ಟೆಹ್ರಾನ್: ಅಮೆರಿಕ ವಿರುದ್ಧ ಇರಾನ್ನ ಪ್ರತೀಕಾರದ ದಾಳಿ ಮುಂದುವರಿದಿದ್ದು, ಅಮೆರಿಕದ ವಿಮಾನವಾಹಕ ನೌಕೆ ಹಾಗೂ ಮತ್ತೊಂದು ಯುದ್ಧನೌಕೆಯ (US Warships) ಮೇಲೆ ಹಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನ ಹಾರಿಸಿರುವುದಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಏರೋಸ್ಪೇಸ್ ಫೋರ್ಸ್ ಹೇಳಿಕೊಂಡಿದೆ.
ಇರಾನ್ನ (Iran) ನೌಕೆಗಳ ಮೇಲೆ ದಾಳಿ ಹಾಗೂ ನೌಕಾ ದಿಗ್ಬಂಧನದಲ್ಲಿ ಭಾಗಿಯಾಗಿದ್ದ ಕಾರಣ ಈ ಎರಡು ಅಮೆರಿಕದ ಯುದ್ಧನೌಕೆಗಳನ್ನ ಗುರಿಯಾಗಿಸಲಾಗಿದೆ ಎಂದು IRGC ಹೇಳಿದೆ.
It’s simple: if Iran shoots at U.S. ships, we will destroy (and sink) their oil tankers. All they have to do is not shoot at @USNavy.
Iran’s oil tanker fleet is defenseless — Iran has no navy or air force. Our planes, ships & subs can strike them all, in @CENTCOM & @USPACOM. https://t.co/lr5TaxloBw
— Pete Hegseth (@PeteHegseth) September 5, 2026
ಇರಾನ್ ಸರ್ಕಾರಿ ಮಾಧ್ಯಮ ಬಿಡುಗಡೆ ಮಾಡಿದ ಹೇಳಿಕೆ ಅನ್ವಯ, ಇರಾನ್ನ ಹಡಗುಗಳ ವಿರುದ್ಧ ಅಮೆರಿಕ (America) ಮುಂದುವರಿಸಿರುವ ಶತ್ರುತ್ವದ ಕ್ರಮಗಳ ನಡುವೆಯೇ ದಾಳಿ ನಡೆಸಲಾಗಿದೆ.
ಇರಾನ್ನ ಹಡಗುಗಳಿಗೆ ತೊಂದರೆ ನೀಡುತ್ತಿದ್ದ ಹಾಗೂ ನೌಕಾ ದಿಗ್ಬಂಧನದಲ್ಲಿ ಭಾಗಿಯಾಗಿದ್ದ ಅಮೆರಿಕದ ಸೇನೆಯ ವಿಮಾನವಾಹಕ ನೌಕೆ ಮತ್ತು ಮತ್ತೊಂದು ಯುದ್ಧನೌಕೆಯ ಮೇಲೆ IRGC ಏರೋಸ್ಪೇಸ್ ಫೋರ್ಸ್ ಹಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿದೆ. ದಾಳಿಯಿಂದ ಹಾನಿಗೊಳಗಾದ 2 ಯುದ್ಧನೌಕೆಗಳು ಮತ್ತೊಂದು ದಾಳಿಯ ಭೀತಿಯಿಂದ ಸಂಘರ್ಷದ ಪ್ರದೇಶದಿಂದ ಹಿಂದೆ ಸರಿದಿವೆ ಎಂದು IRGC ತಿಳಿಸಿದೆ.
ಈ ಬೆಳವಣಿಗೆ ಅಮೆರಿಕವು ಇರಾನ್ನ ತೈಲ ಟ್ಯಾಂಕರ್ಗಳ (Oil Tankers) ಮೇಲೆ ದಾಳಿ ನಡೆಸಿದ ಬಳಿಕ ಹಾಗೂ ಇರಾನ್ ಅಮೆರಿಕಕ್ಕೆ ಸಂಬಂಧಿಸಿದ ಹಡಗುಗಳನ್ನ ಗುರಿಯಾಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಮತ್ತೆ ಹೆಚ್ಚುತ್ತಿರುವ ಮಿಲಿಟರಿ ಉದ್ವಿಗ್ನತೆಯ ನಡುವೆ ನಡೆದಿದೆ.
