಗಿ ಹೈಲೈಟ್ ಆಗಿದ್ದರು. ನಂತರ ಸಿದ್ಧಾರ್ಥ್ ಸಾವಿನ ನಂತರ ಇದೀಗ ಚೇತರಿಸಿಕೊಂಡಿರುವ ನಟಿ, ಸದ್ಯ ಬಿಟೌನ್‌ನ ಖ್ಯಾತ ಕೊರಿಯೋಗ್ರಾಫರ್ ಜೊತೆ ಶೆಹನಾಜ್ ಹೆಸರು ತಳಕು ಹಾಕಿಕೊಂಡಿದೆ.
Advertisement
ಬಿಗ್ ಬಾಸ್ ಸೀಸನ್ 13ರಲ್ಲಿ ಗಮನ ಸೆಳೆದ ಸ್ಪರ್ಧಿ ಶೆಹನಾಜ್ ಈಗ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸಿದ್ಧಾರ್ಥ್ ಶುಕ್ಲಾ ಮತ್ತು ಶೆಹನಾಜ್ ಪರಿಚಿತರಾಗಿ ಈ ಶೋ ಬಳಿಕವೂ ಆ ಸ್ನೇಹ ಮುಂದುವರೆದು ಪ್ರೀತಿಯಲ್ಲಿದ್ದರು. ಸಿದ್ಧಾರ್ಥ್ ಸಾವಿನ ನಂತರ ಕ್ಯಾಮೆರಾ ಕಣ್ಣಿಂದ ದೂರವಿದ್ದ ನಟಿ, ಈಗ ಮತ್ತೋರ್ವ ಖ್ಯಾತ ಕೊರಿಯೋಗ್ರಾಫರ್ ರಾಘವ ಜತೆ ಶೆಹನಾಜ್ ಗಿಲ್ ಹೆಸರು ಕೇಳಿ ಬರುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ರಾಜಸ್ಥಾನ ಬೆಡಗಿ ಕಿರಣ್ ಯೋಗೇಶ್ವರ್ ಔಟ್
Advertisement
Advertisement
ನಟ ಸಿದ್ಧಾರ್ಥ್ ಶುಕ್ಲಾ ಸಾವಿನ ನೋವಿನಿಂದ ಹೊರ ಬಂದಿರುವ ಶೆಹನಾಜ್ ಈಗ ರಾಘವ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ವಿಚಾರ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.