ತೈಲ ಟ್ಯಾಂಕರ್ಗಳ ಮೇಲೂ ಇರಾನ್ ದಾಳಿ
ಇದಕ್ಕೂ ಮೊದಲು, ಆಯಕಟ್ಟಿನ ಹಾರ್ಮುಜ್ ಜಲಸಂಧಿಯಲ್ಲಿ ‘ಅನುಮತಿಯಿಲ್ಲದ ಮಾರ್ಗ’ದಲ್ಲಿ ಸಂಚರಿಸುತ್ತಿದ್ದ 3 ತೈಲ ಟ್ಯಾಂಕರ್ಗಳ ಮೇಲೆ ದಾಳಿ ನಡೆಸಿರುವುದಾಗಿ IRGC ನೌಕಾಪಡೆ ತಿಳಿಸಿತ್ತು. ಅಮೆರಿಕಕ್ಕೆ ಸಂಬಂಧಿಸಿದ ಇತರ 3 ಹಡಗುಗಳನ್ನೂ ವಿವಿಧ ಪ್ರದೇಶಗಳಲ್ಲಿ ಗುರಿಯಾಗಿಸಿಕೊಂಡಿರುವುದಾಗಿ ಅದು ಹೇಳಿಕೊಂಡಿದೆ.
ತೈಲ ಟ್ಯಾಂಕರ್ಗಳನ್ನ ಮುಳುಗಿಸುವುದಾಗಿ ಎಚ್ಚರಿಕೆ
ಇರಾನ್ ಅಮೆರಿಕದ ನೌಕಾಪಡೆಗೆ ಸೇರಿದ ಹಡಗುಗಳ ಮೇಲೆ ದಾಳಿ ನಡೆಸಿದರೆ, ಇರಾನ್ನ ತೈಲ ಟ್ಯಾಂಕರ್ಗಳನ್ನು ನಾಶಪಡಿಸಿ ಮುಳುಗಿಸುವುದಾಗಿ ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಎಚ್ಚರಿಕೆ ನೀಡಿದ್ದಾರೆ.

ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಹೆಗ್ಸೆತ್, ಅಮೆರಿಕದ ಸೆಂಟ್ರಲ್ ಕಮಾಂಡ್ ಕಮಾಂಡರ್ ಅಡ್ಮಿರಲ್ ಬ್ರಾಡ್ ಕೂಪರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಅಮೆರಿಕದ ಹಡಗುಗಳ ಮೇಲೆ ದಾಳಿ ನಡೆಸಿದರೆ ಇರಾನ್ಗೆ ಇನ್ನಷ್ಟು ದೊಡ್ಡ ಆರ್ಥಿಕ ಬೆಲೆ ತೆರಬೇಕಾಗುತ್ತದೆ. ನಾವು ಅವರ ತೈಲ ಟ್ಯಾಂಕರ್ಗಳನ್ನು ನಾಶಪಡಿಸುತ್ತೇವೆ ಮತ್ತು ಸಮುದ್ರದಲ್ಲಿ ಮುಳುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ–ಇರಾನ್ ನಡುವೆ ಹೆಚ್ಚುತ್ತಿರುವ ಈ ಸಂಘರ್ಷದ ಪರಿಣಾಮವಾಗಿ ಹಾರ್ಮುಜ್ ಜಲಸಂಧಿ ಹಾಗೂ ಈ ಪ್ರದೇಶದ ತೈಲ ಸಾಗಣೆ ಮಾರ್ಗಗಳ ಮೇಲಿನ ಆತಂಕ ಮತ್ತಷ್ಟು ಹೆಚ್ಚಾಗಿದೆ.
